
ನವದೆಹಲಿ(ಸೆ.14): ಬಿಹಾರಕ್ಕೆ ಕೇಂದ್ರ ಸರ್ಕಾರ ಭರ್ಜರಿ ಕೊಡುಗೆಗಳ ಪ್ಯಾಕೇಜ್ ನೀಡಿದೆ. ನಗರಾಭಿವೃದ್ಧಿಗೆ ಸಂಬಂಧಿಸಿದ ಏಳು ಅತಿದೊಡ್ಡ ಪ್ರಾಜೆಕ್ಟ್ ಗಳಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ, ಸೆ. 15 ರಂದು ಚಾಲನೆ ಚಾಲನೆ ನೀಡಲಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದು ಇದರಲ್ಲಿ ನಾಲ್ಕು ಯೋಜನೆಗಳು ನೀರು ಸರಬರಾಜು, ಎರಡು ಒಳಚರಂಡಿ ನಿರ್ವಹಣೆಯದ್ದಾಗಿದ್ದರೆ ಇನ್ನೊಂದು ನದಿ ನಿರ್ವಹಣೆಗೆ ಸಂಬಂದಿಸಿದ್ದಾಗಿದೆ. ಈ ಎಲ್ಲ ಯೋಜನೆಗಳ ಒಟ್ಟು ಮೊತ್ತ 541 ಕೋಟಿ ರೂ.!
ಬಿಹಾರ ಚುನಾವಣಗೆ ಕಂಗನಾ ಬರಲಿದ್ದಾರಾ?
ಬಿಹಾರ ಸರ್ಕಾರದ ನಗರಾಭಿವೃದ್ಧಿ ಮತ್ತು ವಸತಿ ಇಲಾಖೆ ಈ ಎಲ್ಲ ಯೋಜನೆಗಳ ಉಸ್ತುವಾರಿ ನೋಡಿಕೊಳ್ಳಲಿದೆ. ಬಿಹಾರದ ಸಿಎಂ ನಿತೀಶ್ ಕುಮಾರ್ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ.
ಕರ್ಮಾಲಿಚಕ್ ನ ಬೆವೂರಿನಲ್ಲಿ ನಮಾಮಿ ಗಂಗಾ ಅಡಿಯಲ್ಲಿ ಒಳಚರಂಡಿ ಮತ್ತು ನೀರು ನಿರ್ವಹಣೆ ಯೋಜನೆಗೆ ಚಾಲನೆ ದೊರೆಯಲಿದೆ. ಅಮೃತ್ ಮಿಷನ್ ಅಡಿಯಲ್ಲಿ ನೀರು ಸರಬರಾಜು ಯೋಜನೆ ಚಾಪ್ರಾ ಮುನ್ಸಿಪಲ್ ಕಾರ್ಪೋರೇಶನ್ ಗೆ ಸೇರಿದೆ. ದಿನದ 24 ಗಂಟೆ ಪಾಟ್ನಾ ಮತ್ತು ಚಾಪ್ರಾದ ಜನರಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ. ಜಮಾಲ್ ಪುರದ ಜನರಿಗೂ ಶುದ್ಧ ನೀರು ಲಭ್ಯವಾಗಲಿದೆ.
ಮುಜಾಫರ್ ಪುರ್ ನ ಪೂರ್ವಿ ಅಖಾಡಾ ಘಾಟ್, ಸೇದಿ ಘಾಟ್ ಮತ್ತು ಚಂದ್ವಾರಾ ಘಾಟ್ ನಲ್ಲಿ ಮೂಲ ಸೌಕರ್ಯ ಅಭಿವೃದ್ಧಿಯಾಗಲಿದೆ. ಶವಚಾಲಯ, ಭದ್ರತೆ. ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ
ಬಿಹಾದ ಹಳ್ಳಿ, ಪಟ್ಟಣ, ನಗರ ಸೇರಿದಂತೆ ಪ್ರತಿ ಜಿಲ್ಲೆಗಳಲ್ಲಿ ಮೂಲ ಸೌಕರ್ಯ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗೆ ಮೋದಿ ಬಹು ದೊಡ್ಡ ಪ್ಲಾನ್ ರೆಡಿ ಮಾಡಿದ್ದಾರೆ. ಬರೋಬ್ಬರಿ 16,000 ಕೋಟಿ ರೂಪಾಯಿ ವೆಚ್ಚದಲ್ಲಿ ಬಿಹಾರದಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂದು ಈ ಹಿಂದೆಯೇ ಪ್ರಕಟಣೆ ತಿಳಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ