ನನ್ನ ಮೇಲಿನ ಯಾವುದೇ ಬೆದರಿಕೆ ಹಾಗೂ ನಿಂದನೆಗಳಿಗೆ ಹೆದರುವ ಮಾತೇ ಇಲ್ಲ. ದೇಶದ ಪ್ರತಿ ಭ್ರಷ್ಟರ ವಿರುದ್ಧವೂ ಕ್ರಮ ಮುಂದುವರಿಯುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ರುದ್ರಪುರ (ಉತ್ತರಾಖಂಡ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಟೀಕಾಪ್ರಹಾರ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷದ ರಾಯಲ್ ಫ್ಯಾಮಿಲಿಯ ರಾಜಕುಮಾರ, ಬಿಜೆಪಿ ಏನಾದರೂ ಮತ್ತೆ ಅಧಿಕಾರಕ್ಕೆ ಮರಳಿದರೆ ಇಡೀ ದೇಶವೇ ಹೊತ್ತಿ ಉರಿಯಲಿದೆ ಎಂಧು ಘೋಷಣೆ ಮಾಡಿದ್ದಾರೆ. ಇವರುಗಳು ದೇಶವನ್ನು 60 ವರ್ಷಗಳ ಕಾಲ ಆಳಿದ್ದಾರೆ. ಆದರೆ, 10 ವರ್ಷದ ಅಧಿಕಾರ ಇಲ್ಲದೇ ಇರೋದಕ್ಕೆ, ದೇಶವನ್ನೇ ಹೊತ್ತಿ ಉರಿಯುವ ಮಾತುಗಳನ್ನು ಆಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡದ ರುದ್ರಪುರದಲ್ಲಿ ನಡದ ಬಿಜೆಪಿ ಸಮಾವೇಶದಲ್ಲಿ ಹೇಳಿದ್ದಾರೆ. ಇದು ಪ್ರಜಾಪ್ರಭುತ್ವದ ಭಾಷೆಯೇ ಎಂದು ಪ್ರಶ್ನೆ ಮಾಡದ ನರೇಂದ್ರ ಮೋದಿ, ದೇಶದ ಜನರೇ ಇಂಥ ವ್ಯಕ್ತಿಗಳಿಗೆ ಶಿಕ್ಷೆ ನೀಡಬೇಕು ಎಂದು ಹೇಳಿದ್ದಾರೆ. 'ಇಂಥ ಒಬ್ಬೊಬ್ಬರನ್ನೇ ಆಯ್ಕೆ ಮಾಡಿ ಅವರನ್ನು ಮೈದಾನದಿಂದ ಹೊರಹಾಕುವ ಪಣ ತೊಡಬೇಕು ಎಂದು ಹೇಳಿದ್ದಾರೆ. "ತುರ್ತು ಪರಿಸ್ಥಿತಿ ಮೈಂಡ್‌ಸೆಟ್' ಹೊಂದಿರುವ ಕಾಂಗ್ರೆಸ್ ಇನ್ನು ಮುಂದೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿಲ್ಲ ಎಂದು ಅವರು ಹೇಳಿದರು. "ಅದಕ್ಕಾಗಿಯೇ ಅವರು ಜನಾದೇಶದ ವಿರುದ್ಧ ಜನರನ್ನು ಪ್ರಚೋದಿಸುವಲ್ಲಿ ನಿರತರಾಗಿದ್ದಾರೆ" ಎಂದು ಟೀಕಿಸಿದ್ದಾರೆ.
ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಜಂಟಿ ವಿರೋಧ ಪಕ್ಷದ ಸಮಾವೇಶದಲ್ಲಿ ರಾಹುಲ್ ಗಾಂಧಿ ಮಾಡಿದ ಟೀಕೆಗಳಿಗೆ ಅವರು ತಿರುಗೇಟು ನೀಡಿದ್ದಾರೆ. ಇಂಡಿಯಾ ಬ್ಲಾಕ್‌ನ ಉನ್ನತ ನಾಯಕರು ಭಾಗವಹಿಸಿದ್ದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ, ಮುಂಬರುವ ಲೋಕಸಭೆ ಚುನಾವಣೆಯನ್ನು ಬಿಜೆಪಿ ಮತ್ತು ಪ್ರಧಾನಿ "ಫಿಕ್ಸಿಂಗ್" ಮಾಡಿದ್ದಾರೆ ಎಂದು ಆರೋಪಿಸಿದರು. "ಇವಿಎಂಗಳು, ಮ್ಯಾಚ್ ಫಿಕ್ಸಿಂಗ್, ಸಾಮಾಜಿಕ ಮಾಧ್ಯಮಗಳು ಮತ್ತು ಪತ್ರಿಕಾ ಒತ್ತಡವಿಲ್ಲದೆ ಅವರು 180 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ" ಎಂದಿದ್ದರು. "ಬಿಜೆಪಿ ಈ ಫಿಕ್ಸ್ಡ್ ಚುನಾವಣೆಗಳನ್ನು ಗೆದ್ದು ನಂತರ ಸಂವಿಧಾನವನ್ನು ಬದಲಾಯಿಸಿದರೆ, ಇಡೀ ದೇಶವೇ ಹೊತ್ತಿ ಉರಿಯುತ್ತದೆ, ನನ್ನ ಮಾತುಗಳನ್ನು ಕೇಳಿಸಿಕೊಳ್ಳಿ, ಈ ದೇಶ ಉಳಿಯುವುದಿಲ್ಲ" ಎಂದು ಅವರು ಹೇಳಿದರು.
ಇದಕ್ಕೆ ರುದ್ರಪುರ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮುಂದಿನ ಚುನಾವಣೆಯಲ್ಲಿ ಎರಡು ಪಾಳಯಗಳು ಎದುರಾಗುತ್ತಿವೆ. ‘ಒಂದೆಡೆ ಪ್ರಾಮಾಣಿಕತೆ, ಪಾರದರ್ಶಕತೆಯನ್ನು ಜನರಿಗೆ ತಲುಪಿಸುತ್ತಿದ್ದೇವೆ, ಮತ್ತೊಂದೆಡೆ ಭ್ರಷ್ಟರು, ರಾಜವಂಶಸ್ಥರು ಗುಂಪುಗೂಡಿದ್ದಾರೆ, ಈ ಭ್ರಷ್ಟರು ಮೋದಿಯವರನ್ನು ನಿಂದಿಸಿ ಬೆದರಿಕೆ ಹಾಕುತ್ತಿದ್ದಾರೆ, ನಾವು ‘ಭ್ರಷ್ಟಾಚಾರ ತೊಲಗಿಸಿ’ ಎಂದು ಹೇಳುತ್ತಿದ್ದೇವೆ. ಅವರು ಭ್ರಷ್ಟರನ್ನು ಉಳಿಸಿ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.
ಅಕ್ರಮ ಮದ್ಯ ನೀತಿ ಪ್ರಕರಣದಲ್ಲಿ ಇಡೀ ವಿರೋಧ ಪಕ್ಷಗಳು ಜೈಲುಪಾಲಾಗಿರುವ ಗುಜರಾತ್ ಸಿಎಂ ಅರವಿಂದ್ ಕೇಜ್ರಿವಾಲ್ ಪರ ನಿಂತ ವಿಚಾರದಲ್ಲಿ ಮೋಧಿ ಟೀಕೆ ಮಾಡಿದರು. ಬೆದರಿಕೆಗಳು ಮತ್ತು ನಿಂದನೆಗಳಿಗೆ ಹೆದರುವುದಿಲ್ಲ ಎಂದ ಪ್ರಧಾನಿ "ಪ್ರತಿಯೊಬ್ಬ ಭ್ರಷ್ಟರ ವಿರುದ್ಧ ಕ್ರಮ ಮುಂದುವರಿಯುತ್ತದೆ" ಎಂದರು. "ನಮ್ಮ ಮೂರನೇ ಅವಧಿಯ ಆರಂಭದಲ್ಲಿ, ಭ್ರಷ್ಟಾಚಾರದ ಮೇಲೆ ದೊಡ್ಡ ದಾಳಿ ನಡೆಯಲಿದೆ, ನಾನು ಅದನ್ನು ಖಾತರಿಪಡಿಸುತ್ತೇನೆ" ಎಂದು ಅವರು ಹೇಳಿದರು.ಸಂಬಂಧಿತ ಬೆಳವಣಿಗೆಯಲ್ಲಿ, ಬಿಜೆಪಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಇವಿಎಂಗಳ ಕುರಿತು ಗಾಂಧಿಯವರ ಹೇಳಿಕೆಯನ್ನು ಟೀಕೆ ಮಾಡಿದ್ದು ಮತ್ತು ಅವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ.
ಇಂಡಿಯಾ ಮೈತ್ರಿ VS ಇಂಡಿಯಾ ಮೈತ್ರಿ: ವಯನಾಡ್‌ನಲ್ಲಿ ರಾಹುಲ್ ಗಾಂಧಿ ಸ್ಪರ್ಧೆಗೆ ಕೇರಳ ಸಿಎಂ ಕಿಡಿ!
'ಇದು ಫಿಕ್ಸ್ಡ್ ಮ್ಯಾಚ್..' ಎಂದು ಹೇಳಿದ್ದಾರೆ. ಇಸಿಯಲ್ಲಿ ಸರ್ಕಾರವು ತನ್ನದೇ ಆದ ಜನರನ್ನು ಹೊಂದಿದ್ದು, ಇವಿಎಂ ಇಲ್ಲದೆ ಚುನಾವಣೆಗಳನ್ನು ಗೆಲ್ಲಲು ಸಾಧ್ಯವಿಲ್ಲ ಎನ್ನುತ್ತಾರೆ. ರಾಹುಲ್ ಗಾಂಧಿಯವರ ಭಾಷಣವು ಚುನಾವಣಾ ಪ್ರಕ್ರಿಯೆ ಮತ್ತು ಭಾರತದ ಚುನಾವಣಾ ಆಯೋಗದ ನಿಷ್ಪಕ್ಷಪಾತದ ಬಗ್ಗೆ ಭಾರತೀಯ ಜನರ ಮನಸ್ಸಿನಲ್ಲಿ ಅನುಮಾನ ಮತ್ತು ಅಪನಂಬಿಕೆಯ ಬೀಜಗಳನ್ನು ಬಿತ್ತುವ ಉದ್ದೇಶದ ಟೀಕೆಗಳನ್ನು ಒಳಗೊಂಡಿದೆ" ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ರಾಹುಲ್ ಮ್ಯಾಚ್ ಫಿಕ್ಸಿಂಗ್ ಹೇಳಿಕೆ ವಿರುದ್ಧ ಕ್ರಮ ಕೋರಿ ಆಯೋಗಕ್ಕೆ ಬಿಜೆಪಿ ದೂರು