PM Security Breach ರಾಷ್ಟ್ರಪತಿ ಭೇಟಿಯಾದ ನರೇಂದ್ರ ಮೋದಿ, ಭದ್ರತಾ ಲೋಪ ಕುರಿತು ಗಂಭೀರ ಚರ್ಚೆ!

By Suvarna News  |  First Published Jan 6, 2022, 3:07 PM IST
  • ಪಂಜಾಬ್‌ನಲ್ಲಿ ಪ್ರಧಾನಿ ಮೋದಿ ಎದುರಾದ ಭದ್ರತಾ ಲೋಪ ಪ್ರಕರಣ
  • ರಾಷ್ಟ್ರಪತಿ ಭೇಟಿಯಾಗಿ ಮಾಹಿತಿ ನೀಡಿದ ಪ್ರಧಾನಿ ನರೇಂದ್ರ ಮೋದಿ
  • ಭದ್ರತೆ ಲೋಪದ ಕುರಿತು ಚರ್ಚೆ, ಕಳವಳ ವ್ಯಕ್ತಪಡಿಸಿದ ಕೋವಿಂದ್
     

ನವದೆಹಲಿ(ಜ.06):  ಪ್ರಧಾನಿ ನರೇಂದ್ರ ಮೋದಿ(PM Narendra Modi) ಭದ್ರತೆಯಲ್ಲಿ ನಡೆದ ಲೋಪ(Security Breach) ಪ್ರಕರಣ ಇದೀಗ ರಾಜಕೀಯ ಮೇಲಾಟಕ್ಕೂ ಕಾರಣವಾಗಿದೆ. ಆದರೆ ಭದ್ರತಾ ಲೋಪ ನಡೆದಿದೆ ಅನ್ನೋದು ಸ್ಪಷ್ಟವಾಗಿದೆ. ಇದರ ಬೆನ್ನಲ್ಲೇ  ಇದೀಗ ನರೇಂದ್ರ ಮೋದಿ  ರಾಷ್ಟ್ರಪತಿ ರಾಮನಾಥ್ ಕೋವಿಂದ್(President Ram Nath Kovind ) ಭೇಟಿಯಾಗಿ ಮಾಹಿತಿ ನೀಡಿದ್ದಾರೆ. ಭದ್ರತಾ ಲೋಪದ ಕುರಿತು ಮಾಹಿತಿ ಪಡೆದ ರಾಮನಾಥ್ ಕೋವಿಂದ್, ದೇಶದಲ್ಲಿ ಈ ರೀತಿ ಘಟನೆ ನಡೆದಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. 

ಭೇಟಿಯಲ್ಲಿ ಪ್ರಧಾನಿ ಮೋದಿ ಬಳಿಯಿಂದ ಭದ್ರತಾ ಲೋಪದ ಕುರಿತು ಮೊದಲ ಮಾಹಿತಿ ಪಡೆದುಕೊಂಡಿದ್ದಾರೆ. ಅತ್ಯುನ್ನತ ನಾಯಕನಿಗೆ ನೀಡಬೇಕಿದ್ದ ಭದ್ರತೆಯಲ್ಲಿ ಲೋಪವಾಗಲೇಬಾರದು. ಸಣ್ಣ ಲೋಪಕ್ಕೂ ಅವಕಾಶವಿಲ್ಲ. ಹೀಗಿರುವಾಗ ಆತಂಕಕಾರಿ ಬೆಳವಣಿಗೆಯೇ ನಡೆದುಹೋಗಿದೆ ಎಂದು ರಾಮನಾಥ್ ಕೋವಿಂದ್ ಕಳವಳ ವ್ಯಕ್ತಪಡಿಸಿದ್ದಾರೆ. 

Tap to resize

Latest Videos

 

President Ram Nath Kovind met Prime Minister Narendra Modi at the Rashtrapati Bhavan today and received from him a first-hand account of the security breach in his convoy in Punjab yesterday. The President expressed his concerns about the serious lapse. pic.twitter.com/lzvAuriuGb

— President of India (@rashtrapatibhvn)

PM Modi security breach : ರಾಷ್ಟ್ರಪತಿ, ಮಾಜಿ ಪ್ರಧಾನಿ ದೇವೇಗೌಡ ಕಳವಳ, ಹಿಂದೆಯೂ ಆಗಿತ್ತು ಇಂಥ ಘಟನೆಗಳು!

ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪದ ಕುರಿತು ಕ್ಯಾಬಿನೆಟ್ ಕಮಿಟಿ ಆನ್ ಸೆಕ್ಯೂರಿಟಿ(CCS)ತುರ್ತು ಸಭೆ ನಡೆಸಿದೆ. ಇತ್ತ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು(Vice President M Venkaiah Naidu ), ಮೋದಿ ಜೊತೆ ಮಾತನಾಡಿದ್ದಾರೆ. ಈ ವೇಳೆ ಘಟನೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿ ಘಟನೆ ಮರುಕಳಿಸದಂತೆ ನೋಡಿಕೊಳ್ಳಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದರು. 

ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗಾ ಶಿಲನ್ಯಾಸಕ್ಕಾಗಿ ಪಂಜಾಬ್‌ಗೆ(Punjab) ತೆರಳಿದ ಪ್ರದಾನಿ ನರೇಂದ್ರ ಮೋದಿ ಭದ್ರತಾ ಲೋಪದ ಕಾರಣ ಕಾರ್ಯಕ್ರಮಕ್ಕೆ ತೆರಳು ಸಾಧ್ಯವಾಗದೇ ಮರಳಿ ದೆಹಲಿಗೆ ವಾಪಾಸ್ಸಾಗಿದ್ದರು. ಮೋದಿ ತೆರಳು ರಸ್ತೆಯಲ್ಲಿಯಲ್ಲಿ ಪ್ರತಿಭಟನೆಗೆ ಪಂಜಾಬ್ ಪೊಲೀಸರು(Punjab police) ಅನುಮತಿ ನೀಡಲಾಗಿತ್ತು. ಹೀಗಾಗಿ ಪ್ರಧಾನಿ ಮೋದಿ 20 ನಿಮಿಷಗಳ ಕಾಲ ರಸ್ತೆಯಲ್ಲಿ ಸಿಲುಕಿದ್ದರು. ಈ ವೇಳೆ ಗರಿಷ್ಠ ಭದ್ರತೆಯ ಪ್ರಧಾನಿ ಮೋದಿ ಕಾರಿನ ಸಮೀಪದಲ್ಲಿ ಸಾರ್ವಜನಿಕರ ವಾಹನಗಳು ಸಾಗಲು ಪಂಜಾಬ್ ಪೊಲೀಸರು ಅನುಮತಿ ನೀಡಲಾಗಿತ್ತು. ಸೂಕ್ತ ಭದ್ರತೆ ಇಲ್ಲದ ಕಾರಣ ಪ್ರಧಾನಿ ಮೋದಿ ಪ್ರವಾಸ ಮೊಟಕುಗೊಳಿಸಿದ್ದರು. 

PM Modi security breach: ಪಂಜಾಬ್ ಸರ್ಕಾರದಿಂದ ತನಿಖೆ, ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ!

ಪಂಜಾಬ್ ಬೆಜಿಪಿ(BJP) ಘಟಕ ರಾಜ್ಯಪಾಲರನ್ನು ಭೇಟಿಯಾಗಿ ಪ್ರಧಾನಿ ಮೋದಿ ಭದ್ರತೆಯಲ್ಲಿ ಲೋಪವೆಸಗಿದ ಪಂಜಾಬ್ ಗೃಹ ಸಚಿವ ಸುಖ್ಜಿಂದರ್ ರಂಧವಾ ಹಾಗೂ ಡಿಜಿಪಿ ಸಿದ್ದಾರ್ಥ್ ಚಟ್ಟೋಪಾದ್ಯ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ. ಮೋದಿ ಭದ್ರತಾ ಲೋಪದಲ್ಲಿ ಪಂಜಾಬ್ ಕಾಂಗ್ರೆಸ್ ಸರ್ಕಾರದ ಕೈವಾಡವಿದೆ. ಸಿಎಂ ಚರಣಜಿತ್ ಸಿಂಗ್ ಚನಿ(Cm Charanjit singh channi) ಸಂಚುಕೋರ ಎಂದು ಪಂಜಾಬ್ ಬಿಜೆಪಿ ಅಧ್ಯಶ್ರ ಅಶ್ವಿನಿ ಶರ್ಮಾ ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ನೇಮಕ ಮಾಡಿರುವ ವಿಚಾರಣ ಸಮಿತಿ ಮೇಲೆ ನಂಬಿಕೆ ಇಲ್ಲ. ಹೀಗಾಗಿ ಈ ತನಿಖೆಯಿಂದ ಸತ್ಯ ಹೊರಬರುವ ಸಾಧ್ಯತೆಗಳೂ ಇಲ್ಲ ಎಂದು ಅಶ್ವಿನಿ ಶರ್ಮಾ ಹೇಳಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ರ್ಯಾಲಿಗೆ ಸೇರಿದ ಜನಸಾಗರ ನೋಡಿ ಬೆಚ್ಚಿಬಿದ್ದಿರುವ ಕಾಂಗ್ರೆಸ್ ಈ ರೀತಿಯ ಕುತಂತ್ರ ಮಾಡಿದೆ. ಇದಕ್ಕೆ ಪಂಜಾಬ್ ಕಾಂಗ್ರೆಸ್ ಸರ್ಕಾರ ದುಬಾರಿ ಬೆಲೆ ತೆರಬೇಕಾಗುತ್ತದೆ ಎಂದು ಅಶ್ವಿನಿ ಶರ್ಮಾ ಹೇಳಿದ್ದಾರೆ.

ಮಾಜಿ ಭದ್ರತಾ ಅಧಿಕಾರಿಗಳು ಪಂಜಾಬ್ ಪೊಲೀಸರ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಾಯುಮಾರ್ಗದಲ್ಲಿ ಸಾಗುತ್ತಿದ್ದರೂ, ರಸ್ತೆ ಮಾರ್ಗವನ್ನೂ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು. ಇದು ನಿಯಮ. ಆದರೆ ಇಲ್ಲಿ ಪಂಜಾಬ್ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮಾಜಿ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ. ಇದೀಗ ಈ ಘಟನೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ರಾಜಕೀಯ ಮೇಲಾಟಕ್ಕೂ ಕಾರಣವಾಗಿದೆ.
 

click me!