ಕೆವಾಡಿಯಾ: ಹವಾಮಾನ ಬದಲಾವಣೆಯಿಂದ ಭೂಮಿಯನ್ನು ಕಾಪಾಡುವ ಉದ್ದೇಶದಿಂದ ರೂಪಿಸಲಾಗಿರುವ ಮಿಷನ್ ಲೈಫ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟಾನಿಯೋ ಗ್ಯುಟೆರೆಸ್ ಗುಜರಾತ್‌ನ ಕೆವಾಡಿಯಾದಲ್ಲಿ ಜೊತೆಯಾಗಿ ಚಾಲನೆ ನೀಡಿದ್ದಾರೆ.
ಈ ಯೋಜನೆಯು ಜನರಿಗೆ ಸುಸ್ಥಿರ ಜೀವನಶೈಲಿಯನ್ನು (sustainable lifestyle)ರೂಢಿಸಿಕೊಳ್ಳಲು ಪ್ರೇರಣೆ ನೀಡುವ ಉದ್ದೇಶ ಹೊಂದಿದೆ. ಈಜಿಫ್ಟ್‌ನಲ್ಲಿ(Egypt) ಮುಂದಿನ ತಿಂಗಳು ನಡೆಯಲಿರುವ ವಿಶ್ವಸಂಸ್ಥೆಯ (United Nation) ಹವಾಮಾನ ಸಮಾವೇಶಕ್ಕೂ ಮುನ್ನ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಹವಾಮಾನ ಸ್ನೇಹಿ ಜೀವನಶೈಲಿಗಳ ಬದಲಾವಣೆಯ ಉಪಾಯಗಳ ಪಟ್ಟಿಯನ್ನು ಈ ಕ್ರಿಯಾ ಯೋಜನೆಯು ಹೊಂದಿದ್ದು, ಮಿಷನ್ ಲೈಫ್ (ಪರಿಸರಕ್ಕಾಗಿ ಜೀವನಶೈಲಿ) ಟ್ಯಾಗ್‌ಲೈನ್ ಹೊಂದಿದೆ.
Gujarat Election 20 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್!
ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಮೋದಿ, ‘ಹವಾಮಾನ ಬದಲಾವಣೆಯನ್ನು (climate change)ನಿಯಂತ್ರಿಸಲು ಭಾರತ ಬದ್ಧವಾಗಿದೆ. ಮಿಷನ್ ಲೈಫ್ ಯೋಜನೆಯು ಭೂಮಿ ಪರ ಜನರ ಪರಿಕಲ್ಪನೆಗೆ ಬಲ ನೀಡುತ್ತದೆ. ಇದು ಪರಿಸರದಿಂದ, ಪರಿಸರಕ್ಕಾಗಿ ಹಾಗೂ ಪರಿಸರಕ್ಕೋಸ್ಕರ ಜೀವನಶೈಲಿ ರೂಢಿಸಿಕೊಳ್ಳುವ ಮಹತ್ವವನ್ನು ಎತ್ತಿ ಹಿಡಿದಿದೆ. ಈ ನಿಟ್ಟಿನಲ್ಲಿ ಜನತೆ ರೆಡ್ಯುಸ್, ರಿಯೂಸ್ ಹಾಗೂ ರೀಸೈಕಲ್’ (ತ್ಯಾಜ್ಯ ತಗ್ಗಿಸುವಿಕೆ, ಮರುಬಳಕೆ ಹಾಗೂ ಮರುಚಕ್ರೀಕರಣ) ಪರಿಕಲ್ಪನೆಯನ್ನು ತಮ್ಮ ಆಚರಣೆಯಲ್ಲಿ ಬಳಸಿಕೊಳ್ಳಬೇಕು ಎಂದು ಕರೆಕೊಟ್ಟಿದ್ದಾರೆ.
ಎಸಿ ಆನ್ ಮಾಡಿ ಕಂಬಳಿ ಹೊದ್ದು ಮಲಗಿದರೆ ಪರಿಸರ ಉಳಿಸಲಾಗದು
English ಭಾಷೆ ಜ್ಞಾನದ ಮಾನದಂಡವಲ್ಲ; ಸಂವಹನ ಮಾಧ್ಯಮವಷ್ಟೇ: ಪ್ರಧಾನಿ ಮೋದಿ
ಸರ್ಕಾರ ಅಥವಾ ಅಂತಾರಾಷ್ಟ್ರೀಯ ಸಂಸ್ಥೆಗಳು (international organizations) ನೀತಿಗಳನ್ನು ರೂಪಿಸುವುದರಿಂದ ಪರಿಸರ ಉಳಿಸಲು ಸಾಧ್ಯವಿಲ್ಲ. ಜನರು ತಮ್ಮ ವೈಯಕ್ತಿಕ ಜೀವನಶೈಲಿಯಲ್ಲಿ (personal lifestyles) ಬದಲಾವಣೆ ಮಾಡಿಕೊಂಡಾಗಲೇ ಹವಾಮಾನ ಬದಲಾವಣೆಯನ್ನು ನಿಯಂತ್ರಿಸಬಹುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಮ್ಮಲ್ಲಿ ಕೆಲವರು ಹವಾನಿಯಂತ್ರಕ (ಎಸಿ)ಯನ್ನು 16 ರಿಂದ 18 ಡಿಗ್ರಿಯಲ್ಲಿಟ್ಟು ಬಳಿಕ ಕಂಬಳಿ ಹೊದ್ದುಕೊಳ್ಳುತ್ತಾರೆ. ಪ್ರತಿ ಡಿಗ್ರಿ ತಾಪಮಾನ ಇಳಿಸುವುದು ಹೆಚ್ಚಿನ ಶಕ್ತಿ ಬಳಕೆಗೆ ಕಾರಣವಾಗುತ್ತದೆ. ಇದರ ಬದಲಾಗಿ ಕಂಬಳಿಯ ಅನಿವಾರ್ಯತೆ ಇಲ್ಲದೇ ಆಹ್ಲಾದಕರ ತಾಪಮಾನಕ್ಕಾಗಿ ನಾವು ಎಸಿ ಬಳಸಿಕೊಳ್ಳಬಹುದು. ಕೆಲವರು ಜಿಮ್‌ಗಳಲ್ಲೇ ವ್ಯಾಯಾಮ ನಡೆಸಬೇಕು ಎಂದುಕೊಳ್ಳುತ್ತಾರೆ. ಅದರೆ ಜಿಮ್‌ಗೆ ಹೋಗಲು ಕಾರುಗಳನ್ನು ಬಳಸುತ್ತಾರೆ. ಇದರ ಬದಲು ನಡೆಯುವುದು, ಸೈಕಲ್ ಓಡಿಸುವುದಕ್ಕೆ ನಾವೇಕೆ ಮುಂದಾಗಬಾರದು?’ ಎಂದು ಮೋದಿ ಪ್ರಶ್ನಿಸಿದ್ದಾರೆ. ಈ ನಿಟ್ಟಿನಲ್ಲಿ ಪರಿಸರ ಸ್ನೇಹಿ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಭಾರತೀಯರಿಗೆ ಕರೆ ನೀಡಿದ್ದಾರೆ.
ಮಿಷನ್ ಲೈಫ್ ಉದ್ದೇಶ ಏನು?
ಮಿಷನ್ ಲೈಫ್ ಸುಸ್ಥಿರತೆಯ ಕಡೆಗೆ ಜನರ ಸಾಮೂಹಿಕ ಜೀವನಶೈಲಿ ಬದಲಾಯಿಸಲು ಮೂರು ಕಾರ್ಯತಂತ್ರವನ್ನು ಅನುಸರಿಸುವ ಗುರಿಯನ್ನು ಹೊಂದಿದೆ.
1. ಜನರನ್ನು ದೈನಂದಿನ ಜೀವನದಲ್ಲಿ ಸರಳ ಹಾಗೂ ಪರಿಣಾಮಕಾರಿ ಪರಿಸರ ಸ್ನೇಹಿ ಕ್ರಮಗಳನ್ನು ಅಭ್ಯಾಸ ಮಾಡಲು ಪ್ರೇರೇಪಿಸುವುದು (ಬೇಡಿಕೆ).
2. ಕೈಗಾರಿಕೆಗಳು ಮತ್ತು ಮಾರುಕಟ್ಟೆಗಳು ಬದಲಾಗುತ್ತಿರುವ ಬೇಡಿಕೆಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಅನುವು ಮಾಡಿಕೊಡುವುದು (ಪೂರೈಕೆ).
3. ಸುಸ್ಥಿರ ಅನುಭೋಗ ಹಾಗೂ ಉತ್ಪಾದನೆ ಎರಡನ್ನೂ ಬೆಂಬಲಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಕೈಗಾರಿಕಾ ನೀತಿಯಲ್ಲಿ ಬದಲಾವಣೆ ತರುವುದು (ನೀತಿ).
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ