ಟಿಕೆಟ್ ಜೊತೆ ಗಿಡ ಕೊಡೋ ಕಂಡಕ್ಟರ್: ಮೋದಿ ಮನಕೀ ಬಾತ್‌ನ ಇಂಟ್ರೆಸ್ಟಿಂಗ್ ವಿಚಾರಗಳಿವು

Suvarna News   | Asianet News
Published : Mar 28, 2021, 11:09 AM ISTUpdated : Mar 28, 2021, 12:00 PM IST
ಟಿಕೆಟ್ ಜೊತೆ ಗಿಡ ಕೊಡೋ ಕಂಡಕ್ಟರ್: ಮೋದಿ ಮನಕೀ ಬಾತ್‌ನ ಇಂಟ್ರೆಸ್ಟಿಂಗ್ ವಿಚಾರಗಳಿವು

ಸಾರಾಂಶ

ಮನ್‌ ಕೀ ಬಾತ್ ಕಾರ್ಯಕ್ರಮ | 2021ರ ಮೂರನೇ ಕಾರ್ಯಕ್ರಮದಲ್ಲಿ ಮೋದಿ ಮಾತು | ಪ್ರಧಾನಿ ಹೇಳಿದ ಪ್ರಮುಖ ವಿಚಾರಗಳಿವು

ಪ್ರಧಾನಿ ನರೇಂದ್ರ ಮೋದಿ ಅವರು 2021ರ ಮೂರನೇ ಮನ್‌ ಕೀ ಬಾತ್ ಕಾರ್ಯಕ್ರಮದಲ್ಲಿ ಜನರೊಂದಿಗೆ ಮಾತನಾಡಿದ್ದಾರೆ. ಇದು ಈ ವರ್ಷದ ಮೂರನೇ ಕಾರ್ಯಕ್ರಮ. ಮೋದಿ ಮಾತಿನ ಹೈಲೈಟ್ಸ್ ಹೀಗಿವೆ ನೋಡಿ

ಮನ್‌ ಕೀ ಬಾತ್ ಕೇಳುವುದಕ್ಕೆ ಪ್ರಧಾನಿ ಮೋದಿ ಧನ್ಯವಾದ ಹೇಳಿದ್ದಾರೆ. ಭಾರತ ಮಾತೆಯ ಮಡಿಲಲ್ಲಿ ಬಹಳಷ್ಟು ರತ್ನಗಳಿವೆ. 75 ಎಪಿಸೋಡ್‌ಗಳಲ್ಲಿ ಬಹಳಷ್ಟು ವಿಚಾರಗಳನ್ನು ಮಾತನಾಡಿದ್ದೇವೆ. ಟೆಕ್ನಾಲಜಿ, ಬೆಟ್ಟ, ನದಿ, ಯಾವುದೇ ಕೋಣೆಯಲ್ಲಿ ನಡೆವ ಕೆಲಸದ ಬಗ್ಗೆ ಎಲ್ಲವನ್ನೂ ಮಾತನಾಡಿದ್ದೇವೆ.

ನಾವು ವಿಶ್ವದ ವಿಚಾರಗಳಲ್ಲಿ ಚರ್ಚಿಸಿದ್ದೇವೆ. ಅಮೃತ ಮಹೋತ್ಸವ ಬಹಳಷ್ಟು ಪ್ರೇರಣಾತ್ಮಕ ವಿಚಾರಗಳಿಂದ ತುಂಬಲಿದೆ. ಅಮೃತ ಮಹೋತ್ಸವ ಸಂದರ್ಭ ಹೊಸ ಸಂಕಲ್ಪ ಮಾಡೋಣ, ಅದನ್ನು ನಿಜ ಮಾಡೋಣ ಎಂದಿದ್ದಾರೆ.

ತಮ್ಮ ಗೆಲುವಿಗಾಗಿ ಬಿಜೆಪಿ ನಾಯಕನ ಮೊರೆ ಹೋದ ಮಮತಾ

ಭಾರತ ಇಂದು ವಿಶ್ವದ ಅತ್ಯಂತ ದೊಡ್ಡ ವ್ಯಾಕ್ಸಿನೇಷನ್ ಕಾರ್ಯಕ್ರಮ ನಡೆಸುತ್ತಿದೆ. ದೇಶದ ಕೋಣೆ ಕೋಣೆಯಿಂದ ಮನಸು ಮುಟ್ಟುವ ಸುದ್ದಿ, ದೃಶ್ಯ ನೋಡುತ್ತಿದ್ದೇವೆ. ಅವರೆಲ್ಲ ಕೊರೋನಾ ಲಸಿಕೆ ತೆಗೆದುಕೊಳ್ಳುತ್ತಿದ್ದಾರೆ.

ವ್ಯಾಕ್ಸಿನ್ ಸೇವಾ ಎಂಬಂತಹ ಟ್ಯಾಗ್ ಮಾಡಿಯೂ ಬಹಳಷ್ಟು ಜನರು ತಮ್ಮ ಮನೆಯ ಹಿರಿಯರು ವ್ಯಾಕ್ಸಿನ್ ಪಡೆಯುವ ಫೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ನಾನು ಈ ಫೋಟೋಗಳನ್ನು ಟ್ವಿಟರ್‌ಗಳಲ್ಲಿ ನೋಡುತ್ತಿದ್ದೇನೆ ಎಂದಿದ್ದಾರೆ.

ಮಿಥಾಲಿ ರಾಜ್ ಅವರನ್ನು ಹೊಗಳಿದ ಪ್ರಧಾನಿ ಮೋದಿ ಅವರು 7000 ರನ್ಸ್ ಮಾಡಿದ್ದಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ.ಇವರ ಸಾಧನೆ ಮಹಿಳಾ ಕ್ರಿಕೆಟರ್‌ಗಳಿಗೆ ಮತ್ತು ಪುರುಷರಿಗೂ ಪ್ರೇರಣೆಯಾಗಲಿ ಎಂದಿದ್ದಾರೆ. ನಮ್ಮ ಹೆಣ್ಮಕ್ಕಳು ಕ್ರೀಡೆಯಲ್ಲಿ ಅವರ ಹೊಸ ಛಾಪು ಮೂಡಿಸುತ್ತಿದ್ದಾರೆ. ಇದು ಬಹಳ ಖುಷಿಯ ವಿಚಾರ ಎಂದಿದ್ದಾರೆ.

ವಿದೇಶಿ ಹಸುಹಾಲು ಕುಡಿದು ಮಹಿಳೆಯರ ಸೊಂಟ ಹಿಗ್ಗಿದೆ : ಡಿಎಂಕೆ ಮುಖಂಡ

ನಾನು ಇತ್ತೀಚಿನ ಸಮ್ಮಿಟ್‌ನಲ್ಲಿ ಲೈಟ್ ಹೌಸ್ ಸಮೀಪದಲ್ಲಿ ಟೂರಿಸಂ ಅಭಿವೃದ್ಧಿ ಪಡಿಸುವ ಬಗ್ಗೆ ಮಾತನಾಡಿದ್ದೆ. ಇದಕ್ಕೆ ಸಂಬಂಧಿಸಿ ಚೆನ್ನೈನ ವ್ಯಕ್ತಿ ಗುರುಪ್ರಸಾದ್ ಅವರು ಅಲ್ಲಿನ ಲೈಟ್‌ಹೌಸ್‌ಗಳ ಬಗ್ಗೆ ಮಾತನಾಡಿದ್ದಾರೆ. ಭಾರತದ ಅತ್ಯಂತ ಪುರಾತನ ಲೈಟ್‌ಹೌಸ್‌ ಬಗ್ಗೆಯೂ ಅವರು ಮಾತನಾಡಿದ್ದಾರೆ. ಲೈಟ್‌ಹೌಸ್‌ಗಳಲ್ಲಿ ಮ್ಯೂಸಿಯಂಗಳಲ್ಲಿ, ಮಕ್ಕಳ ಪಾರ್ಕ್, ಕಾಟೇಜ್, ಥಿಯೇಟರ್‌ಗಳು ನಿರ್ಮಾಣವಾಗಲಿದೆ.

ಜಪಾನ್‌ನಲ್ಲಿ ಬಂದಂತಹ ಸುನಾಮಿ 2004ರಲ್ಲಿ ಭಾರತದಲ್ಲಿ ಬಂದಿತ್ತು. ಅಲ್ಲಿಂದಲೇ ಸಿಬ್ಬಂದಿ ಕೆಲಸ ಮಾಡಿದ್ದರು. ಅವರ ಕೆಲಸಗಳಿಗೆ, ತ್ಯಾಗಗಳಿಗೆ ಧನ್ಯವಾದಗಳು ಎಂದಿದ್ದಾರೆ.

ಜೇನು ಸಾಕಣೆಯೂ ಈಗ ಪ್ರಮುಖ ಉದ್ಯಮವಾಗಿ ಮುಂದುವರಿಯುತ್ತಿದೆ. ಪಶ್ಚಿಮ ಬಂಗಾಳದ ಜನರು ಹನೀ ಬೀ ಫಾರ್ಮಿಂಗ್ ಮಾಡುತ್ತಾರೆ. ಈಗ ಇಲ್ಲಿನ ಜೇನಿಗೆ ಭಾರೀ ಬೇಡಿಕೆ ಇದೆ. ಸುಂದರಬನದ ರುಚಿಯಾದ ಜೇನು ಪ್ರಸಿದ್ಧ. ದೇಶದ ರೈತರು ಅವರ ಕೃಷಿಯ ಜೊತೆ ಜೇನು ಕೃಷಿಯನ್ನೂ ಮಾಡಿ. ಇದು ಒಂದು ಹೆಚ್ಚಿನ ಆದಾಯವಾಗಿ ಬದಲಾಗಲಿದೆ ಎಂದಿದ್ದಾರೆ.

ಗುಬ್ಬಚ್ಚಿ ದಿನದ ಬಗ್ಗೆ ಮಾತನಾಡಿದ ಪ್ರಧಾನಿ

ಮೊದಲು ನಮ್ಮ ಮನೆಯ ಗೋಡೆ, ಕಿಟಕಿಯಲ್ಲಿ ಗುಬ್ಬಚ್ಚಿಗಳಿದ್ದವು. ಈಗ ಅದನ್ನು ಕಾಣುವುದು ಕಷ್ಟ. ಪತ್ರಾಜಿ ಅವರು ತಮ್ಮ ಮನೆಯಲ್ಲೇ ಗುಬ್ಬಚ್ಚಿ ಗೂಡುಗಳನ್ನು ಮಾಡಿದ್ದಾರೆ. ಮನೆಯಲ್ಲಿಯೇ ಪ್ರಕೃತಿಯ ಸುಂದರ ವಾತಾವರಣ ನಿರ್ಮಿಸಿದ್ದಾರೆ. ಈ ಮೂಲಕ ಗುಬ್ಬಚ್ಚಿಗಳನ್ನು ರಕ್ಷಿಸುತ್ತಿದ್ದಾರೆ.ಇದನ್ನು ಎಲ್ಲರೂ ಮಾಡಬೇಕಿದೆ ಎಂದಿದ್ದಾರೆ.

ಬಸ್ ಟಿಕೆಟ್ ಜೊತೆ ಗಿಡ

ಯೋಗಿನಾಥನ್ ಅವರು ಟಿಕೆಟ್ ಜೊತೆ ಗಿಡಗಳನ್ನೂ ಜನರಿಗೆ ನೀಡುತ್ತಾರೆ. ತಮ್ಮ ವೇತನವನ್ನು ಗಿಡಗಳನ್ನು ಮಾಡಲು ಬಳಸುತ್ತಾರೆ. ಈ ಮೂಲಕ ಪರಿಸರ ರಕ್ಷಣೆಗೆ ಕೊಡುಗೆ ನೀಡುತ್ತಿದ್ದಾರೆ ಎಂದಿದ್ದಾರೆ.

ವೇಸ್ಟ್‌ನಿಂದ ವಾಲ್ಯೂ

ಕೇರಳದ ಕೊಚ್ಚಿ ಕಾಲೇಜಿನಲ್ಲಿ ಬೇಡ ವಸ್ತುಗಳನ್ನು ಬಳಸಿ ಒಳ್ಳೊಳ್ಳೆ ವಸ್ತುಗಳನ್ನು ತಯಾರಿಸುತ್ತಾರೆ. ಆಟಿಕೆಗಳನ್ನು ತಯಾರಿಸಿ ಅಂಗನವಾಡಿ ಮಕ್ಕಳಿಗೆ ಇದನ್ನು ಕಳುಹಿಸಿಕೊಡಲಾಗುತ್ತಿದೆ.

ಹೊಸ ಆರಂಭದ ಅರ್ಥ ಹೊಸ ಸಾಧ್ಯತೆ. ಯಾವುದೇ ಕಾರ್ಯವನ್ನು ನಾವು ಉತ್ಸವಗಳ ಮೂಲಕ ಆರಂಭಿಸುತ್ತೇವೆ. ಬಣ್ಣಗಳಿಂದ ಹೋಲಿ ಆಚರಿಸುವಾಗ ವಸಂತವೂ ಶುರುವಾಗುತ್ತದೆ. ಯುಗಾದಿ, ಗುಡಿಪದ್ವಾ, ವಿಶು ಹೀಗೆ ವಿಶೇಷವಾಗಿ ಹೊಸ ವರ್ಷ ಆಚರಿಸಲಾಗುತ್ತದೆ. ಈ ಎಲ್ಲ ಹಬ್ಬಗಳ ಆಚರಣೆಗೆ ಜನರಿಗೆ ಮೋದಿ ಶುಭಾಶಯ ತಿಳಿಸಿದ್ದಾರೆ,

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!