
ಕೋಲ್ಕತಾ(ನ.17): ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಆರೋಗ್ಯದಲ್ಲಿ ಏರಪೇರಾದ ಘಟನೆ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದಿದೆ. ಸಿಲಿಗುರಿಯಿಂದ ಉತ್ತರ ಬಂಗಾಳ ಸಂಪರ್ಕಿಸುವ ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆಯ ಶಂಕು ಸ್ಥಾಪನೆಗಾಗಿಗಿ ನಿತಿನ್ ಗಡ್ಕರಿ ಸಿಲಿಗುರಿಗೆ ಆಗಮಿಸಿದ್ದರು. 1206 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿ ಆರಂಭಿಸಲಾಗಿದೆ. ಈ ಹೆದ್ದಾರಿಯ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ ನಿತಿನ್ ಗಡ್ಕರಿ ಆರೋಗ್ಯ ಕ್ಷೀಣಿಸಿದೆ. ಉಸಿರಾಟದ ಸಮಸ್ಯೆ ಎದುರಿಸಿದ್ದಾರೆ. ವೇದಿಕೆಯಲ್ಲೇ ನಿತಿನ್ ಗಡ್ಕರಿ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ವೈದ್ಯರ ತಂಡ ನಿತಿನ್ ಗಡ್ಕರಿಗೆ ಚಿಕಿತ್ಸೆ ನೀಡಿದೆ. ವೇದಿಕೆಯ ಹಿಂಬಾಗದಲ್ಲಿ ಗಡ್ಕರಿಗೆ ತುರ್ತು ಚಿಕಿತ್ಸೆ ನೀಡಲಾಗಿದೆ. ಸದ್ಯ ನಿತಿನ್ ಗಡ್ಕರಿ ಚೇತರಿಸಿಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ನೀರಜ್ ಜಿಂಬಾ ಹೇಳಿದ್ದಾರೆ.
ಸಿಲಿಗುರಿಯ ಶಿವಮಂದಿರ ಮೈದಾನದಲ್ಲಿ ಆಯೋಜಿಸಿದ ಹೆದ್ದಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಿತಿನ್ ಗಡ್ಕರಿ ಹೆದ್ದಾರಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಮಧ್ಯಾಹ್ನ 1.30ರ ಸುಮಾರಿಗೆ ಹೆದ್ದಾರಿ ಯೋಜನೆಗೆ ಚಾಲನೆ ನೀಡಿರುವ ಫೋಟೋಗಳನ್ನು ಟ್ವಿಟರ್ ಮೂಲಕ ಪೋಸ್ಟ್ ಮಾಡಿದ್ದಾರೆ. ವೇದಿಕೆಯಲ್ಲಿರುವಾಗಲೇ ನಿತಿನ್ ಗಡ್ಕರಿ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದೆ. ಉಸಿರಾಟದ ಸಮಸ್ಯೆ ಎದುರಿಸಿದ್ದಾರೆ.
Mangaluru: ಕೊನೆಗೂ suratkal tollgate ರದ್ದು; ನಿಲ್ಲಿಸಿಲ್ಲ ಇನ್ನು ಹೋರಾಟ!
ವೈದ್ಯರ ತಂಡದ ಗಡ್ಕರಿಗೆ ವೇದಿಕೆ ಹಿಂಭಾಗದಲ್ಲಿ ಚಿಕಿತ್ಸೆ ನೀಡಲಾಗಿದೆ. ಬಳಿಕ ಡಾರ್ಜಲಿಂಗ್ ಸಂಸದ ರಾಜು ಬಿಸ್ತಾ ಮನೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ರಾಜು ಬಿಸ್ತಾ ಮನೆಯಲ್ಲಿ ವಿಶ್ರಾಂತಿಗೆ ಜಾರಿಗೆ ನಿತಿನ್ ಗಡ್ಕರಿ ನಿಧಾನವಾಗಿ ಚೇತರಿಸಿಕೊಂಡಿದ್ದಾರೆ. ಬಳಿಕ ವರ್ಚುವಲ್ ಮೂಲಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ.
ಗುಜರಾತ್‌ನಲ್ಲೂ ಪ್ರಚಾರದ ಜವಾಬ್ದಾರಿಗೆ ಗಡ್ಕರಿ ಅಲಭ್ಯ ಸಾಧ್ಯತೆ
ನಿತಿನ್ ಗಡ್ಕರಿ ಆರೋಗ್ಯ ಏರಪೇರಾಗಿರುವ ಕಾರಣ ಗುಜರಾತ್ ಚುನಾವಣೆಯಲ್ಲಿ ಪ್ರಚಾರದಿಂದ ಗಡ್ಕರಿ ಹಿಂದೆ ಸರಿಯುವ ಸಾಧ್ಯತೆ. ಗುಜರಾತ್ ವಿಧಾನಸಭಾ ಚುನಾವಣೆಗೆ ಬಿಜೆಪಿಯ 40 ಸ್ಟಾರ್ ಪ್ರಚಾರಕರ ಪಟ್ಟಿಬಿಡುಗಡೆ ಮಾಡಲಾಗಿದೆ. ಪ್ರಧಾನಿ ಮೋದಿ, ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ, ರಾಜ್‌ನಾಥ್ ಸಿಂಗ್, ನಿತಿನ್ ಗಡ್ಕರಿ, ಸ್ಮೃತಿ ಇರಾನಿ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ, ಯೋಗಿ ಆದಿತ್ಯನಾಥ್, ಹೇಮಾಮಾಲಿನಿ ಮೊದಲಾದವರು ಸೇರಿದ್ದಾರೆ. ಆದರೆ ಗಡ್ಕರಿ ಆರೋಗ್ಯ ಕುರಿತು ವೈದ್ಯರು ಗ್ರೀನ್ ಸಿಗ್ನಲ್ ನೀಡಿದ ಬಳಿಕವಷ್ಟೇ ಗುಜರಾತ್ ಪ್ರಚಾರದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಕಳಪೆ ಹೆದ್ದಾರಿ ನಿರ್ಮಾಣ: ಮಧ್ಯಪ್ರದೇಶದ ಜನರಲ್ಲಿ ಗಡ್ಕರಿ ಕ್ಷಮೆಯಾಚನೆ
ಇಲ್ಲಿನ ರಾಷ್ಟ್ರೀಯ ಹೆದ್ದಾರಿ-63ರ ಕಳಪೆ ನಿರ್ಮಾಣದ ಬಗ್ಗೆ ಮಧ್ಯಪ್ರದೇಶದ ಜನರ ಮುಂದೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಕ್ಷಮೆ ಯಾಚಿಸಿದ್ದಾರೆ. ತಕ್ಷಣವೇ ಇಲ್ಲಿ ಹೊಸ ದುರಸ್ತಿ ಯೋಜನೆಗೆ ಆದೇಶಿಸಿದ್ದಾರೆ. ಇಲ್ಲಿ ನಡೆದ ಅಷ್ಟಪಥ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಚಿವ ನಿತಿನ ಗಡ್ಕರಿ, ‘ತಪ್ಪಾಗಿದ್ದರೆ ಕ್ಷಮೆ ಕೇಳಲು ನಾನು ಹಿಂಜರಿಯುವುದಿಲ್ಲ. ಮಂಡಲ ಹಾಗೂ ಜಬಲ್ಪುರ್ ನಡುವಿನ ಹೆದ್ದಾರಿಯನ್ನು 400 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ ನಿರ್ಮಾಣ ಕಾರ್ಯ ನನಗೆ ತೃಪ್ತಿ ನೀಡಿಲ್ಲ’ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ