ಒಂದೇ ದಿನ ದೇಶದಲ್ಲಿ 10600 ಜನಕ್ಕೆ ವೈರಸ್‌!

By Kannadaprabha News  |  First Published Jun 6, 2020, 8:17 AM IST

ಒಂದೇ ದಿನ ದೇಶದಲ್ಲಿ 10600 ಜನಕ್ಕೆ ವೈರಸ್‌!| 334 ಮಂದಿ ಸಾವು| ನಿನ್ನೆ ಕೊರೋನಾ ಡಬಲ್‌ ದಾಖಲೆಯ ಅಬ್ಬರ| ಸೋಂಕಿತರ ಸಂಖ್ಯೆ 2.26 ಲಕ್ಷಕ್ಕೇರಿಕೆ| ಮೃತರ ಸಂಖ್ಯೆ 6557ಕ್ಕೆ ಜಿಗಿತ


ನವದೆಹಲಿ(ಜೂ.06): ಲಾಕ್‌ಡೌನ್‌ ಸಡಿಲಗೊಂಡು, ಜನಜೀವನ ಬಹುತೇಕ ಸಹಜಸ್ಥಿತಿಯತ್ತ ಮರಳುತ್ತಿರುವಾಗಲೇ ಮಾರಕ ಕೊರೋನಾ ವೈರಸ್‌ ತನ್ನ ಅಬ್ಬರ ತೀವ್ರಗೊಳಿಸಿದೆ. ದೇಶದಲ್ಲಿ ಶುಕ್ರವಾರ ಒಂದೇ ದಿನ 10649 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದರೆ, ಸೋಂಕಿನಿಂದಾಗಿ 334 ಮಂದಿ ಅಸುನೀಗಿದ್ದಾರೆ. ಒಂದೇ ದಿನ ಇಷ್ಟೊಂದು ಸಂಖ್ಯೆಯ ಸೋಂಕು, ಸಾವು ವರದಿಯಾಗಿರುವುದು ಇದೇ ಮೊದಲು. ಹೀಗಾಗಿ ಕೊರೋನಾ ತನ್ನ ಗರಿಷ್ಠ ಮಟ್ಟದತ್ತ ಭಾರತದಲ್ಲಿ ದಾಪುಗಲಿಡುತ್ತಿದೆಯಾ ಎಂಬ ಅನುಮಾನ ಮೂಡತೊಡಗಿದೆ.

ಈ ದಾಖಲೆ ಏರಿಕೆಯೊಂದಿಗೆ ದೇಶದಲ್ಲಿ ವೈರಸ್‌ ಸೋಂಕಿಗೆ ತುತ್ತಾವರ ಸಂಖ್ಯೆ 2,28,038ಕ್ಕೆ ಹೆಚ್ಚಳವಾಗಿದೆ. ಮೃತರ ಸಂಖ್ಯೆ 6557ಕ್ಕೇರಿಕೆಯಾಗಿದೆ. ಈವರೆಗೆ 1,12,318 ಮಂದಿ ಗುಣಮುಖರಾಗಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆಯ ಅಂಕಿ-ಅಂಶಗಳು ತಿಳಿಸಿವೆ.

Tap to resize

Latest Videos

ರಾಜ್ಯದಲ್ಲಿ ಏರುತ್ತಿರುವ ಕೊರೋನಾ ಕೇಸ್ ನಡುವೆ ಬಯಲಾಯ್ತು ಶಾಕಿಂಗ್ ಮಾಹಿತಿ!

ಈ ನಡುವೆ, ಕೇಂದ್ರ ಸರ್ಕಾರ ಶುಕ್ರವಾರ ಬೆಳಗ್ಗೆ ನೀಡಿರುವ ಮಾಹಿತಿಯ ಪ್ರಕಾರ, ಒಂದು ದಿನದಲ್ಲಿ 9,851 ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಭಾರತದಲ್ಲಿ ಕೊರೋನಾ ವೈರಸ್‌ ಪ್ರಕರಣಗಳ ಸಂಖ್ಯೆ 2,26,770ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಒಂದೇ ದಿನ 273 ಮಂದಿ ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ 6,348ಕ್ಕೆ ಏರಿಕೆ ಕಂಡಿದೆ. ಇನ್ನೊಂದೆಡೆ 1,09,461 ರೋಗಿಗಳು ಸಂಪೂರ್ಣ ಗುಣಮುಖರಾಗಿದ್ದಾರೆ. ಹೀಗಾಗಿ 1,10,960 ರೋಗಿಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಇಟಲಿ ಹಿಂದಿಕ್ಕಿ ಭಾರತ

ಈಗ 7ನೇ ಸ್ಥಾನಕ್ಕೆ ಜಿಗಿತ

ನವದೆಹಲಿ: ಅತಿ ಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿದ ದೇಶಗಳ ಪಟ್ಟಿಯಲ್ಲಿ ಭಾರತ ಶುಕ್ರವಾರ ಇಟಲಿಯನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೆ ಜಿಗಿದಿದೆ ಎಂದು ವಿಶ್ವದ ಕೊರೋನಾ ವೈರಸ್‌ ಕುರಿತ ಅಂಕಿ-ಅಂಶಗಳನ್ನು ನಿರ್ವಹಿಸುವ ‘ವಲ್ಡೋರ್‍ಮೀಟರ್‌’ ವೆಬ್‌ಸೈಟ್‌ ತಿಳಿಸಿದೆ. ಅದರ ಪ್ರಕಾರ, ದೇಶದಲ್ಲಿ ಶುಕ್ರವಾರ ಕೊರೋನಾಪೀಡಿತರ ಸಂಖ್ಯೆ 2,34,163ಕ್ಕೇರಿದೆ. ತನ್ಮೂಲಕ 2,34,013 ಸೋಂಕಿತರಿರುವ ಇಟಲಿಯನ್ನು ಹಿಂದಿಕ್ಕಿದೆ. ಆದರೆ ಇಟಲಿಯಲ್ಲಿ ಈವರೆಗೆ 33,689 ಮಂದಿ ಸಾವಿಗೀಡಾಗಿದ್ದರೆ, ಭಾರತದಲ್ಲಿ ಈ ಸಂಖ್ಯೆ 6588 ಎಂದು ವೆಬ್‌ಸೈಟ್‌ ತಿಳಿಸಿದೆ. ಸದ್ಯ 2.83 ಲಕ್ಷ ಸೋಂಕಿತರೊಂದಿಗೆ ಬ್ರಿಟನ್‌ 5ನೇ ಸ್ಥಾನ, 2.87 ಲಕ್ಷ ವೈರಸ್‌ ಪೀಡಿತರೊಂದಿಗೆ ಸ್ಪೇನ್‌ 4ನೇ ಸ್ಥಾನದಲ್ಲಿವೆ. ಭಾರತದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ವೇಗ ನೋಡಿದರೆ ಇನ್ನು 5 ದಿನದಲ್ಲಿ ಆ ಎರಡೂ ದೇಶಗಳನ್ನು ಭಾರತ ಹಿಂದಿಕ್ಕುವ ಲಕ್ಷಣ ಕಂಡುಬರುತ್ತಿದೆ.

ರಾಜ್ಯದಲ್ಲಿ ಕೊರೋನಾ ಚಂಡಮಾರುತ; ಒಂದೇ ದಿನ 515 ಕೇಸ್‌!

ಟಾಪ್‌ 7 ದೇಶಗಳು

ಸ್ಥಾನ ದೇಶ ಸೋಂಕು ಸಾವು

1. ಅಮೆರಿಕ 19,28,626 1,10,380

2. ಬ್ರೆಜಿಲ್‌ 6,18,554 34,072

3. ರಷ್ಯಾ 4,49,834 5,528

4. ಸ್ಪೇನ್‌ 2,87,740 27,133

5. ಬ್ರಿಟನ್‌ 2,83,311 40,261

6. ಭಾರತ 2,34,163 6588

7. ಇಟಲಿ 2,34,013 33,689

ರಾಜ್ಯದಲ್ಲಿ 2ನೇ ಪ್ಲಾಸ್ಮಾ ಚಿಕಿತ್ಸೆ ಯಶಸ್ವಿ

ಬೆಂಗಳೂರು: ಕೊರೋನಾ ಸೋಂಕಿತರಿಗೆ ನೀಡುವ ಪ್ಲಾಸ್ಮಾ ಚಿಕಿತ್ಸೆ ಕರ್ನಾಟಕದಲ್ಲಿ ಮತ್ತೆ ಯಶಸ್ವಿಯಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಯೊಬ್ಬರು ಈ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದು ಅವರನ್ನು ಐಸಿಯುನಿಂದ ವಾರ್ಡ್‌ಗೆ ಸ್ತಳಾಂತರಿಸಲಾಗಿದೆ. ಇದು 2ನೇ ಯಶಸ್ವಿ ಚಿಕಿತ್ಸೆ. ಕೆಲ ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಪ್ಲಾಸ್ಮಾ ಥೆರಪಿ ಯಶಸ್ವಿಯಾಗಿತ್ತು.

click me!