
ನವದೆಹಲಿ: ಸಾಮಾಜಿಕ ಕಾರ್ಯಕರ್ತೆ ಹಾಗೂ ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಅವರನ್ನು ಮಾನಹಾನಿ ಪ್ರಕರಣದಲ್ಲಿ ದಿಲ್ಲಿ ನ್ಯಾಯಾಲಯ ದೋಷಿ ಎಂದು ಘೋಷಿಸಿದೆ.
2000ನೇ ಇಸವಿಯಲ್ಲಿ ಎನ್‌ಜಿಒ ಒಂದರ ಮುಖ್ಯಸ್ಥರಾಗಿದ್ದ ಈಗಿನ ದೆಹಲಿ ಲೆಫ್ಟಿನೆಂಟ್ ಗೌರ್ನರ್ (ಉಪರಾಜ್ಯಪಾಲ) ವಿ.ಕೆ. ಸಕ್ಸೇನಾ ಅವರು ಹಾಕಿದ್ದ ಮಾನಹಾನಿ ದಾವೆ ಇದಾಗಿತ್ತು. ಆದೇಶ ಪ್ರಕಟಿಸಿದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಾಘವ್ ಶರ್ಮಾ, ಮೇಧಾಗೆ ಶಿಕ್ಷೆಯನ್ನು ಇನ್ನೂ ಪ್ರಕಟಿಸಿಲ್ಲ. 2 ವರ್ಷ ಜೈಲು ಶಿಕ್ಷೆ ಹಾಗೂ ದಂಡಕ್ಕೆ ಅವರು ಗುರಿಯಾಗುವ ಸಾಧ್ಯತೆ ಇದೆ.
‘2047ರವರೆಗೂ ದೇವರು ನನ್ನನ್ನು ಕರೆಸಿಕೊಳ್ಳಲ್ಲ’ : ಪ್ರಧಾನಿ ಮೋದಿ
ಏನಿದು ಪ್ರಕರಣ?:
2000 ಇಸವಿಯಲ್ಲಿ ಸಕ್ಸೇನಾ ಅವರ ಸಂಸ್ಥೆಯು ಟೀವಿ ಚಾನೆಲ್ ಹಾಗೂ ಪತ್ರಿಕೆಗಳಿಗೆ ಸಕ್ಸೇನಾ ಅವರ ನರ್ಮದಾ ಬಚಾವೋ ಆಂದೋಲನದ ವಿರುದ್ಧ ಜಾಹೀರಾತು ಪ್ರಕಟಿಸಿತ್ತು. ಆಗ ಪಾಟ್ಕರ್ ಅವರು ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದರು ಎಂದು ಆಪಾದಿಸಿ ಸಕ್ಸೇನಾ ಮೊಕದ್ದಮೆ ದಾಖಲಿಸಿದ್ದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ