ಮುಸ್ಲಿಂ ಮಹಿಳೆಯರ ಗೋಳು ಕೇಳದ ಹಿಂದಿನ ಸರ್ಕಾರ: Narendra Modi

By Kannadaprabha NewsFirst Published Feb 24, 2022, 1:30 AM IST
Highlights

ವಂಶಪರಂಪರೆ ಆಡಳಿತಕ್ಕೆ ಮಣೆ ಹಾಕಿದ್ದ ಪ್ರತಿಪಕ್ಷಗಳು ಕೇವಲ ಮತಬ್ಯಾಂಕ್‌ ರಾಜಕೀಯ ನಡೆಸಿದವು. ತ್ರಿವಳಿ ತಲಾಖ್‌ನಂಥ ಪಿಡುಗಿನಿಂದ ಮುಸ್ಲಿಂ ಮಹಿಳೆಯರು ಅನುಭವಿಸಿದ ಬೆಟ್ಟದೆತ್ತರದ ಗೋಳನ್ನು ಕೇಳಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ದೂಷಿಸಿದರು.

ಬಾರಾಬಂಕಿ (ಫೆ.24): ವಂಶಪರಂಪರೆ ಆಡಳಿತಕ್ಕೆ ಮಣೆ ಹಾಕಿದ್ದ ಪ್ರತಿಪಕ್ಷಗಳು ಕೇವಲ ಮತಬ್ಯಾಂಕ್‌ ರಾಜಕೀಯ ನಡೆಸಿದವು. ತ್ರಿವಳಿ ತಲಾಖ್‌ನಂಥ (Triple Talaq) ಪಿಡುಗಿನಿಂದ ಮುಸ್ಲಿಂ ಮಹಿಳೆಯರು ಅನುಭವಿಸಿದ ಬೆಟ್ಟದೆತ್ತರದ ಗೋಳನ್ನು ಕೇಳಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ದೂಷಿಸಿದರು.

ಉತ್ತರಪ್ರದೇಶ ವಿಧಾನಸಭೆ ಚುನಾವಣೆ (Uttar Pradesh Election) ನಿಮಿತ್ತ ಬಾರಾಬಂಕಿಯಲ್ಲಿ ನಡೆದ ಬೃಹತ್‌ ಬಿಜೆಪಿ (BJP) ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಅವರು, ‘ಕೊರೋನಾ (Coronavirus) ಮಹಾಮಾರಿಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ 80 ಕೋಟಿ ಬಡವರಿಗೆ ಉಚಿತ ಆಹಾರ ಧಾನ್ಯ ಹಂಚಿತು. ಇಂಥ ಯೋಜನೆಗಳಿಂದ ಲಾಭ ಪಡೆದವರು ಬಿಜೆಪಿ ವಿಜಯ ಧ್ವಜದ ಮೆರವಣಿಗೆ ನಡೆಸಿದ್ದಾರೆ. ಇದರಿಂದ ವಿಪಕ್ಷಗಳಲ್ಲಿ ನಡುಕ ಸೃಷ್ಟಿಯಾಗಿದೆ’ ಎಂದರು.

ಇದೇ ವೇಳೆ, ‘ಕುಟುಂಬ ಇಲ್ಲದವರಿಗೆ ಜನರ ನೋವು ಅರ್ಥ ಆಗಲ್ಲ’ ಎಂದು ತಮ್ಮನ್ನು ಉದ್ದೇಶಿಸಿ ಎಸ್‌ಪಿ ನಾಯಕ ಅಖಿಲೇಶ್‌ ಯಾದವ್‌ (Akhilesh Yadav) ಮಾಡಿದ ಟೀಕೆಗೆ ತಿರುಗೇಟು ನೀಡಿದ ಅವರು, ‘ಹಾಗಿದ್ದರೆ ಕುಟುಂಬ ಇದ್ದವರನ್ನೇ ಕೇಳಿ. ಗಂಡನ ಮನೆಯಲ್ಲಿ ಕಂಗೆಟ್ಟು ತವರಿಗೆ ಮರಳಿದ ಮುಸ್ಲಿಂ ಸೋದರಿಯರು, ಪುತ್ರಿಯರು ಹಾಗೂ ಕುಟುಂಬದ ನೋವನ್ನು ಅವರು ಕೇಳಿದ್ದರಾ?’ ಎಂದು ಕಿಡಿಕಾರಿದರು. ‘ಇಂಥ ಕುಟುಂಬಶಾಹಿಗಳು ಕೇವ ಮತ ಬ್ಯಾಂಕ್‌ ನೋಡಿದರೇ ವಿನಾ ತ್ರಿವಳಿ ತಲಾಖ್‌ ಸಂತ್ರಸ್ತ ಮಹಿಳೆಯರ ನೋವು ಕೇಳಲಿಲ್ಲ. ಈ ಪಿಡುಗಿನಿಂದ ಮುಸ್ಲಿಂ ಮಹಿಳೆಯರನ್ನು ಪಾರು ಮಾಡಿದ್ದು ನಮ್ಮ ಸರ್ಕಾರ’ ಎಂದು ಹೇಳಿದರು.

Russia Ukraine Crisis: ಬಿಕ್ಕಟ್ಟಿನ ಬಗ್ಗೆ ಮೊದಲ ಪ್ರತಿಕ್ರಿಯೆ ಕೊಟ್ಟ ಪ್ರಧಾನಿ ಮೋದಿ

‘ನಮ್ಮದು ರೈತಪರ ಸರ್ಕಾರ. ಬಾರಾಬಂಕಿ ಜಿಲ್ಲೆಯೊಂದರಲ್ಲೇ ಸಣ್ಣ-ಮಧ್ಯಮ ವರ್ಗದ ರೈತರ ಖಾತೆಗೆ 800 ಕೋಟಿ ರು. ವರ್ಗಾಯಿಸಿದ್ದೇವೆ. ಗೋಬರ್‌ಧನ ಯೋಜನೆ ಮೂಲಕ ಸಗಣಿಯಿಂದ ಗೋಬರ್‌ ಗ್ಯಾಸ್‌ ಉತ್ಪಾದಿಸುವ ಯೋಜನೆ ಹಮ್ಮಿಕೊಂಡಿದ್ದೇವೆ. ರಾಸುಗಳಿಗೆ 13 ಸಾವಿರ ಕೋಟಿ ರು. ಲಸಿಕಾಕರಣ ಹಮ್ಮಿಕೊಂಡಿದ್ದೇವೆ. ಆದರೆ ಹಿಂದಿನ ಸರ್ಕಾರಗಳು, ಜನರು ಕೇವಲ ತಮ್ಮ ಪಾದ ಹಿಡಿದುಕೊಂಡಿರಬೇಕು ಎಂಬ ಉದ್ದೇಶ ಹೊಂದಿದ್ದವು’ ಎಂದರು.

ತ್ರಿವಳಿ ತಲಾಖ್‌ ನಿಷೇಧದಿಂದ ಮುಸ್ಲಿಂ ಮಹಿಳೆಯರಿಗೆ ನೆರವು: ತ್ರಿವಳಿ ತಲಾಖ್‌  ವಿರುದ್ಧದ ಕಾನೂನು ಉತ್ತರ ಪ್ರದೇಶದಲ್ಲಿ ಸಾವಿರಾರು ಮಹಿಳೆಯರ ಕುಟುಂಬ ಒಡೆಯುವುದನ್ನು ತಪ್ಪಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದರು. ಕಾನ್ಪುರ ದೇಹತ್‌ನಲ್ಲಿ ಚುನಾವಣಾ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಶಾಲೆಗೆ ಹೋಗುವಾಗ ದುಷ್ಕರ್ಮಿಗಳಿಂದ ಮುಸ್ಲಿಂ ಬಾಲಕಿಯರಿಗೆ ತೊಂದರೆ ಆಗುತ್ತಿತ್ತು, ಆದರೆ ಯೋಗಿ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸಿದ್ದರಿಂದ ಇದು ನಿವಾರಣೆ ಆಗಿದೆ’ ಎಂದರು.

ಕರ್ನಾಟಕದಲ್ಲಿ (Karnataka) ನಡೆಯುತ್ತಿರುವ ಹಿಜಾಬ್‌ ವಿವಾದ (Hijab Row) ಬೆನ್ನಲ್ಲೇ ಮೋದಿ ಅವರ ಈ ಹೇಳಿಕೆ ಬಂದಿದೆ. ತ್ರಿವಳಿ ತಲಾಖ್‌ ವಿರುದ್ಧದ ಕಾಯ್ದೆಯನ್ನು ಸಮರ್ಥಿಸಿದ ಅವರು, ಈ ಹಿಂದೆ ಮುಸ್ಲಿಂ ಮಹಿಳೆ ತನ್ನ ತವರು ಮನೆಯಿಂದ ಬರಿಗೈನಲ್ಲಿ ಹಿಂದಿರುಗಿದರೆ ಆಕೆಗೆ ತಕ್ಷಣವೇ ತಲಾಖ್‌ ನೀಡಲಾಗುತ್ತಿತ್ತು. ಮೋಟಾರ್‌ ಸೈಕಲ್‌, ಚಿನ್ನದ ಸರ ಅಥವಾ ಮೊಬೈಲ್‌ ಫೋನ್‌ ತರದಿದ್ದರೂ ತಲಾಖ್‌ ನೀಡಲಾಗುತ್ತಿತ್ತು. ಇದರಿಂದ ಮಹಿಳೆಯರ ಜೀವನವೇ ನಾಶವಾಗುತ್ತಿತ್ತು. ಮಹಿಳೆ ಮಾತ್ರವಲ್ಲ, ಆಕೆಯ ಪೋಷಕರ ನೋವು ಅರ್ಥ ಮಾಡಿಕೊಳ್ಳಿ. 

Manipur Elections: ಮಣಿಪುರದಲ್ಲಿ ಮತ್ತೆ ಮೋದಿ ಮೋದಿಯೋ? ಅಧಿಕಾರ ಹಸ್ತಾಂತರವೋ?

ಮಗಳು ಗಂಡನ ಮನೆಯಿಂದ ತವರಿಗೆ ಬಂದಾಗ ತ್ರಿವಳಿ ತಲಾಖ್‌ನ ಭಯದಲ್ಲಿ ಆಕೆ ಕಾಲಕಳೆಯಬೇಕಾಗಿತ್ತು. ಇಂದು ಇದರಿಂದ ರಕ್ಷಣೆ ಪಡೆದುಕೊಳ್ಳಲು ಮುಸ್ಲಿಂ ಸಹೋದರಿಯರಿಗಾಗಿ ಕಾನೂನು ಜಾರಿ ಮಾಡಿದ್ದೇವೆ ಎಂದು ಹೇಳಿದರು. ಇದೇ ವೇಳೆ ಸಮಾಜವಾದಿ ಪಕ್ಷದ (Samajwadi Party) ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಎಸ್‌ಪಿ ಆಳ್ವಿಕೆ ವೇಳೆ ರಾಜ್ಯವನ್ನು ಕೊಳ್ಳೆ ಹೊಡೆಯಲು ಕುಟುಂಬಸ್ಥರಿಗೆ ಟಿಕೆಟ್‌ ಹಂಚಿತ್ತು’ ಎಂದರು.

click me!