Most Popular Leader: ಮೋದಿ ಈಗಲೂ ವಿಶ್ವದ ನಂ.1 ಜನಪ್ರಿಯ ನಾಯಕ

Kannadaprabha News   | Asianet News
Published : Jan 22, 2022, 02:45 AM IST
Most Popular Leader: ಮೋದಿ ಈಗಲೂ ವಿಶ್ವದ ನಂ.1 ಜನಪ್ರಿಯ ನಾಯಕ

ಸಾರಾಂಶ

ಕಳೆದ ಏಳೂವರೆ ವರ್ಷಗಳಿಂದ ಪ್ರಧಾನಿ ಹುದ್ದೆಯಲ್ಲಿರುವ ನರೇಂದ್ರ ಮೋದಿ ಅವರು ಈಗಲೂ ವಿಶ್ವದ ನಂ.1 ಜನಪ್ರಿಯ ನಾಯಕರಾಗಿ ಮುಂದುವರಿದಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ. 

ನವದೆಹಲಿ (ಜ.22): ಕಳೆದ ಏಳೂವರೆ ವರ್ಷಗಳಿಂದ ಪ್ರಧಾನಿ ಹುದ್ದೆಯಲ್ಲಿರುವ ನರೇಂದ್ರ ಮೋದಿ (Narendra Modi) ಅವರು ಈಗಲೂ ವಿಶ್ವದ ನಂ.1 ಜನಪ್ರಿಯ ನಾಯಕರಾಗಿ ಮುಂದುವರಿದಿದ್ದಾರೆ ಎಂದು ಸಮೀಕ್ಷೆಯೊಂದು (Survey) ಹೇಳಿದೆ. ಕೊರೋನಾ ಲಾಕ್‌ಡೌನ್‌ (Corona Lockdown) ವೇಳೆ ಪ್ರಧಾನಿ ನಿವಾಸದಲ್ಲಿ ಗುಂಡಿನ ಪಾರ್ಟಿ ನಡೆಸಿ ವಿವಾದಕ್ಕೆ ಸಿಲುಕಿರುವ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ (Boris Johnson) ಅವರು ಜನಪ್ರಿಯತೆ ಕುಸಿತದಲ್ಲಿ ನಂ.1 ಸ್ಥಾನದಲ್ಲಿದ್ದಾರೆ ಎಂದು ಅದೇ ಸಮೀಕ್ಷೆ ತಿಳಿಸಿದೆ.

ವಿಶ್ವದ ಆಯ್ದ 13 ನಾಯಕರ ಕುರಿತು ಆಯಾ ದೇಶಗಳಲ್ಲಿ ಮಾರ್ನಿಂಗ್‌ ಕನ್ಸಲ್ಟ್‌ ಸಂಸ್ಥೆ ಈ ಸಮೀಕ್ಷೆ ನಡೆಸಿದೆ. 2021ರ ನವೆಂಬರ್‌ನಲ್ಲಿ ಇದೇ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲೂ ಮೋದಿ ಪ್ರಥಮ ಸ್ಥಾನದಲ್ಲೇ ಇದ್ದರು. ಆಗ 70% ಅಂಕ ಗಳಿಸಿದ್ದ ಅವರು ಈ ಬಾರಿ 71% ಅಂಕ ಪಡೆದಿದ್ದಾರೆ. 2020ರ ಮೇ ತಿಂಗಳಿನಲ್ಲಿ ಕೊರೋನಾ ಲಾಕ್‌ಡೌನ್‌ ಅವಧಿಯಲ್ಲಿ ಮೋದಿ ಅವರು 84% ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿದ್ದರು. ಕೊರೋನಾ (Coronavirus) ಎರಡನೇ ಅಲೆ ಕಂಡುಬಂದ 2021ರ ಮೇ ತಿಂಗಳಿನಲ್ಲಿ ಅವರ ಜನಪ್ರಿಯತೆ ಶೇ.63 ಅಂಕಗಳಿಗೆ ಕುಸಿದಿತ್ತಾದರೂ ನಂ.1 ಪಟ್ಟಕ್ಕೆ ಭಂಗವಾಗಿರಲಿಲ್ಲ. ಇದೀಗ ಅಂಕ ಮತ್ತೆ ಏರಿಕೆಯಾಗಿದೆ.

ಟ್ರಂಪ್ ದುರಾದೃಷ್ಟ, ಮೋದಿಯೇ ಈಗ ಅತ್ಯಂತ ಜನಪ್ರಿಯ ನಾಯಕ!

ನಂ.2 ಯಾರು?: ಶೇ.66 ಅಂಕಗಳೊಂದಿಗೆ ಮೆಕ್ಸಿಕೋ ಅಧ್ಯಕ್ಷ ಆ್ಯಂಡ್ರೆಸ್‌ ಮ್ಯಾನುಯೆಲ್‌ ಲೊಪೆಜ್‌ ಒಬ್ರಡಾರ್‌ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ ಇಟಲಿಯ ಮಾರಿಯಾ ಡ್ರಾಘಿ (60%), ಜಪಾನ್‌ ಪ್ರಧಾನಿ ಫುಮಿಯೋ ಕಿಶಿಡಾ (48%), ಜರ್ಮನಿ ಪ್ರಧಾನಿ ಒಲಾಫ್‌ ಸ್ಕೋಲ್‌ (44%) ಅವರು ಕ್ರಮವಾಗಿ 3, 4 ಹಾಗೂ 5ನೇ ಸ್ಥಾನದಲ್ಲಿದ್ದಾರೆ.

ಮೊನ್ನೆಯಷ್ಟೇ ಒಂದು ವರ್ಷದ ಅಧಿಕಾರಾವಧಿಯನ್ನು ಮುಗಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ (43%) 6ನೇ ಸ್ಥಾನ ಹಾಗೂ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ (43%), ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ (41%) ನಂತರದ ಸ್ಥಾನಗಳಲ್ಲಿದ್ದಾರೆ. ಜನಪ್ರಿಯತೆ ಕಳೆದುಕೊಂಡ ನಾಯಕರ ಪಟ್ಟಿಯಲ್ಲಿ ಶೇ.69 ಅಂಕಗಳೊಂದಿಗೆ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಪ್ರಥಮ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಶೇ.59 ಅಂಕಗಳೊಂದಿಗೆ ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರೋನ್‌, ಶೇ.56 ಅಂಕಗಳೊಂದಿಗೆ ಬ್ರೆಜಿಲ್‌ ಅಧ್ಯಕ್ಷ ಜೈರ್‌ ಬೊಲ್ಸೊನಾರೋ ಇದ್ದಾರೆ.

Pariksha Pe Charcha 2022: ಫೆಬ್ರವರಿಯಲ್ಲಿ ನಡೆಯಲಿದೆ 5ನೇ ಆವೃತ್ತಿಯ ಪರೀಕ್ಷಾ ಪೆ ಚರ್ಚಾ!

ಭಾರತ, ಆಸ್ಪ್ರೇಲಿಯಾ, ಬ್ರೆಜಿಲ್‌, ಕೆನಡಾ, ಫ್ರಾನ್ಸ್‌, ಜರ್ಮನಿ, ಇಟಲಿ, ಜಪಾನ್‌, ಮೆಕ್ಸಿಕೋ, ದಕ್ಷಿಣ ಕೊರಿಯಾ, ಸ್ಪೇನ್‌, ಬ್ರಿಟನ್‌ ಹಾಗೂ ಅಮೆರಿಕದಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದೆ. 2022ರ ಜ.13ರಿಂದ 19ರವರೆಗೆ ಏಳು ದಿನಗಳ ಕಾಲ ಆಯಾ ದೇಶದಲ್ಲಿ ಸಮೀಕ್ಷೆಯನ್ನು ನಡೆಸಲಾಗಿದೆ. ದೇಶದಿಂದ ದೇಶಕ್ಕೆ ಸಂದರ್ಶಕರ ಸಂಖ್ಯೆಯಲ್ಲಿ ಬದಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!