PM Modi security breach : ರಾಷ್ಟ್ರಪತಿ, ಮಾಜಿ ಪ್ರಧಾನಿ ದೇವೇಗೌಡ ಕಳವಳ, ಹಿಂದೆಯೂ ಆಗಿತ್ತು ಇಂಥ ಘಟನೆಗಳು!

By Suvarna News  |  First Published Jan 6, 2022, 1:22 PM IST

ದೇಶದ ಅಗ್ರ ನಾಯಕರ ರಕ್ಷಣೆಯಲ್ಲಿ ಯಾವುದೇ ಲೋಪ ಸಲ್ಲದು ಎಂದ ಮಾಜಿ ಪ್ರಧಾನಿ ದೇವೇಗೌಡ
ಭದ್ರತಾ ಲೋಪದ ಬಗ್ಗೆ ಆತಂಕ ವ್ಯಕ್ತಪಡಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್
ಪ್ರಧಾನ ಮಂತ್ರಿ ಭದ್ರತೆಯಲ್ಲಿ ಆಗಿದ್ದ ಲೋಪಗಳ ಹಿನ್ನೋಟ


ನವದೆಹಲಿ (ಜ.6): ಪ್ರಧಾನಿ ನರೇಂದ್ರ ಮೋದಿ ( Prime Minister Narendra Modi)ಅವರ ಭದ್ರತೆಯಲ್ಲಿ ಭಾರೀ ಲೋಪವಾದ (security breach) ಪ್ರಕರಣದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (President Ram Nath Kovind) ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ (H. D. Deve Gowda) ಆತಂಕ ವ್ಯಕ್ತಪಡಿಸಿದ್ದಾರೆ. ದೇಶದ ಅಗ್ರ ನಾಯಕರ ಭದ್ರತೆಯಲ್ಲಿ ಇಂಥ ಲೋಪಗಳು ಯಾವುದೇ ಕಾರಣಕ್ಕೂ ಆಗಬಾರದು ಎಂದು ಹಿರಿಯ ರಾಜಕಾರಣಿ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಟ್ವೀಟ್ ಮಾಡಿದ್ದಾರೆ. ಇನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡ ಈ ಕುರಿತಾಗಿ ಕಳವಳ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲಿಯೇ ಇದರ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನಡುವೆ ಮಾತುಕತೆ ನಡೆಯಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

"ಪ್ರಧಾನಿ ಭದ್ರತೆ ವಿಚಾರದಲ್ಲಿ ವಿವಾದ ಉಂಟಾಗಿರುವುದು ಅತ್ಯಂತ ದುರದೃಷ್ಟಕರ. ಭಾರತದ ಅತ್ಯುನ್ನತ  ಕಚೇರಿಯನ್ನು ರಕ್ಷಿಸಲು ನಾವು ಯಾವುದೇ ಹಂತದಲ್ಲೂ ಸಂತೃಪ್ತರಾಗಬಾರದು. ನಾವು ಹಿಂದಿನಿಂದ ಕಲಿಯಬೇಕು" ಎಂದು ಮಾಜಿ ಪ್ರಧಾನಿ ದೇವೇಗೌಡ ಟ್ವೀಟ್ ಮಾಡಿದ್ದಾರೆ.

It is very unfortunate that there is a controversy over the security of the Prime Minister. At no point should we be complacent when it comes to protecting the highest executive office of India. We should learn from the past.

— H D Devegowda (@H_D_Devegowda)


ಪ್ರಧಾನಿ ಭದ್ರತೆಯಲ್ಲಿ ಲೋಪ ಹಿಂದೆಯೂ ಆಗಿತ್ತು ಘಟನೆಗಳು
ಮಾಜಿ ಪ್ರಧಾನಿ ಇಂದಿರಾಗಾಂಧಿ (Indira Gandhi) ಹಾಗೂ ರಾಜೀವ್ ಗಾಂಧಿ (Rajiv Gandhi) ಹತ್ಯೆಯ ಬಳಿಕ ದೇಶದಲ್ಲಿ ಪ್ರಧಾನಿ (Prime Minister) ಭದ್ರತೆಗೆ ಸರ್ವ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಇದರಲ್ಲಿ ಯಾವ ಚ್ಯುತಿ ಬಾರದಂತೆ ನೋಡಿಕೊಳ್ಳುವುದು ಪ್ರಧಾನಿ ಯಾವ ರಾಜ್ಯಕ್ಕೆ ಭೇಟಿ ನೀಡುತ್ತಾರೋ ಅಯಾ ರಾಜ್ಯದ ಪೊಲೀಸ್ (State Police) ವ್ಯವಸ್ಥೆಯದ್ದಾಗಿರಲಿದೆ. ಆದರೆ, ಪ್ರಧಾನಿ ಭದ್ರತೆಯಲ್ಲಿ ಲೋಪಗಳಾಗುವ ಸುದ್ದಿ ಇದು ಮೊದಲನೆಯದಲ್ಲ. ಹಾಗಾದರೆ ಹಿಂದಿನ ಘಟನೆಗಳು ಯಾವವು ಎನ್ನವ ಲಿಸ್ಟ್ ಇಲ್ಲಿದೆ.

2019 ಫೆಬ್ರವರಿ: ಪಶ್ಚಿಮ ಬಂಗಾಳದ (West Bengal) ನಗರದಿಂದ ಸುಮಾರು 100 ಕಿಮೀ ದೂರದಲ್ಲಿರುವ ಉತ್ತರ 24 ಪರಗಣಗಳ ಅಶೋಕನಗರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಮಾವೇಶದಲ್ಲಿ ಸ್ಪಷ್ಟವಾದ ಭದ್ರತಾ ಲೋಪ ಸಂಭವಿಸಿತ್ತು. ಈ ಉಲ್ಲಂಘನೆಯು ಕಾಲ್ತುಳಿತದಂತಹ ಪರಿಸ್ಥಿತಿಗೆ ಕಾರಣವಾಯಿತು, ಎಸ್‌ಪಿಜಿ (SPG)ಪ್ರಧಾನಿ ರಕ್ಷಣೆಗೆ ಧಾವಿಸುವ ಮುನ್ನ ಕೇವಲ 20 ನಿಮಿಷಕ್ಕೆ ಮೋದಿ ತಮ್ಮ ಭಾಷಣವನ್ನು ಮೊಟಕು ಮಾಡಿದ್ದರು.

2018 ಮೇ: ಪ್ರಧಾನಿ ಮೋದಿ ಅವರ ಅಭಿಮಾನಿ ಎಂದು ಹೇಳಿಕೊಂಡ ವ್ಯಕ್ತಿ, ವಿಶ್ವ ಭಾರತಿ ಘಟಿಕೋತ್ಸವದ (Visva-Bharati convocation) ಮುಕ್ತಾಯದ ನಂತರ ಎಸ್ ಪಿಜಿ ರಕ್ಷಣಾ ಕೋಟೆಯನ್ನು ಭೇದಿಸಿ ಮೋದಿ ಸಮೀಪಕ್ಕೆ ಹೋಗುವ ಮೂಲಕ ಭದ್ರತಾ ಲೋಪ ಉಂಟಾಗಿತ್ತು.

2017 ಡಿಸೆಂಬರ್: 2017ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತರ ಪ್ರದೇಶದ (Uttar Pradesh) ಗೌತಮ ಬುದ್ಧ ನಗರದಲ್ಲಿ ಮೆಟ್ರೋ ಲೈನ್ (Metro Line) ಉದ್ಘಾಟನೆಗೆ ತೆರಳಿದ್ದರು. ಈ ವೇಳೆ ಪ್ರಧಾನಮಂತ್ರಿಯ ಬೆಂಗಾವಲು ಪಡೆಯನ್ನು 2 ನಿಮಿಷದವರೆಗೆ ನೋಯ್ಡಾ ಪೊಲೀಸರು ಬೇರೆ ಮಾರ್ಗದತ್ತ ತಳ್ಳಿದ್ದರು. ಪ್ರಧಾನಿ ಭದ್ರತೆಯಲ್ಲಿ ಲೋಪ ಕಂಡ ಕಾರಣದಿಂದಾಗಿ ನೋಯ್ಡಾದ ಇಬ್ಬರು ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿತ್ತು.

Tap to resize

Latest Videos

2014 ಡಿಸೆಂಬರ್: ಅಕ್ಟೋಬರ್ 31 ರಂದು ಮಹಾರಾಷ್ಟ್ರದ (Maharashtra) ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯ ಉಲ್ಲಂಘನೆಗೆ ಕಾರಣವಾದ ನಿರ್ಲಕ್ಷ್ಯದ ಆರೋಪದ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳು ಸೇರಿದಂತೆ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿತ್ತು. 

2010 ಡಿಸೆಂಬರ್: ಪ್ರಧಾನಿ ಮನಮೋಹನ್ ಸಿಂಗ್ (Prime Minister Manmohan Singh) ಕೇರಳಕ್ಕೆ (Kerala) ಭೇಟಿ ನೀಡಿದ ಸಂದರ್ಭದಲ್ಲಿ ಖಾಸಗಿ ಕಾರ್, ಪ್ರಧಾನಿ ಬೆಂಗಾವಲು ಪಡೆಯ ವಾಹನದೊಂದಿಗೆ ಸಂಚಾರ ಮಾಡಿದ್ದು ಆತಂಕಕ್ಕೆ ಕಾರಣವಾಗಿತ್ತು. ಕೇರಳ ಸರ್ಕಾರ ಕೊನೆಗೆ ಇದರಲ್ಲಿ ಯಾವುದೇ ಲೋಪ ಉಂಟಾಗಿಲ್ಲ ಎಂದು ಸಮಜಾಯಿಷಿ ನೀಡಿತ್ತು.

2006 ನವೆಂಬರ್: ಪೈಲಟ್ ಕಾರು ತಪ್ಪು ದಾರಿಯಲ್ಲಿ (Wrong Route) ಸಾಗಿದ ಹಿನ್ನೆಲೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ (Prime Minister Manmohan Singh)ಅವರ ಬೆಂಗಾವಲು ಪಡೆಗೆ ಅಡ್ಡಿ ಉಂಟಾಗಿತ್ತು. ಈ ಕುರಿತಾಗಿ ಕೇರಳ ಸರ್ಕಾರದಿಂದ (Kerala government) ಪ್ರಧಾನಮಂತ್ರಿ ಕಚೇರಿ (PMO) ವಿವರವಾದ ವರದಿ ನೀಡುವಂತೆ ಹೇಳಿತ್ತು.

2006 ಜುಲೈ: ಭದ್ರತೆಯ ಗಂಭೀರ ಉಲ್ಲಂಘನೆಯಲ್ಲಿ, ಮೂವರು ಯುವಕರು ಪ್ರಧಾನಿ ಮನಮೋಹನ್ ಸಿಂಗ್ ಅವರ ನಿವಾಸದ ಒಳಗಿನ ಗೇಟ್‌ಗಳಲ್ಲಿ ಬಳಿಗೆ ಓಡಿದ್ದರು. ಬಳಿಕ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕೊನೆಗೆ ಭದ್ರತಾ ಲೋಪದ ವರದಿಗಳನ್ನು ಪ್ರಧಾನಿ ಕಚೇರಿ ನಿರಾಕರಿಸಿತ್ತು.

click me!