ಒಬ್ಬರೆ ಪ್ರಯಾಣಿಸುವಾಗ, ವ್ಯಾಯಾಮ ಮಾಡುವಾಗ ಮಾಸ್ಕ್ ಇಲ್ಲ ಅಂದ್ರೆ ದಂಡ ಹಾಕಂಗಿಲ್ಲ

By Suvarna NewsFirst Published Sep 4, 2020, 5:26 PM IST
Highlights

ಕಾರ್‌ನಲ್ಲಿ ಒಬ್ಬರೆ ಇದ್ದಾಗ ಮಾಸ್ಕ್ ಧರಿಸಿಲ್ಲ ಅಂದ್ರೆ ದಂಡ ಹಾಕಂಗಿಲ್ಲ/ ಕೇಂದ್ರದ ಆರೋಗ್ಯ ಇಲಾಖೆಯಿಂದ ಯಾವುದೆ ಸ್ಪಷ್ಟ ನಿರ್ದೇಶನ ಇಲ್ಲ/ ಕಾರನ್ನು ಸಾರ್ವಜನಿಕ ಸ್ಥಳ ಎಂದು ಪರಿಗಣಿಸಿರುವ ಪೊಲೀಸರು

ನವದೆಹಲಿ(ಸೆ. 04  ಕಾರಿನಲ್ಲಿ ಒಬ್ಬರೇ ತೆರಳುತ್ತಿದ್ದರೆ ಅಥವಾ ವ್ಯಾಯಾಮ ಮಾಡುತ್ತಿದ್ದರೆ, ಸೈಕ್ಲಿಂಗ್ ಮಾಡುತ್ತಿದ್ದ ವೇಳೆ ಮಾಸ್ಕ್  ಕಡ್ಡಾಯ ಏನಲ್ಲ.  ಒಬ್ಬರೆ ಕಾರು ಚಾಲನೆ ಮಾಡಿಕೊಂಡು ತೆರಳುವ ವೇಳೆ, ಅಥವಾ ಸೈಕ್ಲಿಂಗ್ ಮಾಡುವ ವೇಳೆ ಮಾಸ್ಕ್ ಧರಿಸಲಬೇಕು ಎಂಬ ನಿಯಮವನ್ನು ಕೇಂದ್ರ ಆರೋಗ್ಯ ಇಲಾಖೆ ಎಲ್ಲಿಯೂ ಹೇಳಿಲ್ಲ.

ಮಾಧ್ಯಮದೊಂದಿಗೆ ಮಾತನಾಡಿದ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ, ಒಬ್ಬರಿಗಿಂತ ಹೆಚ್ಚು ಜನರು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರೆ, ಗುಂಪಾಗಿ ವ್ಯಾಯಾಮ ಮಾಡುತ್ತಿದ್ದರೆ ಮಾಸ್ಕ್ ಕಡ್ಡಾಯ.  ಸಾಮಾಜಿಕ ಅಂತರ ಕಾಪಾಡುಕೊಳ್ಳುವುದು ಕಡ್ಡಾಯ ಎಂದು ತಿಳಿಸಿದ್ದಾರೆ. 

ಸೆಕ್ಸ್ ಮಾಡುವಾಗಲೂ ಮಾಸ್ಕ್ ಧರಿಸಿ, ಇಲ್ಲದಿದ್ದರೆ!

ಕಾರಿನ ಒಳಗೆ ಕುಳಿತಾಗ ಮಾಸ್ಕ್ ಧರಿಸಿಲ್ಲ ಎಂಬ ಕಾಣಕ್ಕೆ ದಂಡ ವಿಧಿಸಿರುವ ಬಗ್ಗೆ ಅನೇಕ ದೂರುಗಳು ಬಂದಿವೆ.  ಒಬ್ಬರೆ ಇದ್ದಾಗ ಮಾಸ್ಕ್ ಧರಿಸಬೇಕು ಎಂಬ ನಿಯಮವನ್ನು ಎಲ್ಲಿಯೂ ಹೇಳಿಲ್ಲ ಎಂದು ತಿಳಿಸಿದ್ದಾರೆ.

ದೆಹಲಿ ಪೊಲೀಸರು ಪ್ರತಿದಿನ 1,200  ದಿಂದ 1,500 ಜನರು ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ದಂಡ ವಿಧಿಸುತ್ತ ಬಂದಿದ್ದಾರೆ.  ಈ ಬಗ್ಗೆ ಮಾಧ್ಯಮದವರು ಪೊಲೀಸರ ಪ್ರಶ್ನೆ ಮಾಡಿದರೆ ನಾವು ಸರ್ಕಾರ ನೀಡಿದ ನಿಯಮಾವಳಿ ಪಾಲನೆ ಮಾಡುತ್ತ ಬಂದಿದ್ದೇವೆ ಎಂದಿದ್ದಾರೆ. ದೆಹಲಿ ಸರ್ಕಾರದ ಪಾಕೃತಿಕ ವಿಕೋಪ ನಿಗಮ ನೀಡಿರುವ ಮಾರ್ಗದರ್ಶನದಂತೆ ಮಾಸ್ಕ್ ಹಾಕದವರಿಗೆ 500 ರೂ. ದಂಡ ವಿಧಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಕಾರನ್ನು ಸಾರ್ವಜನಿಕ ಸ್ಥಳ ಎಂದು ಪರಿಗಣನೆ ಮಾಡುತ್ತೇವೆ. ಇಲ್ಲಿಯವರೆಗೆ ಸರ್ಕಾರದ ಕಡೆಯಿಂದ ಯಾವುದೇ ಲಿಖಿತ ಆದೇಶ ಬಂದಿಲ್ಲ.  ಹಾಗಾಗಿ ಹಳೆ ಪದ್ಧತಿ ಮುಂದುವರಿಸಿದ್ದೇವೆ ಎಂದು ತಿಳಿಸಿದ್ದಾರೆ. 

click me!