*ಇಂದೋರ್‌ನಲ್ಲಿ ತಲೆ ಎತ್ತಿದ ಘಟಕ ಮೋದಿಯಿಂದ ಲೋಕಾರ್ಪಣೆ
*ನಗರದ ತಾಜ್ಯ ಬಳಸಿ ಜೈವಿಕ ಇಂಧನ, ರಸಗೊಬ್ಬರ ತಯಾರಿ ಪರಿಸರ ಸ್ನೇಹಿ ಯೋಜನೆ
ಇಂದೋರ್ (ಫೆ.20): ಬೃಹತ್ ನಗರಗಳಲ್ಲಿನ ತ್ಯಾಜ್ಯವನ್ನೇ ಬಳಸಿಕೊಂಡು ಜೈವಿಕ- ಸಿಎನ್‌ಜಿ ಉತ್ಪಾದಿಸುವ, ಗುಣಮಟ್ಟದ ಸಾವಯವ ರಸಗೊಬ್ಬರ ತಯಾರಿಸುವ ಏಷ್ಯಾದಲ್ಲೇ ಅತಿದೊಡ್ಡ ‘ಗೋಬರ್- ಧನ್’ (GOBAR- Galvanizing Organic Bio-Agro Resources)ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಶನಿವಾರ ಇಲ್ಲಿ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೊದಲು ಟ್ವೀಟ್ ಮಾಡಿದ್ದ ಮೋದಿ ‘ಕಸದಿಂದ ಸಂಪತ್ತು ಪರಿಕಲ್ಪನೆಯಡಿ ನಗರ ಪ್ರದೇಶಗಳನ್ನು ಸ್ವಚ್ಛವಾಗಿಡುವ ಹಾದಿಯಲ್ಲಿ ಬಯೋ- ಸಿಎನ್‌ಜಿ ಘಟಕ ಅತ್ಯಂತ ಶ್ಲಾಘನೀಯ’ ಎಂದು ಬಣ್ಣಿಸಿದ್ದರು.
ವರ್ಚುವಲಿ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ ‘ನಾವು ಮನೆಯಿಂದ, ಪ್ರಾಣಿಗಳ ಮೂಲಕ, ಕೃಷಿ ಭೂಮಿಯ ಮೂಲಕ ಉತ್ಪಾದಿಸುವ ಹಸಿತ್ಯಾಜ್ಯವನ್ನೇ ಬಳಸಿಕೊಂಡು ಅದನ್ನು ಆದಾಯದ ಹೊಸ ಮೂಲಕವಾಗಿ ಮಾಡಿಕೊಳ್ಳುವ ಈ ಯೋಜನೆ ಅತ್ಯಂತ ಮಹತ್ವಪೂರ್ಣವಾದುದು. ಮುಂಬರುವ ದಿನಗಳಲ್ಲಿ ದೇಶದ 75 ದೊಡ್ಡ ಮುನಿಸಿಪಲ್ ವ್ಯಾಪ್ತಿಯಲ್ಲಿ ಇಂಥ ಘಟಕ ಉದ್ದೇಶದ ಗುರಿ ಇದೆ. ಈ ಆಂದೋಲನವು, ಭಾರತದ ನಗರಗಳನ್ನು ಸ್ವಚ್ಛ, ಮಾಲಿನ್ಯ ಮುಕ್ತ, ಸ್ವಚ್ಛ ಇಂಧನ ಬಳಸುವ ನಗರಗಳಾಗಿ ಹೊರಹೊಮ್ಮುವಂತೆ ಮಾಡಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ: Kisan Drones: ಕೃಷಿ ಕೆಲಸಕ್ಕೂ ಡ್ರೋನ್, 100 ಕಿಸಾನ್ ಡ್ರೋನ್‌ಗೆ ಪ್ರಧಾನಿ ಮೋದಿ ಚಾಲನೆ
ಏನಿದು ಯೋಜನೆ?: ಇಂದೋರ್ ನಗರದಲ್ಲಿ ಉತ್ಪಾದನೆಯಾಗುವ ತ್ಯಾಜ್ಯದ ಪೈಕಿ ಹಸಿ ತ್ಯಾಜ್ಯ ಬೇರ್ಪಡಿಸಿ ಅದನ್ನು ಈ ಘಟಕಕ್ಕೆ ವರ್ಗಾಯಿಸಲಾಗುವುದು. 150 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಘಟಕವು ನಿತ್ಯ 17000 ಕೆಜಿ ಸಿಎನ್‌ಜಿ ಮತ್ತು 100 ಟನ್‌ಗಳಷ್ಟುಸಾವಯವ ರಸಗೊಬ್ಬರ ಉತ್ಪಾದಿಸಬಲ್ಲದು. ಈ ಕ್ರಮದಿಂದಾಗಿ ವಾತಾವರಣಕ್ಕೆ ಹಸಿರು ಮನೆ ಅನಿಲ ಬಿಡುಗಡೆ ಕಡಿಮೆಯಾಗುವುದರ ಜೊತೆಗೆ, ಬಳಕೆಗೆ ಸ್ವಚ್ಛ ಇಂಧನ ಲಭ್ಯವಾಗಲಿದೆ.
ಜೈವಿಕ ಘಟಕದ ಪ್ರಮುಖ ಅಂಶಗಳು
- 150 ಕೋಟಿ ರು. ವೆಚ್ಚದಲ್ಲಿ ಜೈವಿಕ- ಸಿಎನ್‌ಜಿ ಘಟಕ ಸ್ಥಾಪನೆ
- ಘಟಕಕ್ಕೆ ನಿತ್ಯ 5.5 ಲಕ್ಷ ಕೆಜಿ ಹಸಿ ತ್ಯಾಜ್ಯ ನಿರ್ವಹಿಸುವ ಸಾಮರ್ಥ್ಯ
- ನಿತ್ಯ 17500 ಕೆಜಿ ಜೈವಿಕ ಅನಿಲ, 100 ಟನ್ ಸಾವಯವ ಗೊಬ್ಬರ ಉತ್ಪಾದನೆ
- ಶೇ.50ರಷ್ಟುಜೈವಿಕ ಅನಿಲ ಸಾರ್ವಜನಿಕ ಸಾರಿಗೆ ವಾಹನಗಳಿಗೆ, ಉಳಿದ ಶೇ.50ರಷ್ಟುಕೈಗಾರಿಕೆಗಳಿಗೆ ಪೂರೈಕೆ
- ಇಂದೋರ್‌ನ 400 ಬಸ್‌ಗಳು ಶೀಘ್ರವೇ ಘಟಕದ ಜೈವಿಕ ಅನಿಲ ಬಳಸಿ ಸಂಚಾರ
- ಹಸಿ ತ್ಯಾಜ್ಯ ಬಳಸಿಕೊಂಡೇ ಶೇ.100ರಷ್ಟುಜೈವಿಕ ಅನಿಲ ಉತ್ಪಾದನೆ
- ಶೇ.96ರಷ್ಟುಶುದ್ಧ ಮೀಥೇನ್ ಬಳಸಿ ಘಟಕದಲ್ಲಿ ಸಿಎನ್‌ಜಿ ಉತ್ಪಾದನೆ
ಇದನ್ನೂ ಓದಿ: IIT UAE: ವಿದೇಶದಲ್ಲಿ ಮೊದಲ ಭಾರತೀಯ ತಂತ್ರಜ್ಞಾನ ಸಂಸ್ಥೆ ಸ್ಥಾಪನೆಗೆ ಐತಿಹಾಸಿಕ ಒಪ್ಪಂದ!
इंदौर की जागरूक बहनों ने कूड़े के प्रबंधन को एक अलग मुकाम पर पहुंचाया है। किसी भी शहर के लोगों की यही भावना, यही प्रयास, स्वच्छ भारत अभियान को सफल बनाने में मददगार साबित होते हैं। स्वच्छता के साथ-साथ रिसाइक्लिंग के संस्कारों को भी सशक्त करना, अपने-आप में देश की बड़ी सेवा है। pic.twitter.com/xt9Rfys2uK
— Narendra Modi (@narendramodi)
ಕರ್ನಾಟಕದ ಗ್ರಾಮ ಪಂಚಾಯ್ತಿಗೆ ಪ್ರಧಾನಿ ಮೋದಿ ಭೇಟಿ: ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್(National Panchayati Raj Day) ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ(PM Narendra Modi) ಅವರು ಏ.24ರಂದು ರಾಜ್ಯದ ಗ್ರಾಮಪಂಚಾಯ್ತಿಯೊಂದಕ್ಕೆ ಭೇಟಿ ನೀಡಲಿದ್ದಾರೆ. ಈ ಸಂಬಂಧ ಈಗಾಗಲೇ ಶಿವಮೊಗ್ಗದ ಹೊಳಲೂರು, ವಿಜಯನಗರ ಜಿಲ್ಲೆಯ ಮಲಪನಗುಡಿ ಮತ್ತು ಕಲಬುರಗಿ ಜಿಲ್ಲೆಯ ಭೀಮಳ್ಳಿ ಗ್ರಾಪಂಗಳನ್ನು ಅಂತಿಮಗೊಳಿಸಲಾಗಿದ್ದು, ಇವುಗಳಲ್ಲಿ ಒಂದು ಗ್ರಾಪಂಗೆ ಪ್ರಧಾನಿ ಭೇಟಿಯ ಅವಕಾಶ ಸಿಗಲಿದೆ.
ಪ್ರಧಾನಿ ಮೋದಿ ಅವರು 2010ರಿಂದ ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್ ಕಾರ‍್ಯಕ್ರಮದ ಭಾಗವಾಗಿ ದೇಶದ ಯಾವುದಾದರೂ ಒಂದು ಗ್ರಾಪಂನ ಕಾರ‍್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ಈ ಬಾರಿ ಅವರು ಕರ್ನಾಟಕದ(Karnataka) ಗ್ರಾಪಂವೊಂದಕ್ಕೆ ಭೇಟಿ ನೀಡಲಿದ್ದಾರೆ. ಅಂದು ಅವರು ಗ್ರಾಮಸಭೆಯಲ್ಲಿ ಭಾಗವಹಿಸಿ ದೇಶದ 2.5 ಲಕ್ಷ ಗ್ರಾಪಂಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂಬಂಧ ಈಗಾಗಲೇ ಮೂರೂ ಗ್ರಾಪಂಗಳಿಂದ ಅಗತ್ಯ ಮಾಹಿತಿ ಸಂಗ್ರಹಿಸುವ ಕೆಲಸ ಆರಂಭವಾಗಿದೆ.