ಪ್ರಧಾನಿ ಮೋದಿ ಆಸ್ತಿ 84 ಲಕ್ಷ ಇಳಿಕೆ: ಸ್ಥಿರಾಸ್ತಿ, ವೈಯಕ್ತಿಕ ವಾಹನಗಳಿಲ್ಲ..!

By Kannadaprabha NewsFirst Published Aug 10, 2022, 6:34 AM IST
Highlights

1.1 ಕೋಟಿ ರು. ಮೊತ್ತದ ಸ್ಥಿರಾಸ್ತಿ ದಾನ ಮಾಡಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ(ಆ.10):  ಅಧಿಕಾರದಲ್ಲಿರುವ ವೇಳೆ ರಾಜಕೀಯ ನಾಯಕರ ಆಸ್ತಿ ಗಣನೀಯ ಏರಿಕೆಯಾಗುವುದು ಸಹಜ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿಯಲ್ಲಿ 84 ಲಕ್ಷ ರು.ನಷ್ಟುಇಳಿಕೆಯಾಗಿದೆ. ಕಳೆದ ವರ್ಷ 3.22 ಕೋಟಿ ರು. ಆಸ್ತಿ ಹೊಂದಿದ್ದ ಮೋದಿ ಅವರ ಆಸ್ತಿ ಮೊತ್ತ ಇದೀಗ 2.23 ಕೋಟಿ ರು.ಗೆ ಇಳಿದಿದೆ.

ನರೇಂದ್ರ ಮೋದಿ ಅವರು ಮಾಡಿರುವ ತಮ್ಮ ಆಸ್ತಿ ಘೋಷಣೆ ಅನ್ವಯ ಅವರ ಬಳಿ 2022ರ ಮಾ.31ಕ್ಕೆ ಅಂತ್ಯಗೊಂಡ ಅವಧಿಯಲ್ಲಿ ಕೈಯಲ್ಲಿ 35250 ರು. ನಗದು, 1.89 ಲಕ್ಷ ರು. ಮೌಲ್ಯದ ಜೀವವಿಮೆ, 9.05 ಲಕ್ಷ ರು. ಮೌಲ್ಯದ ಅಂಚೆ ಕಚೇರಿಯ ರಾಷ್ಟ್ರೀಯ ಉಳಿತಾಯ ಪತ್ರ, 1.73 ಲಕ್ಷ ರು. ಬೆಲೆಬಾಳುವ 4 ಚಿನ್ನದ ಉಂಗುರ ಇದೆ. ಉಳಿದಂತೆ ಬಹುತೇಕ ಬ್ಯಾಂಕ್‌ನಲ್ಲಿ ಇಡಲಾಗಿರುವ ಠೇವಣಿಗಳಾಗಿವೆ. ಮೋದಿ ಅವರ ಬಳಿ ಬಾಂಡ್‌, ಮ್ಯೂಚುವಲ್‌ ಫಂಡ್‌, ಷೇರು ಹೂಡಿಕೆ ಇಲ್ಲ. ಯಾವುದೇ ವೈಯಕ್ತಿಕ ವಾಹನವನ್ನು ಹೊಂದಿಲ್ಲ.

ಪ್ರಧಾನಿ ಮೋದಿ ಭೇಟಿ ಮಾಡಿದ ಮಮತಾ ಬ್ಯಾನರ್ಜಿ, 1 ಲಕ್ಷ ಕೋಟಿ ರೂ ಪರಿಹಾರ ಬಿಡುಗಡೆಗೆ ಆಗ್ರಹ!

ಆಸ್ತಿ ದಾನ:

2002ರಲ್ಲಿ ಇತರೆ ಮೂವರೊಂದಿಗೆ ಪಾಲುದಾರಿಕೆಯಲ್ಲಿ 14125 ಚದರಅಡಿ ಜಾಗ ಖರೀದಿಸಿದ್ದರು. ಈ ಪೈಕಿ ಮೋದಿ ಅವರ ಪಾಲಿಗೆ 3531 ಚದರ ಅಡಿ ಜಾಗ ಬಂದಿತ್ತು. ಕಳೆದ ವರ್ಷ ಇದರ ಮೌಲ್ಯ 1.1 ಕೋಟಿ ರು. ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆ ಸ್ಥಿರಾಸ್ತಿಯನ್ನು ಇದೀಗ ಪ್ರಧಾನಿ ಮೋದಿ ದಾನ ಮಾಡಿದ್ದಾರೆ.

ಚರಾಸ್ತಿ ಏರಿಕೆ: 

ಬ್ಯಾಂಕ್‌ ಠೇವಣಿ ಮೊದಲಾದವುದಕ್ಕೆ ಕಳೆದ 1 ವರ್ಷದ ಅವಧಿಯಲ್ಲಿ 26 ಲಕ್ಷ ರು. ಬಡ್ಡಿ ಬಂದಿದೆ.
 

click me!