ಯುವಜನಾಂಗ ಅಡ್ಡ ದಾರಿ ಹಿಡಿಯುವುದನ್ನು ತಡೆಯಬೇಕಿದೆ: ಪ್ರಧಾನಿ ಮೋದಿ!

Published : Sep 04, 2020, 06:12 PM IST
ಯುವಜನಾಂಗ ಅಡ್ಡ ದಾರಿ ಹಿಡಿಯುವುದನ್ನು ತಡೆಯಬೇಕಿದೆ: ಪ್ರಧಾನಿ ಮೋದಿ!

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅಡ್ಡ ದಾರಿ ಹಿಡಿಯುವ ಯುವ ಜನಾಂಗದ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಭಯೋತ್ಪಾದಕತೆ ಸೇರಿದಂತೆ ಹಲವು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದನ್ನು ತಡೆಯಬೇಕಿದೆ ಎಂದು ಮೋದಿ ಹೇಳಿದ್ದಾರೆ. ಈ ಕುರಿತು ಮೋಡಿ ಮಾತುಗಳ ವಿವರ ಇಲ್ಲಿದೆ

ನವದೆಹಲಿ(ಸೆ.04):  ಜಮ್ಮ ಮತ್ತು ಕಾಶ್ಮೀರದಲ್ಲಿ ಯುವ ಜನಾಂಗ ಭಯೋತ್ಪಾದಕತೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳತ್ತ ಹೋಗುವುದನ್ನು ತಡೆಯಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ದಿಕ್ಷಾಂತ್ ಪರೇಡ್‌ನಲ್ಲಿ  ಐಪಿಎಸ್ ಪ್ರೊಬೇಶನರಿಗಳನ್ನುದ್ದೇಶಿ ಮೋದಿ ಮಾತನಾಡಿದರು.

ವಿಶ್ವಾಸಾರ್ಹ ವ್ಯವಹಾರಕ್ಕೆ ಎಲ್ಲರ ಆಯ್ಕೆ ಭಾರತ; ಅಮೆರಿಕ ಉದ್ಯಮಕ್ಕೆ ಮೋದಿ ಸ್ವಾಗತ!

ವಿಡಿಯೋ ಕಾಲ್ ಮೂಲಕ ಮಾತನಾಡಿದ ಮೋದಿ, ಜಮ್ಮ ಮತ್ತು ಕಾಶ್ಮೀರದಲ್ಲಿ ಕೆಲ ಯುವಕರನ್ನು ಸರಿದಾರಿಗೆ ತರಬೇಕಿದೆ ಎಂದರು. ಇದೇ ವೇಳೆ ಕೊರೋನಾ ವೈರಸ್ ಸಂದರ್ಭದಲ್ಲಿ ಪೊಲೀಸರು ಕಾರ್ಯವನ್ನು ಶ್ಲಾಘಿಸಿದರು. ಖಾಖಿ ಧರಿಸಿ ನೀವು ಮಾಡಿದ ಸೇವೆಗೆ ಸಲಾಂ ಎಂದು ಮೋದಿ ಹೇಳಿದ್ದಾರೆ. ನಿಮ್ಮ ಸಮವಸ್ತ್ರ ಕುರಿತು ನಿಮಗೆ ಯಾವತ್ತೂ ಗೌರವ ಹಾಗೂ ಹೆಮ್ಮೆ ಇರಬೇಕು ಎಂದರು.

ಚೌಕಿದಾರನ ಖಾತೆಗೆ ಖದೀಮರಿಂದ ಕನ್ನ; ಪಿಎಂ ಪರಿಹಾರ ನಿಧಿ ಮೇಲೆ ಅವರ ಕಣ್ಣು..!.

ಎಲ್ಲಾ ಸಂದರ್ಭ ಎದರಿಸಲು ಸಜ್ಜಾಗಿರಬೇಕು. ಸದಾ ಎಚ್ಚರದಿಂದ ಇರಬೇಕು. ಹೀಗಾಗಿ ಒತ್ತಡಗಳೇ ಹಚ್ಚಾಗಿರುತ್ತದೆ. ಇದರ ನಡುವೆ ಆಪ್ತರೊಂದಿಗೆ, ಸ್ಥಳೀಯರೊಂದಿಗೆ ಮಾತನಾಡಿ ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಯೋಗ ಹಾಗೂ ಪ್ರಾಣಾಯಾಮ ಎಲ್ಲಾ ಕಾಲಕ್ಕೂ ಉತ್ತಮವಾಗಿದೆ ಎಂದು ಐಪಿಎಸ್ ಪ್ರೊಬೇಶನರಿಗಳಿಗೆ ಕಿವಿ ಮಾತು ಹೇಳಿದರು.

 ಪ್ರತಿ ವರ್ಷ ಐಪಿಎಲ್ ತೇರ್ಗಡೆಯಾದವರೊಂದಿಗೆ ಮಾತನಾಡುತ್ತೇನೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಲ್ಲರ ಜೊತೆ ಚರ್ಚಿಸುತ್ತಿದ್ದೆ.  ಆದರೆ ಕೊರೋನಾ ವೈರಸ್ ಕಾರಣ ಯಾರನ್ನೂ ಭೇಟಿಯಾಗಲೂ  ಈ ಬಾರಿ ಸಾಧ್ಯವಾಗಿಲ್ಲ ಎಂದು ಮೋದಿ ಹೇಳಿದರು 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?