ಕುಟುಂಬಕ್ಕೆ ಸಂತಾಪ ಪತ್ರ ಕಳಿಸಿ ಜಸ್‌ರಾಜ್‌ ಸ್ಮರಿಸಿದ ಮೋದಿ

By Suvarna NewsFirst Published Sep 4, 2020, 9:34 PM IST
Highlights

ಸಂಗೀತ ದಿಗ್ಗಜನಿಗೆ ಪ್ರಧಾನಿ ಮತ್ತೊಂದು ಸುತ್ತಿನ ನಮನ/ ಸಂತಾಪ ಪತ್ರ ಬರೆದ ಪ್ರಧಾನಿ/ ಜಸ್ ರಾಜ್ ಸಾಧನೆ ಸ್ಮರಣೆ/ ಎಂಭತ್ತು ವರ್ಷದ ಸಂಗೀತ ಸಾಧನೆ

ನವದೆಹಲಿ(ಸೆ.04)  ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ದಿಗ್ಗಜ ಪಂಡಿತ್ ಜಸ್ ರಾಜ್ ಅಪಾರ ಸಂಗೀತ ಸಂಪತ್ತನ್ನು ಬಿಟ್ಟು ಅಗಲಿದ್ದರು. ಪ್ರಧಾನಿ ನರೇಂದ್ರೆ ಮೋದಿ ಆದಿಯಾಗಿ ದಿಗ್ಗಜರು ಸಾಧಕನಿಗೆ ನಮನ ಸಲ್ಲಿಸಿದ್ದರು.

ಪಂಡಿತ್ ಜಸ್ ರಾಜ್ ಪುತ್ರಿ ದುರ್ಗಾ ಜಸ್‌ ರಾಜ್ ಅವರಿಗೆ ವೈಯಕ್ತಿಕವಾಗಿ ಸಂತಾಪ ಪತ್ರ ಬರೆದಿರುವ ಪ್ರಧಾನಿ ಮೋದಿ ಜಸ್ ರಾಜ್ ಸಂಗೀತ ಸಾಧನೆಯನ್ನು ಕೊಂಡಾಡಿದ್ದಾರೆ.

ಸಂಗೀತ ಲೋಕವನ್ನೇ ಆವರಿಸಿಕೊಂಡಿದ್ದ ಜಸ್ ರಾಜ್ ಅವರ ಅಗಲಿಕೆ ತುಂಬಲಾರದ ನಷ್ಟ. ಅವರ  ಗಾನ ಆಸ್ವಾದನೆ ಬೇರೆ ಲೋಕಕ್ಕೆ ಕೊಂಡೊಯ್ತುತ್ತಿತ್ತು ಎಂದು ಸ್ಮರಿಸಿಕೊಂಡಿದ್ದಾರೆ.

ಜಸ್‌ರಾಜ್ ಜೀವನ ಮತ್ತು ಸಾಧನೆ

ಶಾಸ್ತ್ರೀಯ ಸಂಗೀತ ಲೋಕ ಎಲ್ಲರನ್ನು ಒಳಕ್ಕೆ ಬಿಟ್ಟುಕೊಳ್ಳುವುದಿಲ್ಲ. ಆದರೆ ಜಸ್ ರಾಜ್ ದಿಗ್ಗಜರಾಗಿ ಕಾಣಿಸಿಕೊಂಡಿದ್ದರು. ನಮ್ಮ ಸ್ಮರಣೆಯಲ್ಲಿ ಅವರು ಸದಾ ಇರುತ್ತಾರೆ ಎಂದು ಮೋದಿ ಹೇಳಿದ್ದಾರೆ.

ಭಾರತದ ಸರ್ವೋಚ್ಛ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ ಹಾಗೂ ಪದ್ಮಭೂಷಣ್ ಪುರಸ್ಕಾರಕ್ಕೆ ಗಾಯಕ ಪಾತ್ರವಾಗಿದ್ದು ಅಮೆರಿಕದ ನ್ಯೂ ಜರ್ಸಿಯಲ್ಲಿ ನಿಧನರಾಗಿದ್ದರು.

 

 

click me!