2014 ರಿಂದ 2024ರವರೆಗೆ ಮೋದಿ ಹೃದಯದಲ್ಲಿದೆ ಆ ನೋವು!

By Mahmad Rafik  |  First Published May 25, 2024, 1:01 PM IST

ಪ್ರಣಬ್ ಮುಖರ್ಜಿ ಅವರ ಕಾಲನಂತರ ವಿರೋಧ ಪಕ್ಷಗಳಿಂದ ಯಾವುದೇ ಉತ್ತಮ ಸಲಹೆ ನಮಗೆ ದೊರೆತಿಲ್ಲ. ನಾನು ಗುಜರಾತ್ ಸಿಎಂ ಆಗಿದ್ದ ಅನುಭವ, ಪಕ್ಷ ಮತ್ತು ಸಹೋದ್ಯೋಗಿಗಳ ಸಹಕಾರದಿಂದ 10 ವರ್ಷ ಆಡಳಿತ ನಡೆಸಲು ಸಾಧ್ಯವಾಗಿದೆ.


ನವದೆಹಲಿ: 2014ರಿಂದ 2024ರ ಅವಧಿಯಲ್ಲಿ ನನಗೆ ಪ್ರಬಲ ಎದುರಾಳಿ ವಿರೋಧ ಪಕ್ಷದ ನಾಯಕ ಇರಲಿಲ್ಲ ಎಂಬ ಬೇಸರ ನನ್ನನಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಿಎನ್‌ಎನ್-ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿಗಳು ತಮ್ಮ 10 ವರ್ಷದ ಆಳಿತಾವಧಿಯ ಕುರಿತು ಸುದೀರ್ಘವಾಗಿ ಮಾತನಾಡಿದ್ದಾರೆ. 

ಕಳೆದ 10  ವರ್ಷಗಳಲ್ಲಿ ನನಗೆ ಎದುರಾಳಿಯಾಗಿ ವಿಪಕ್ಷ ನಾಯಕ ಇರಲಿಲ್ಲ. ಯಾರೂ ಸಹ ನನಗೆ ಸವಾಲು ಹಾಕಲು ಇರಲಿಲ್ಲ ಎಂಬ ನೋವು ನನ್ನ ಹೃದಯದಲ್ಲಿದೆ ಎಂದ ಅವರು ರಾಹುಲ್ ಗಾಂಧಿ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.

Tap to resize

Latest Videos

10  ವರ್ಷ ಎದುರಾಳಿಯೇ ಇಲ್ಲದಂತಾಯ್ತು!

ಪ್ರಜಾಪ್ರಭುತ್ವದಲ್ಲಿ ಪ್ರಬಲ ವಿರೋಧ ಪಕ್ಷದ ನಾಯಕರು ತುಂಬಾ ಪ್ರಮುಖ. ಸರ್ಕಾರದ ವಿರುದ್ಧ ಗಟ್ಟಿಯಾಗಿ ನಿಂತು ನಮ್ಮನ್ನು ಕತ್ತಿಯ ಅಂಚಿನಲ್ಲಿ ನಿಲ್ಲುವ ಹಾಗೆ ಮಾಡೋದು ವಿರೋಧ ಪಕ್ಷದ ಕೆಲಸವಾಗಿರುತ್ತದೆ. ಆದ್ರೆ ಅಂತಹ ಎದುರಾಳಿಯೇ ನನಗೆ 10 ವರ್ಷದಲ್ಲಿ ಇಲ್ಲದಂತಾಯ್ತು ಎಂದರು. 

ಭಾರತದಲ್ಲಿ ಪ್ರತಿಭಾನ್ವಿತರು ತುಂಬಾ ಜನರಿದ್ದು, ಅಂತಹವರಿಗೆ ಅವಕಾಶಗಳು ಸಿಗಬೇಕಿದೆ. 2014 ರಿಂದ 2024ರ ಈ ಸಮಯದಲ್ಲಿ ನನಗೆ ಒಬ್ಬ ಪ್ರಬಲ ಎದುರಾಳಿ ಇರ್ತಾರೆ ಎಂದು ಭಾವಿಸಿದ್ದೆ. ಆದ್ರೆ ನನ್ನ ನಿರೀಕ್ಷೆ ಹುಸಿಯಾಯ್ತು ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರನ್ನು ಲೇವಡಿ ಮಾಡಿದರು. 

ಮುಂದುವರಿದು ಮಾತನಾಡಿದ ಪ್ರಧಾನಿ ಮೋದಿ, ಜೀವನದಲ್ಲಿ ಏನು ಮಿಸ್ ಮಾಡಿಕೊಳ್ಳುತ್ತೀರಿ ಅಂತ ನನ್ನನ್ನು ಕೇಳಿದ್ರೆ ಅದು ಉತ್ತಮ ವಿರೋಧ ಪಕ್ಷದ ನಾಯಕ ಎಂದು ಮತ್ತೆ ತಮ್ಮ ಹೇಳಿಕೆಯನ್ನು ಉಲ್ಲೇಖಿಸಿದರು.

3ನೇ ಮಗು ಹುಟ್ಟಿದ್ದಕ್ಕೆ ಇಬ್ಬರು ಬಿಜೆಪಿ ಕಾರ್ಪರೇಟರ್‌ಗಳು ಅನರ್ಹ: ಮೋದಿ ರೂಪಿಸಿದ್ದ ಕಾನೂನು..!

ಕಾಂಗ್ರೆಸ್‌ನಿಂದ ಯಾವುದೇ ಸಕಾರಾತ್ಮಕ ಬೆಂಬಲ ಸಿಕ್ಕಿಲ್ಲ

ಕಾಂಗ್ರೆಸ್ ದೇಶದಲ್ಲಿ 60 ವರ್ಷದ ಸರ್ಕಾರ ನಡೆಸಿದೆ. ಆದ್ರೆ ಕಾಂಗ್ರೆಸ್‌ನಿಂದ ಯಾವುದೇ ಸಕಾರಾತ್ಮಕ ಸಲಹೆಗಳು ನನಗೆ ದೊರೆತಿಲ್ಲ. ಪ್ರಣಬ್ ಮುಖರ್ಜಿ ಇರೋವರೆಗೂ ತಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದು, ಇದು ನನಗೆ ತುಂಬಾ ಸಹಾಯವಾಗಿದೆ. ಪ್ರಣಬ್ ಮುಖರ್ಜಿ ಅವರ ಕಾಲನಂತರ ವಿರೋಧ ಪಕ್ಷಗಳಿಂದ ಯಾವುದೇ ಉತ್ತಮ ಸಲಹೆ ನಮಗೆ ದೊರೆತಿಲ್ಲ. ನಾನು ಗುಜರಾತ್ ಸಿಎಂ ಆಗಿದ್ದ ಅನುಭವ, ಪಕ್ಷ ಮತ್ತು ಸಹೋದ್ಯೋಗಿಗಳ ಸಹಕಾರದಿಂದ 10 ವರ್ಷ ಆಡಳಿತ ನಡೆಸಲು ಸಾಧ್ಯವಾಗಿದೆ.

ಕಾಂಗ್ರೆಸ್ ದೊಡ್ಮನೆ ಮತದಾನ ಮಾಡಿದ ಕ್ಷೇತ್ರದಲ್ಲಿ 'ಕೈ' ಅಭ್ಯರ್ಥಿಯೇ ಇಲ್ಲ!

ಎರಡು ದಶಕಗಳಿಂದ ನನ್ನ ಎದುರಾಳಿಯವರು ನಿಂದನೆ ಮಾಡಿಕೊಂಡು ಬಂದಿದ್ದಾರೆ. ಪಿಎಂ ಆಗೋದಕ್ಕೂ ಮುನ್ನ ಮಾಧ್ಯಮ ನನ್ನ ಹಿಂದೆಯೇ ಇರುತ್ತಿತ್ತು. ಪತ್ರಿಕೆ ಮತ್ತು ಮ್ಯಾಗಜೀನ್‌ಗಳಲ್ಲಿ ನನ್ನ ಫೋಟೋವನ್ನು ವ್ಯಂಗ್ಯವಾಗಿ ತೋರಿಸಲಾಗುತ್ತಿತ್ತು. ಇಂದು ಅದೇ ಪತ್ರಿಕೆಗಳಲ್ಲಿ ನನ್ನ ನಗುಮುಖ ಪ್ರಿಂಟ್ ಆಗುತ್ತಿರಬಹುದು ಎಂದು ಹೇಳಿ ನಕ್ಕರು.

click me!