ಬ್ರಿಜೇಶ್ ಕಾಳಪ್ಪಗೆ ಕಂಗನಾರಿಂದ 'ಭದ್ರತೆ' ಪಾಠ, ಎಂತಾ ಏಟು!

Published : Sep 14, 2020, 10:45 PM ISTUpdated : Sep 14, 2020, 10:49 PM IST
ಬ್ರಿಜೇಶ್ ಕಾಳಪ್ಪಗೆ ಕಂಗನಾರಿಂದ 'ಭದ್ರತೆ' ಪಾಠ, ಎಂತಾ ಏಟು!

ಸಾರಾಂಶ

ಕಂಗನಾ ವರ್ಸಸ್ ಬ್ರಿಜೇಶ್ ಕಾಳಪ್ಪ/ ಕಂಗನಾ ಮುಂಬೈ ತೊರೆದಿರುವ ಕಾರಣ ನೀಡುರವ ಭದ್ರತೆ ಹಿಂದಕ್ಕೆ ಪಡೆಯಿರಿ/  ಬ್ರಿಜೇಶ್ ಅವರಿಗೆ ಪಾಠ ಹೇಳಿದ ಕಂಗನಾ/ ಗುಪ್ತಚರ ದಳದ ಮಾಹಿತಿ ಆಧರಿಸಿ ಭದ್ರತೆ ಒದಗಿಸಲಾಗುತ್ತದೆ.

ನವದೆಹಲಿ(ಸೆ. 14)  ಮಹಾರಾಷ್ಟ್ರ ಸರ್ಕಾರವನ್ನು ಕಂಗನಾ ಎದುರು ಹಾಕಿಕೊಂಡಿದ್ದೂ ಎಲ್ಲರಿಗೂ ಗೊತ್ತೆ ಇದೆ.   ಕಂಗನಾ ಅವರಿಗೆ ವೈ ಪ್ಲಸ್ ಭದ್ರತೆಯನ್ನು ಕೇಂದ್ರ ಗೃಹ ಇಲಾಖೆ ನೀಡಿದೆ.

ಮುಂಬೈಗೆ ಬಂದಿದ್ದ ಕಂಗನಾ ಮುಂಬೈ ತೊರೆದಿದ್ದಾರೆ . ಇದೇ ಅವಕಾಶ ಬಳಸಿಕೊಂಡ ವಕೀಲ ಬ್ರಿಜೇಶ್ ಕಾಳಪ್ಪ ಕಂಗನಾ ಅವರಿಗೆ ನೀಡಿರುವ ವೈ ಪ್ಲಸ್ ಭದ್ರತೆ ಹಿಂಪಡೆಯಬೇಕು ಎಂದು ಟ್ವೀಟ್ ಮಾಡಿದ್ದರು.

ಮಹಾ ಸರ್ಕಾರಕ್ಕೆ ಸವಾಲೆಸೆದ ಕಂಗನಾಗೆ ಹೊಸ ಜವಾಬ್ದಾರಿ

ಮುಂಬೈನಿಂದ ಹಿಮಾಚಲ ಪ್ರದೇಶದ ತಮ್ಮ ಮನೆಗೆ ಹೊರಟ ಅವರು ಈಗ ಸುರಕ್ಷಿತ. ಅವರಿಗೆ ಭದ್ರತೆ ಬೇಕಾಗಿಲ್ಲ. ವೈ ಪ್ಲಸ್ ಸೆಕ್ಯೂರಿಟಿಗೆ ಪ್ರತಿ ತಿಂಗಳು ಹತ್ತು ಲಕ್ಷ ರೂ. ಖರ್ಚಾಗುತ್ತದೆ.  ಇದು ದೇಶದ ತೆರಿಗೆದಾರರ ಹಣ. ಈಗ ಕಂಗನಾ ತವರನಲ್ಲಿ ಸೇಫ್( ಅವರು ಹೇಳಿದ್ದ ಪಾಕ್ ಆಕ್ರಮಿತ ಕಾಶ್ಮೀರದಿಂದ ದೂರ)  ಮೋದಿ ಸರ್ಕಾರ ದಯಮಾಡಿ ಆಕೆಗೆ ನೀಡುರುವ ಭದ್ರತೆ ಹಿಂದಕ್ಕೆ ಪಡೆಯಬೇಕು ಎಂದು ಬ್ರಿಜೇಶ್ ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಗೆ ಅಷ್ಟೆ ಚೆನ್ನಾಗಿ ಉತ್ತರ ನೀಡಿರುವ ಕಂಗನಾ, ಬ್ರಿಜೇಶ್ ಅವರೆ ನೀವು ಅಥವಾ ನಾವು ಯೋಚನೆ ಮಾಡಿದ ಆಧಾರದ ಮೇಲೆ ಭದ್ರತೆ ನೀಡಲಾಗುವುದಿಲ್ಲ.  ಗುಪ್ತಚರ ದಳ ನೀಡುವ ಮಾಹಿತಿ ಆಧಾರದಲ್ಲಿ ಭದ್ರತೆ ನೀಡಲಾಗುತ್ತದೆ. ದೇವರ ದಯೆ ಇದ್ದರೆ ಮುಂದಿನ ದಿನದಲ್ಲಿ ಸೆಕ್ಯೂರಿಟಿ ಹಿಂದಕ್ಕೆ ಪಡೆಯಬಹುದು, ಒಂದು ವೇಳೆ ಗುಪ್ತಚರ ದಳದ ವರದಿ ಮತ್ತೆ ಬೆದರಿಕೆ ಇದೆ ಅಂದರೆ ನೀಡಿರುವ ಸೆಕ್ಯೂರಿಟಿ ಇನ್ನೊಂದು ಕೈ ಹೆಚ್ಚಾಗಬಹುದು ಎಂದಿದ್ದಾರೆ.

 


 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..