ಇಟಲಿ ಹಿಂದಿಕ್ಕಿ ಭಾರತ ಈಗ ನಂ.6!| ಬ್ರಿಟನ್, ಸ್ಪೇನ್ ಮೀರಿಸಿ 4ಕ್ಕೇರುವ ಆತಂಕ
ನವದೆಹಲಿ(ಜೂ.06): ಅತಿ ಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿದ ದೇಶಗಳ ಪಟ್ಟಿಯಲ್ಲಿ ಭಾರತ ಶುಕ್ರವಾರ ಇಟಲಿಯನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೆ ಜಿಗಿದಿದೆ ಎಂದು ವಿಶ್ವದ ಕೊರೋನಾ ವೈರಸ್ ಕುರಿತ ಅಂಕಿ-ಅಂಶಗಳನ್ನು ನಿರ್ವಹಿಸುವ ‘ವಲ್ಡೋರ್‍ಮೀಟರ್’ ವೆಬ್‌ಸೈಟ್ ತಿಳಿಸಿದೆ. ಅದರ ಪ್ರಕಾರ, ದೇಶದಲ್ಲಿ ಶುಕ್ರವಾರ ಕೊರೋನಾ ಪೀಡಿತರ ಸಂಖ್ಯೆ 2,34,163ಕ್ಕೇರಿದೆ.
ಒಂದೇ ದಿನ ದೇಶದಲ್ಲಿ 10600 ಜನಕ್ಕೆ ವೈರಸ್!
undefined
ತನ್ಮೂಲಕ 2,34,013 ಸೋಂಕಿತರಿರುವ ಇಟಲಿಯನ್ನು ಹಿಂದಿಕ್ಕಿದೆ. ಆದರೆ ಇಟಲಿಯಲ್ಲಿ ಈವರೆಗೆ 33,689 ಮಂದಿ ಸಾವಿಗೀಡಾಗಿದ್ದರೆ, ಭಾರತದಲ್ಲಿ ಈ ಸಂಖ್ಯೆ 6588 ಎಂದು ವೆಬ್‌ಸೈಟ್ ತಿಳಿಸಿದೆ. ಸದ್ಯ 2.83 ಲಕ್ಷ ಸೋಂಕಿತರೊಂದಿಗೆ ಬ್ರಿಟನ್ 5ನೇ ಸ್ಥಾನ, 2.87 ಲಕ್ಷ ವೈರಸ್ ಪೀಡಿತರೊಂದಿಗೆ ಸ್ಪೇನ್ 4ನೇ ಸ್ಥಾನದಲ್ಲಿವೆ. ಭಾರತದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ವೇಗ ನೋಡಿದರೆ ಇನ್ನು 5 ದಿನದಲ್ಲಿ ಆ ಎರಡೂ ದೇಶಗಳನ್ನು ಭಾರತ ಹಿಂದಿಕ್ಕುವ ಲಕ್ಷಣ ಕಂಡುಬರುತ್ತಿದೆ.
ಟಾಪ್ 7 ದೇಶಗಳು
ಸ್ಥಾನ ದೇಶ ಸೋಂಕು ಸಾವು
1. ಅಮೆರಿಕ 19,28,626| 1,10,380
2. ಬ್ರೆಜಿಲ್ 6,18,554| 34,072
3. ರಷ್ಯಾ 4,49,834| 5,528
4. ಸ್ಪೇನ್ 2,87,740| 27,133
5. ಬ್ರಿಟನ್ 2,83,311| 40,261
6. ಭಾರತ 2,34,163| 6588
7. ಇಟಲಿ 2,34,013| 33,689
*ವಲ್ಡೋರ್ ಮೀಟರ್ ಪ್ರಕಾರ