ಜು.16ಕ್ಕೆ ಯಡಿಯೂರಪ್ಪ ಸೇರಿ 6 ರಾಜ್ಯದ ಮುಖ್ಯಮಂತ್ರಿ ಜೊತೆ ಪ್ರಧಾನಿ ಸಭೆ!

By Suvarna NewsFirst Published Jul 13, 2021, 3:48 PM IST
Highlights
  • ದಕ್ಷಿಣ ಭಾರತದ ಸಿಎಂ ಜೊತೆ ಪ್ರಧಾನಿ ಮೋದಿ ಕೋವಿಡ್ ಸಭೆ
  • ಜುಲೈ 16 ರಂದು ಮಹತ್ವದ ಸಭೆ ನಡೆಸಿ ಸೂಚನೆ ನೀಡಲಿದ್ದಾರೆ ಮೋದಿ
  • ಇಂದು ಈಶಾನ್ಯ ರಾಜ್ಯಗಳ ಸಿಎಂ ಪ್ರಧಾನಿ ಸಭೆ

ನವದೆಹಲಿ(ಜು.13): ಅನ್‌ಲಾಕ್ ಪ್ರಕ್ರಿಯೆಯಿಂದ ದೇಶದಲ್ಲೀಗ ಕೊರೋನಾ ಆತಂಕ ಹೆಚ್ಚಾಗಿದೆ. ಪ್ರವಾಸಿ ತಾಣಗಳು ಕಿಕ್ಕಿರಿದು ತುಂಬಿದೆ. ಧಾರ್ಮಿಕ ತಾಣಗಳಲ್ಲಿ ಜನಸಂದಣಿ ಹೆಚ್ಚಾಗಿದೆ.  ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಆರೋಗ್ಯ ಸಚಿವ ಸೇರಿದಂತೆ ತಜ್ಞರು ಕೊರೋನಾ ಮಾರ್ಗಸೂಚಿ ನಿರ್ಲಕ್ಷ್ಯ ಕುರಿತು ಎಚ್ಚರಿಕೆ ನೀಡಿದ್ದಾರೆ. ಇದೀಗ ಪ್ರಧಾನಿ ಮೋದಿ ದಕ್ಷಿಣ ಭಾರತ ರಾಜ್ಯ ಹಾಗೂ ಒಡಿಶಾ ಮುಖ್ಯಮಂತ್ರಿಗಳ ಸಭೆ ನಡೆಸಲಿದ್ದಾರೆ.

"

ಕೊರೋನಾ ಆತಂಕ: ಈಶಾನ್ಯ ರಾಜ್ಯಗಳ ಸಿಎಂ ಜೊತೆ ಮೋದಿ ವಿಡಿಯೋ ಕಾನ್ಫೆರೆನ್ಸ್!

ಜುಲೈ 16 ರಂದು ಮೋದಿ, ಕರ್ನಾಟಕ ಮುಖ್ಯಮಂತ್ರಿ ಸಿಎಂ ಬಿಎಸ್ ಯಡಿಯೂರಪ್ಪ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಜೊತೆ ಸಭೆ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ವರ್ಚುವಲ್ ಸಭೆ ನಡೆಯಲಿದೆ. ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿ ಕುರಿತು ಮಾಹಿತಿ ಪಡೆಯಲಿದ್ದಾರೆ. ಇನ್ನು ಅನ್‌ಲಾಕ್ ಹಾಗೂ ಕೊರೋನಾ ಮಾರ್ಗಸೂಚಿ ಪಾಲನೆ ಕುರಿತು ಮಹತ್ವದ ಸಲಹೆ ನೀಡಲಿದ್ದಾರೆ.

ಕೆಲ ಜಿಲ್ಲೆಗಳಲ್ಲಿ ಕೊರೋನಾ ಪಾಸಿವಿಟಿವಿಟಿ ರೇಟ್ ಹೆಚ್ಚಾಗುತ್ತಿದೆ.  ಈ ಕುರಿತು ಕಠಿಣ ಕ್ರಮಕ್ಕೆ ಮೋದಿ ಆಗ್ರಹಿಸಲಿದ್ದಾರೆ.  ಇನ್ನು 3ನೇ ಅಲೆ ತಡೆಯಲು ರಾಜ್ಯದ ಸಿದ್ಧತೆ, ಕ್ರಮಗಳ ಕುರಿತು ಮೋದಿ ಪರಿಶೀಲನೆ ನಡೆಸಲಿದ್ದಾರೆ. 

ಕೊರೋನಾ ಹೋರಾಟದಲ್ಲಿ ನಿರ್ಲಕ್ಷ್ಯ ಸಲ್ಲದು ನೂತನ ಸಚಿವರಿಗೆ ಮೋದಿ ಕಿವಿಮಾತು!

ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಮೋದಿ, ಕೊರೋನಾ ವಿರುದ್ಧ ಆರೋಗ್ಯ ಕಾರ್ಯಕರ್ತರು, ರಾಜ್ಯ ಸರ್ಕಾರ ಹಾಗೂ ಜನತೆ ಶ್ರಮವನ್ನು ಶ್ಲಾಘಿಸಿದ್ದಾರೆ. ಪರೀಕ್ಷೆ, ಚಿಕಿತ್ಸೆ ಮತ್ತು ವ್ಯಾಕ್ಸಿನೇಷನ್ಗಾಗಿ ಮೂಲಸೌಕರ್ಯಗಳನ್ನು ರಚಿಸಿದ್ದಕ್ಕಾಗಿ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.

click me!