ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪುಣೆಯಲ್ಲಿ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದರು. ಪ್ರಶಸ್ತಿಯೊಂದಿಗೆ ಸಿಕ್ಕ ಹಣವನ್ನು ನಮಾಮಿ ಗಂಗೆ ಯೋಜನೆಗೆ ಅರ್ಪಿಸಿದ ಅವರು, ಇದು ನನಗಲ್ಲ ಇಡೀ ದೇಶದ ಜನರ ಪ್ರಶಸ್ತಿ ಎಂದು ಹೇಳಿದ್ದಾರೆ.
ಪುಣೆ (ಆ.1): ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪುಣೆಯಲ್ಲಿ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದರು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಈ ಪ್ರಶಸ್ತಿ ಜೊತೆಗೆ ಬಂದ ಹಣವನ್ನು ನಮಾಮಿ ಗಂಗೆ ಯೋಜನೆಗೆ ನೀಡುವುದಾಗಿ ಹೇಳಿದ ಅವರು ಇದು ಇಡೀ ದೇಶದ ಜನರಿಗೆ ಸಿಕ್ಕ ಪ್ರಶಸ್ತಿ ಎಂದಿದ್ದಾರೆ. ಮಂಗಳವಾರ ಬೆಳಗ್ಗೆ 11 ಗಂಟೆಯ ವೇಳೆಗೆ ಪುಣೆಗೆ ಆಗಮಿಸಿದ ಅವರು ಮೊದಲು ದಗ್ದುಶೇತ್ ಹಲ್ವಾಯಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇದಾದ ಬಳಿಕ ಎಸ್ ಪಿ ಕಾಲೇಜು ಮೈದಾನಕ್ಕೆ ಆಗಮಿಸಿದ ಅವರು ತಿಲಕ್ ಸ್ಮಾರಕ ಮಂದಿರ ಟ್ರಸ್ಟ್ ವತಿಯಿಂದ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಉಪಸ್ಥಿತರಿದ್ದರು. ಶರದ್ ಪವಾರ್ ಅವರು ಪ್ರಧಾನಿ ಮೋದಿಯವರ ಒಂದು ಬದಿಯಲ್ಲಿ ಕುಳಿತಿದ್ದರು ಮತ್ತು ಇನ್ನೊಂದು ಬದಿಯಲ್ಲಿ ಅವರ ಸೋದರಳಿಯ ಅಜಿತ್ ಪವಾರ್ ವೇದಿಕೆಯಲ್ಲಿ ಕುಳಿತಿದ್ದರು. ಪುಣೆಯ ನೆಲದಲ್ಲಿ ಈ ಪ್ರಶಸ್ತಿ ಸ್ವೀಕರಿಸಿದ್ದು ನನಗೆ ಮರೆಯಲಾಗದ ಅನುಭವ ಎಂದು ಈ ಸಂದರ್ಭದಲ್ಲಿ ಪ್ರಧಾನಿ ಹೇಳಿದರು.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಂದ ಪ್ರಧಾನಿ ಮೋದಿ ಪ್ರಶಸ್ತಿಯನ್ನು ಸ್ವೀಕರಿಸಿದರು. 'ಈ ಪ್ರಶಸ್ತಿ ನೀಡಿದ್ದಕ್ಕೆ ಸಂಸ್ಥೆಗೆ ಹೃತ್ಪೂರ್ವಕ ಧನ್ಯವಾದಗಳು. ಈ ದಿನ ನನಗೆ ಬಹಳ ಮುಖ್ಯವಾದ, ಹಾಗೂ ನೆನಪಿನಲ್ಲಿರುವ ದಿನ. ಸ್ವಾತಂತ್ರ್ಯ ಹೋರಾಟದಲ್ಲಿ ತಿಲಕರ ಪಾತ್ರ, ಪದಗಳಲ್ಲಿ ಅಥವಾ ಕೆಲವು ಘಟನೆಗಳ ಮೂಲಕ ಹೇಳಲು ಸಾಧ್ಯವಿಲ್ಲ. ಈ ಪ್ರಶಸ್ತಿಯನ್ನ ದೇಶದ 140 ಕೋಟಿ ಜನರಿಗೆ ಅರ್ಪಿಸುತ್ತೇನೆ . ಈ ಪ್ರಶಸ್ತಿಯ ಹಣವನ್ನ ನಮಾಮಿ ಗಂಗೆ ಯೋಜನೆಗೆ ನೀಡಲು ನಿರ್ಣಯಿಸಿದ್ದೇನೆ ಎಂದು ಲೋಕಮಾನ್ಯ ತಿಲಕ ಪ್ರಶಸ್ತಿ ಪಡೆದ ಬಳಿಕ ಮೋದಿ ಮಾತನಾಡಿದ್ದಾರೆ.
ದೇಶ ಭಕ್ತಿಗಲ್ಲ, ದೇಶವನ್ನು ದೋಚಲು 'ಇಂಡಿಯಾ' ಹೆಸರು ಬಳಕೆ: ಮೋದಿ
‘ವ್ಯವಸ್ಥಾ ನಿರ್ಮಾಣ್ ಸೇ ಸಂಸ್ಥೆ ನಿರ್ಮಾಣ’, ‘ವ್ಯಕ್ತಿ ನಿರ್ಮಾಣ್ ಸೇ ವ್ಯಕ್ತಿ ನಿರ್ಮಾಣ’, ‘ವ್ಯಕ್ತಿ ನಿರ್ಮಾಣ್ ಸೇ ರಾಷ್ಟ್ರ ನಿರ್ಮಾಣ’ ಯೋಜನೆಗಳು ರಾಷ್ಟ್ರ ನಿರ್ಮಾಣದ ಮಾರ್ಗಸೂಚಿಯಂತೆ ಕೆಲಸ ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತವು ಇಂದು ಈ ಮಾರ್ಗಸೂಚಿಯನ್ನು ಶ್ರದ್ಧೆಯಿಂದ ಅನುಸರಿಸುತ್ತಿದೆ ಎಂದಿದ್ದಾರೆ. ಲೋಕಮಾನ್ಯ ತಿಲಕರು ಯುವ ಪ್ರತಿಭೆಗಳನ್ನು ಗುರುತಿಸುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದ್ದರು, ವೀರ್ ಸಾವರ್ಕರ್ ಅಂತಹ ಒಂದು ಉದಾಹರಣೆಯಾಗಿದೆ ಎಂದು ಹೇಳಿದರು.