ಪ್ರಧಾನಿ ಮೋದಿ ರಾಂಚಿ ಭೇಟಿಯಲ್ಲಿ ಭದ್ರತಾ ಲೋಪ,ವಾಹನಕ್ಕೆ ಅಡ್ಡ ಬಂದ ಮಹಿಳೆ ವಶಕ್ಕೆ !

Published : Nov 15, 2023, 09:52 PM IST
ಪ್ರಧಾನಿ ಮೋದಿ ರಾಂಚಿ ಭೇಟಿಯಲ್ಲಿ ಭದ್ರತಾ ಲೋಪ,ವಾಹನಕ್ಕೆ ಅಡ್ಡ ಬಂದ ಮಹಿಳೆ ವಶಕ್ಕೆ !

ಸಾರಾಂಶ

ಬಿರ್ಸಾ ಮುಂಡಾ ಜಯಂತಿ ಆಚರಿಸಿ ಹಿಂದಿರುಗುವ ವೇಳೆ ಪ್ರಧಾನಿ ಮೋದಿ ಭದ್ರತೆಯಲ್ಲಿ ಲೋಪವಾಗಿದೆ. ಮಹಿಳೆಯೊಬ್ಬರ ಮೋದಿ ಕಾನ್ವಾಯ್‌ಗೆ ಅಡ್ಡಲಾಗಿ ಬಂದು ಆತಂಕ ಸೃಷ್ಟಿಸಿದ್ದಾರೆ. 

ರಾಂಚಿ(ನ.15) ಪ್ರಧಾನಿ ನರೇಂದ್ರ ಮೋದಿ ಹಲವು ಕಾರ್ಯಕ್ರಮಗಳ ನಿಮಿತ್ತ ಜಾರ್ಖಂಡ್ ಭೇಟಿ ನೀಡಿದ್ದಾರೆ. ಈ ವೇಳೆ ಭಗವಾನ್ ಬಿರ್ಸಾ ಮುಂಡಾ  ಅವರ ಜನ್ಮಸ್ಥಳ ಉಲಿಹಾತು ಗ್ರಾಮಕ್ಕೆ ಭೇಟಿ ನೀಡಿದ ಮೋದಿ, ಬಿರ್ಸಾ ಮುಂಡಾ ಜಯಂತಿಯಲ್ಲಿ ಪಾಲ್ಗೊಂಡಿದ್ದಾರೆ. ಜಯಂತಿ ಆಚರಿಸಿ ಮರಳು ವೇಳೆ ಪ್ರದಾನಿ ಮೋದಿ ಭದ್ರತೆಯಲ್ಲಿ ಲೋಪವಾಗಿದೆ. ಮೋದಿ ಹಾಗೂ ಬೆಂಗಾವಲು ವಾಹನ ವೇಗವಾಗಿ ಸಾಗುತ್ತಿದ್ದಂತೆ ರಸ್ತೆ ಬದಿಯಲ್ಲಿ ಮೋದಿ ನೋಡಲು ನಿಂತಿದ್ದ ಮಹಿಳೆ ನಡು ರಸ್ತೆಗೆ ಆಗಮಿಸಿದ್ದಾರೆ. ಮೋದಿಯ ಕಾರಿಗೆ ಅಡ್ಡಲಾಗಿ ನಿಂತಿದ್ದಾರೆ. ತಕ್ಷಣವೇ ಭದ್ರತಾ ಪಡೆಗಳು ಮಧ್ಯಪ್ರವೇಶಿಸಿ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. 

ಮೋದಿ ವಾಹನಕ್ಕೆ ಅಡ್ಡಲಾಗಿ ಬಂದ ಕಾರಣ ದಿಢೀರ್ ವಾಹನಗಳ ಬ್ರೇಕ್ ಹಾಕಿ ನಿಲ್ಲಿಸಲಾಗಿದೆ. ಭದ್ರತಾ ಲೋಪದ ಜೊತೆಗೆ ಅಪಘಾತದ ಅಪಾಯವೂ ಎದುರಾಗಿತ್ತು. ತಕ್ಷಣವೇ ವಾಹನ ನಿಲ್ಲಿಸಿದ ಕಾರಣ ಅಪಘಾತ ತಪ್ಪಿದೆ. ಇನ್ನು ಭದ್ರತಾ ಸಿಬ್ಬಂದಿಗಳು ಮಹಿಳೆಯನ್ನು ವಶಕ್ಕೆ ಪಡೆದು ರಸ್ತೆ ಬದಿಯತ್ತ ಕಳೆದುಕೊಂಡು ಹೋಗಿದ್ದಾರೆ. ಈ ಮೂಲಕ ಮೋದಿ ಸಾಗುವ ದಾರಿಯನ್ನು ಮುಕ್ತಗೊಳಿಸಿದ್ದಾರೆ. ಇತ್ತ ಮಹಿಳೆಯ ವಿಚಾರಣೆ ನಡೆಯುತ್ತಿದೆ.

ರೋಡ್‌ಶೋ ವೇಳೆ ಮೋದಿಯತ್ತ ಎಸೆದ ಮೊಬೈಲ್‌ ತಡೆದ ಭದ್ರತಾ ಸಿಬ್ಬಂದಿಗೆ ವ್ಯಾಪಕ ಮೆಚ್ಚುಗೆ!

ಜಾರ್ಖಂಡ್ ಭೇಟಿಯಲ್ಲಿ ಪ್ರಧಾನಿ ಮೋದಿ ಸ್ಮರಣೀಯವಾಗಿದೆ. ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮಸ್ಥಳ ಉಲಿಹಾತು ಗ್ರಾಮಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ ಅನ್ನೋ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. ರಾಂಚಿಯಲ್ಲಿರುವ ಭಗವಾನ್ ಬಿರ್ಸಾ ಮುಂಡಾ ಸ್ಮಾರಕ ಪಾರ್ಕ್ ಮತ್ತು ಸ್ವಾತಂತ್ರ್ಯ ಹೋರಾಟಗಾರ ವಸ್ತುಸಂಗ್ರಹಾಲಯಕ್ಕೆ ಪ್ರಧಾನಮಂತ್ರಿ ಭೇಟಿ ನೀಡಿದ್ದಾರೆ.

 

 

 ಜನಜಾತಿಯ ಗೌರವ ದಿವಸ ಆಚರಣೆಯ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಂಡಿದ್ದಾರೆ. ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಮತ್ತು ಪ್ರಧಾನಮಂತ್ರಿ ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳ ಮಿಷನ್ ಯೋಜನೆಯನ್ನು ಮೋದಿ ಚಾಲನೆಗೊಳಿಸಿದ್ದಾರೆ. ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳ  (ಪಿ.ಎಂ. ಪಿ.ವಿ.ಟಿ.ಜಿ) ಮಿಷನ್' ಎಂಬ  ವಿನೂತನ ಯೋಜನೆಯನ್ನೂ ಆರಂಭಿಸಿದ್ದಾರೆ. ದೇಶದಾದ್ಯಂತ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ  ಒಟ್ಟು 22,544 ಹಳ್ಳಿಗಳಲ್ಲಿ (220 ಜಿಲ್ಲೆಗಳು) ವಾಸಿಸುವ ಸುಮಾರು 28 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ದುರ್ಬಲ ಬುಡಕಟ್ಟು ಗುಂಪುಗಳಿಗಾಗಿ, ವಿಶೇಷ 75  ʼಪ್ರಧಾನಮಂತ್ರಿ ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳ  (ಪಿ.ಎಂ. ಪಿ.ವಿ.ಟಿ.ಜಿ) ಮಿಷನ್ ಯೋಜನೆ ಇದಾಗಿದೆ.

ಮೋದಿ ದಾವಣಗೆರೆ ರೋಡ್ ಶೋ ವೇಳೆ ಭದ್ರತಾ ವೈಫಲ್ಯ, ಯುವಕನ ನಡೆಯಿಂದ ಆತಂಕಗೊಂಡ ಭದ್ರತಾ ಪಡೆ!

ಇನ್ನು ಪಿಎಂ-ಕಿಸಾನ್ ಯೋಜನೆಯ 15 ನೇ ಕಂತನ್ನು ಮೋದಿ ಬಿಡುಗಡೆ ಮಾಡಿದ್ದಾರೆ. ಜಾರ್ಖಂಡ್ ನಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ದೇಶಕ್ಕೆ ಸಮರ್ಪಣೆ ಮತ್ತು ಅಡಿಪಾಯ ಹಾಕುವ ಕಾರ್ಯಕ್ರಮದಲ್ಲೂ ಮೋದಿ ಪಾಲ್ಗೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!