Mann Ki Baat: ಏಕತಾ ದಿನದ ಸ್ಪರ್ಧೆ ವಿಜೇತ ಚಾಮರಾಜನಗರ ಜಿಲ್ಲೆಯ ಮಂಜುನಾಥ್‌ಗೆ ಪ್ರಧಾನಿ ಮೋದಿ ಶ್ಲಾಘನೆ

By BK Ashwin  |  First Published Feb 26, 2023, 12:01 PM IST

ನಿಮ್ಮ ಮನಸ್ಸಿನ ಶಕ್ತಿ ನಿಮಗೆ ತಿಳಿದಿದೆ. ಅದೇ ರೀತಿ, ಸಮಾಜದ ಶಕ್ತಿಯೊಂದಿಗೆ ದೇಶದ ಶಕ್ತಿಯು ಹೇಗೆ ಹೆಚ್ಚಾಗುತ್ತದೆ ಎಂಬುದನ್ನು ನಾವು 'ಮನ್ ಕಿ ಬಾತ್' ನ ವಿವಿಧ ಸಂಚಿಕೆಗಳಲ್ಲಿ ನೋಡಿದ್ದೇವೆ, ಅರ್ಥ ಮಾಡಿಕೊಂಡಿದ್ದೇವೆ ಮತ್ತು ಅನುಭವಿಸಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ.


ನವದೆಹಲಿ (ಫೆಬ್ರವರಿ 26, 2023) : ಪ್ರಧಾನಿ ಮೋದಿ 20223ರ ಎರಡನೇ ಹಾಗೂ ತಮ್ಮ 98ನೇ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ. ಈ 'ಮನ್ ಕಿ ಬಾತ್' ನ 98 ನೇ ಸಂಚಿಕೆಯಲ್ಲಿ ನಿಮ್ಮೆಲ್ಲರ ಜೊತೆ ಸೇರಲು ನನಗೆ ಅಪಾರ ಸಂತೋಷವಾಗಿದೆ ಎಂದು ಮಾತು ಆರಂಭಿಸಿದ ಪ್ರಧಾನಿ, ಶತಮಾನದತ್ತ ಸಾಗುತ್ತಿರುವ ಈ ಪಯಣದಲ್ಲಿ ನೀವೆಲ್ಲರೂ 'ಮನ್ ಕಿ ಬಾತ್' ಅನ್ನು ಸಾರ್ವಜನಿಕ ಸಹಭಾಗಿತ್ವದ ಅಭಿವ್ಯಕ್ತಿಗೆ ಅದ್ಭುತವಾದ ವೇದಿಕೆಯನ್ನಾಗಿ ಮಾಡಿದ್ದೀರಿ" ಎಂದು ಪ್ರಧಾನಿ ಹರ್ಷ ವ್ಯಕ್ತಪಡಿಸಿದ್ದಾರೆ.

‘ಸಮಾಜದ ಶಕ್ತಿಯಿಂದ ದೇಶದ ಶಕ್ತಿ ಹೆಚ್ಚುತ್ತದೆ’
ನಿಮ್ಮ ಮನಸ್ಸಿನ ಶಕ್ತಿ ನಿಮಗೆ ತಿಳಿದಿದೆ. ಅದೇ ರೀತಿ, ಸಮಾಜದ ಶಕ್ತಿಯೊಂದಿಗೆ ದೇಶದ ಶಕ್ತಿಯು ಹೇಗೆ ಹೆಚ್ಚಾಗುತ್ತದೆ ಎಂಬುದನ್ನು ನಾವು 'ಮನ್ ಕಿ ಬಾತ್' ನ ವಿವಿಧ ಸಂಚಿಕೆಗಳಲ್ಲಿ ನೋಡಿದ್ದೇವೆ, ಅರ್ಥ ಮಾಡಿಕೊಂಡಿದ್ದೇವೆ ಮತ್ತು ಅನುಭವಿಸಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ.

Tap to resize

Latest Videos

undefined

ಇದನ್ನು ಓದಿ: Mann Ki Baat: ಕರ್ನಾಟಕದ 3 ಸಂಸ್ಥೆಗಳಿಗೆ ಪ್ರಧಾನಿ ಮೋದಿ ಪ್ರಶಂಸೆ

ಕರ್ನಾಟಕದ ವ್ಯಕ್ತಿಗೆ ಶ್ಲಾಘನೆ

ಈ ಮಧ್ಯೆ, 'ಏಕ್ತಾ ದಿವಸ್'ನಲ್ಲಿ ನಡೆದ ಸ್ಪರ್ಧೆಯ ವಿಜೇತರನ್ನು ಪ್ರಧಾನಮಂತ್ರಿ ಘೋಷಿಸಿದ್ದಾರೆ.  ಸರ್ದಾರ್ ಪಟೇಲ್ ಅವರ ಜನ್ಮದಿನದಂದು ಅಂದರೆ 'ಏಕತಾ ದಿನ'ದ ಸಂದರ್ಭದಲ್ಲಿ ಗೀತೆ, ಲಾಲಿ ಹಾಡು ಹಾಗೂ ರಂಗೋಲಿ ಎಂಬ ಮೂರು ಸ್ಪರ್ಧೆಗಳನ್ನು ನಡೆಸಲಾಗಿತ್ತು. ಈ ಪೈಕಿ, ಲಾಲಿ ಹಾಡಿನ ಸ್ಪರ್ಧೆಯಲ್ಲಿ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಬಿ. ಎಂ. ಮಂಜುನಾಥ ಅವರ ʻಮಲಗು ಕಂದʼ ಲಾಲಿ ಹಾಡಿಗೆ ಪ್ರಧಾನಿ ಮೋದಿ ತಮ್ಮ ಮನ್‌ ಕೀ ಬಾತ್‌ನಲ್ಲಿ ಶ್ಲಾಗಿಸಿದ್ದಾರೆ. ಈ ಲಾಲಿ ಹಾಡಿಗೆ ಬಿ. ಎಂ. ಮಂಜುನಾಥ ಅವರಿಗೆ ಪ್ರಥಮ ಬಹುಮಾನ ಸಿಕ್ಕಿದೆ. 

ಅಲ್ಲದೆ, 'ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪ್ರಶಸ್ತಿ' ಬಗ್ಗೆ ಮಾತನಾಡಿದ ಪ್ರಧಾನಿ, ಮನ್‌ ಕೀ ಕಾರ್ಯಕ್ರಮದಲ್ಲಿ ವಾದ್ಯವೊಂದನ್ನು ಸಹ ನುಡಿಸಲಾಗಿದೆ. ಹಾಗೂ, ಫೆಬ್ರವರಿ ತಿಂಗಳ ಕೊನೆಯ ಭಾನುವಾರವಾದ ಇಂದಿನ ಮನ್‌ ಕೀ ಬಾತ್‌ನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಟೆಲಿ ಸಮಾಲೋಚನೆಯನ್ನು ಪ್ರಧಾನಿ ಶ್ಲಾಘಿಸಿದ್ದು, ಟೆಲಿಕನ್ಸಲ್ಟೇಶನ್ ಬಗ್ಗೆ ತಿಳಿದುಕೊಳ್ಳಲು ಸಿಕ್ಕಿಂನ ವೈದ್ಯರೊಂದಿಗೆ ಪ್ರಧಾನಿ ಸಂವಾದ ನಡೆಸಿದರು. ಇ-ಸಂಜೀವನಿ ಆ್ಯಪ್ ಮೂಲಕ ಟೆಲಿಕನ್ಸಲ್ಟೇಶನ್ ಕುರಿತು ಮಾತನಾಡಿದ್ದಾರೆ. ಈ ಮೂಲಕ ಡಿಜಿಟಲ್‌ ಇಂಡಿಯಾದ ಶಕ್ತಿಯನ್ನೂ ಪ್ರಸ್ತಾಪಿಸಿದ್ದಾರೆ. 

ಇದನ್ನೂ ಓದಿ: ಕರ್ನಾಟಕದ ಸಿರಿಧಾನ್ಯ ಕಂಪನಿಗೆ ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಶಹಬ್ಬಾಸಗಿರಿ!

ನಂತರ, ದೇಶದಲ್ಲಿ ಕಣ್ಣರೆಯಾಗಿರುವ ಶ್ರೇಷ್ಠ ಸಂಪ್ರದಾಯಗಳು ಕುರಿತು ಪ್ರಧಾನಿ ಮೋದಿ ತಮ್ಮ ಮನ್‌ ಕೀ ಬಾತ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ನಮ್ಮ ದೇಶದಲ್ಲಿ ಕಣ್ಮರೆಯಾಗಿ, ಜನರ ಮನಸ್ಸು ಮತ್ತು ಹೃದಯದಿಂದ ದೂರ ಸರಿದಿರುವ ಅನೇಕ ಶ್ರೇಷ್ಠ ಸಂಪ್ರದಾಯಗಳಿವೆ, ಆದರೆ ಈಗ ಸಾರ್ವಜನಿಕ ಸಹಭಾಗಿತ್ವದ ಶಕ್ತಿಯಿಂದ ಅವುಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ, ಆದ್ದರಿಂದ 'ಮನ್ ಕೀ ಬಾತ್' ಚರ್ಚಿಸುತ್ತದೆ. ಅದಕ್ಕಿಂತ ಉತ್ತಮವಾದ ವೇದಿಕೆ ಯಾವುದು? ಎಂದು ಪ್ರಧಾನಿ ಮೋದಿ ಪರಶ್ನೆ ಮಾಡಿದ್ದಾರೆ.

ಈ ವೇಳೆ, ಪಶ್ಚಿಮ ಬಂಗಾಳದ ಹೂಗ್ಲಿಯ ತ್ರಿಬೇನಿ ಕುಂಭ ಮಹೋತ್ಸವದ ಕುರಿತು ಪ್ರಧಾನಿ ಮಾತನಾಡುತ್ತಾರೆ. ಬಳಿಕ, ‘ಸ್ವಚ್ಛ ಭಾರತ್ ಮಿಷನ್’ಗಾಗಿ ಹರಿಯಾಣ ಗ್ರಾಮದ ಯುವಕರನ್ನು ಪ್ರಧಾನಿ ಶ್ಲಾಘಿಸಿದ್ದಾರೆ. 

ಇದನ್ನೂ ಓದಿ: ಶಿವಮೊಗ್ಗ ದಂಪತಿ, ಗದಗ ಉದ್ಯಮಿಗೆ ಮೋದಿ ಪ್ರಶಂಸೆ

ಇನ್ನು, ತಮ್ಮ ಮಾಸಿಕ ಮನ್‌ ಕೀ ಬಾತ್‌ನ ಕೊನೆಯಲ್ಲಿ 'ಹೋಳಿ' ಹಬ್ಬಕ್ಕೆ ಮುಂಚಿತವಾಗಿ ಪ್ರಧಾನಮಂತ್ ತಮ್ಮ ಶುಭಾಶಯಗಳನ್ನು ಜನರಿಗೆ ತಿಳಿಸಿದ್ದಾರೆ. ಅಲ್ಲದೆ, 'ಸ್ಥಳೀಯ ವಿಷಯಕ್ಕೆ ಧ್ವನಿಯಾಗುವುದನ್ನು' (Vocal For Local) ಗಮನದಲ್ಲಿಟ್ಟುಕೊಂಡು 'ಹೋಳಿ' ಹಬ್ಬವನ್ನು ಆಚರಿಸುವಂತೆಯೂ ಪ್ರಧಾನಿ ಮೋದಿ ಮನವಿ ಮಾಡಿದರು.

ಇದನ್ನೂ ಓದಿ: Mann Ki Baat: ಗದಗ ಹೋಟೆಲ್ ಉದ್ಯಮಿಯ ಕಲಾಸೇವೆಗೆ ಮನ್ ಕೀ ಬಾತ್ ನಲ್ಲಿ ಮೋದಿ ಮೆಚ್ಚುಗೆ

click me!