PM Garib Kalyan ಬಡವರಿಗೆ ಉಚಿತ ಆಹಾರ ಧಾನ್ಯ ವಿತರಣೆ ಗರೀಬ್ ಕಲ್ಯಾಣ ಯೋಜನೆ ಮತ್ತೆ 6 ತಿಂಗಳಿಗೆ ವಿಸ್ತರಣೆ!

By Suvarna NewsFirst Published Mar 26, 2022, 7:47 PM IST
Highlights
  • ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ವಿಸ್ತರಣೆ
  • ಪ್ರಧಾನಿ ನರೇಂದ್ರ ಮೋದಿ ಮಹತ್ವದ ಘೋಷಣೆ
  • ಮಾರ್ಚ್ 2022ಕ್ಕೆ ಅಂತ್ಯಗೊಳ್ಳಲಿದ್ದ ಯೋಜನೆ ವಿಸ್ತರಣೆ

ನವದೆಹಲಿ(ಮಾ.26): ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಪುಟ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಘೋಷಣೆ ಮಾಡಿದ್ದಾರೆ. ಕೊರೋನಾ ಸಮಯದಲ್ಲಿ ಬಡವರಿಗೆ ನೀಡಲಾಗುತ್ತಿದ್ದ ಉಚಿತ ಆಹಾರ ಧಾನ್ಯ ಯೋಜನೆಯಾದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ಮತ್ತೆ 6 ತಿಂಗಳಿಗೆ ವಿಸ್ತರಿಸಲಾಗಿದೆ.

ಕೊರೋನಾದಿಂದ ಹಲವು ಬಾರಿ ವಿಸ್ತರಣೆಯಾಗಿದ್ದ ಕರೀಬ್ ಕಲ್ಯಾಣ ಯೋಜನೆ ಮಾರ್ಚ್ 2022ಕ್ಕೆ ಅಂತ್ಯಗೊಳ್ಳುತ್ತಿತ್ತು. ಇಂದು ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿದ ಮೋದಿ, ಸೆಪ್ಟೆಂಬರ್ 2022ರ ವರೆಗೆ ವಿಸ್ತರಿಸಲಾಗಿದೆ.  ಕೊರೋನಾ ಮೊದಲ ಅಲೆ, ಲಾಕ್‌ಡೌನ್ ಸಂಕಷ್ಟದಿಂದ ನಲುಗಿದ ಬಡವರಿಗೆ ಉಚಿತ ಆಹಾರ ಧಾನ್ಯ ನೀಡಲು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಆರಂಭಿಸಲಾಗಿತ್ತು. ಬಳಿಕ ಹಲವು ಬಾರಿ ವಿತರಣೆ ಕಂಡಿತ್ತು. 

PM Garib Kalyan Anna Yojana: ಅದೆಷ್ಟೇ ಅಗ್ನಿ ಪರೀಕ್ಷೆ ಎದುರಾದರೂ ಬಡವರೊಂದಿಗೆ ದೇಶವಿದೆ!

ಉಚಿತ ಆಹಾರ ಧಾನ್ಯ ವಿತರಣೆ ಯೋಜನೆ ವಿಸ್ತರಿಸರಣೆಯಿಂದ ದೇಶದ 80 ಕೋಟಿ ಜನರು ಪ್ರಯೋಜನ ಪಡೆಯಲಿದ್ದಾರೆ. 2020ರಲ್ಲಿ ಉಚಿತ ಪಡಿತರ ಯೋಜನೆ ಘೋಷಣೆ ಮಾಡಿದಾಗ 1.75 ಲಕ್ಷ ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿತ್ತು. 

ಮೊದಲ ಲಾಕ್‌ಡೌನ್ ವೇಳೆ ವಲಸೆ ಕಾರ್ಮಿಕರು ಕೆಲಸ ಕಳೆದುಕೊಂಡು ಸಂಕಷ್ಟ ಅನುಭವಿಸಿದ್ದರು. ಸರಿಸುಮಾರು 120 ಮಿಲಿಯನ್ ವಲಸೆ ಕಾರ್ಮಿಕರು ಕೆಲಸ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನು ಅರಿತಿದ್ದ ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಿಸಿದ ಬೆನ್ನಲ್ಲೇ ಗರೀಬ್ ಕಲ್ಯಾಣ ಯೋಜನೆ ಘೋಷಿಸಿದ್ದರು.

ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಿದ ಸಿದ್ದರಾಮಯ್ಯ

ನವೆಂಬರ್ ತಿಂಗಳಲ್ಲಿ ನಾಲ್ಕು ತಿಂಗಳು ವಿಸ್ತರಣೆ ಮಾಡಿದ್ದ ಕೇಂದ್ರ
2021ರ ನವೆಂಬರ್ ತಿಂಗಳಲ್ಲಿ ಉಚಿತ ಪಡಿತರ ವಿತರಣೆಯನ್ನು ಮತ್ತೆ 4 ತಿಂಗಳಿಗೆ ವಿಸ್ತರಿಸಿತ್ತು. ಕೊರೋನಾ ಹೆಚ್ಚಳ, ಓಮಿಕ್ರಾನ್ ವೈರಸ್ ಭೀತಿ ನಡುವೆ ಹಲವು ರಾಜ್ಯಗಳಲ್ಲಿ ಮತ್ತೆ ನಿರ್ಬಂಧಗಳು ಜಾರಿಯಾಗ ತೊಡಗಿತ್ತು. 
ಕೋವಿಡ್‌ ಸಂಕಷ್ಟಕಾಲದಲ್ಲಿ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರ ಆರಂಭಿಸಿದ್ದ 5 ಕೇಜಿ ಉಚಿತ ಪಡಿತರ ಯೋಜನೆಯನ್ನು 2022ರ ಮಾಚ್‌ರ್‍ವರೆಗೆ ವಿಸ್ತರಿಸಲು ತೀರ್ಮಾನಿಸಿತ್ತು. ಇದರಿಂದ ರಾಜ್ಯ ಸರ್ಕಾರಗಳು ಕೊಡುವ ಪಡಿತರದ ಜತೆಗೆ ಹೆಚ್ಚುವರಿಯಾಗಿ 5 ಕೇಜಿ ಆಹಾರಧಾನ್ಯಗಳು (ಅಕ್ಕಿ/ಗೋದಿ) ಪಡಿತರದಾರರಿಗೆ  ಮಾರ್ಚ್ 2022ರ ವರೆಗೆ ವಿಸ್ತರಿಸಲಾಗಿತ್ತು. ಇದೀಗ ಇದೇ ಪಡಿತರವನ್ನು ಮತ್ತೆ 6 ತಿಂಗಳಿಗೆ ವಿಸ್ತರಿಸಲಾಗಿದೆ.

ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆ ಅನ್ವಯ 80 ಕೋಟಿ ಪಡಿತರ ಫಲಾನುಭವಿಗಳಿಗೆ ಇದರ ಲಾಭ ಸಿಗಲಿದೆ. ಇದಕ್ಕಾಗಿ 53,344 ಕೋಟಿ ರು. ಹೆಚ್ಚುವರಿ ವೆಚ್ಚವನ್ನು ಸರ್ಕಾರ ಮಾಡಲಿದೆ. ಇದರೊಂದಿಗೆ ಉಚಿತ ಪಡಿತರಕ್ಕೆಂದು ಸರ್ಕಾರ ಮಾಡಿದ ಈವರೆಗಿನ ವೆಚ್ಚ 2.6 ಲಕ್ಷ ಕೋಟಿ ರು.ಗೆ ಏರಲಿದೆ.

ಕೋವಿಡ್‌ ಮೊದಲ ಅಲೆ ಎದ್ದಾಗ ಲಾಕ್‌ಡೌನ್‌ ಮಾಡಲಾಗಿತ್ತು. ಆಗ ಲಾಕ್‌ಡೌನ್‌ ಸಂತ್ರಸ್ತರಿಗೆ ನೆರವಾಗಲಿ ಎಂದು 2020ರ ಏಪ್ರಿಲ್‌- ಜೂನ್‌ ಅವಧಿಗೆ ಮೊದಲ ಹಂತದ ಯೋಜನೆ ಜಾರಿ ಮಾಡಲಾಗಿತ್ತು. ಬಳಿಕ 2020ರ ಜುಲೈ- ನವೆಂಬರ್‌ ಅವಧಿಯಲ್ಲಿ 2ನೇ ಹಂತ, 2021ರ ಮೇ- ಜೂನ್‌ ಅವಧಿಗೆ 3ನೇ ಹಂತ, 2021ರ ಜುಲೈ- ನವೆಂಬರ್‌ ಅವಧಿಗೆ 4ನೇ ಹಂತದಲ್ಲಿ ಯೋಜನೆ ಜಾರಿಗೊಂಡಿತ್ತು. ನವೆಂಬರ್‌ನಿಂದ ಮಾರ್ಚ್ ವರೆಗೆ 5ನೇ ಹಂತ ಹಾಗೂ ಇದೀಗ ಮಾರ್ಚ್ 2022 ರಿಂದ ಸೆಪ್ಟೆಂಬರ್ 22ರ ವರೆಗೆ 6ನೇಹಂತದ ವಿಸ್ತರಣೆಯಾಗಿದೆ.
 

click me!