ನಮಗೆ ಓಟ್ ಮಾಡಿದ್ರಿ ಎಂದು ಪ್ರಮಾಣ ಮಾಡಿ, ವಿದ್ಯುತ್ ಕೇಳಿದವ್ರಿಗೆ ಬಿಜೆಪಿ MLA ಮಾತು

Published : Jul 13, 2021, 02:54 PM IST
ನಮಗೆ ಓಟ್ ಮಾಡಿದ್ರಿ ಎಂದು ಪ್ರಮಾಣ ಮಾಡಿ, ವಿದ್ಯುತ್ ಕೇಳಿದವ್ರಿಗೆ ಬಿಜೆಪಿ MLA ಮಾತು

ಸಾರಾಂಶ

ವಿದ್ಯುತ್ ಕೊಡಿ ಎಂದು ಬಂದವರಿಗೆ ಹೀಗನ್ನೋದಾ ಶಾಸಕರು ? ನಮಗೆ ಓಟ್ ಮಾಡಿದ್ದೆಂದು ಪ್ರಮಾಣ ಮಾಡಿ ಎಂದ ಬಿಜೆಪಿ ಶಾಸಕ

ಲಕ್ನೋಜು.13): ನೆರವು ಕೇಳಿ ಬಂದವನಿಗೆ ಬಿಜೆಪಿಗೆ ಮತ ಚಲಾಯಿಸಿದ್ದೇನೆ ಎಂದು ಮಗನ ಮೇಲೆ ಪ್ರಮಾಣ ಮಾಡಿ ಹೇಳು ಎಂದಿದ್ದಾರೆ ಉತ್ತರ ಪ್ರದೇಶದ ಬಿಜೆಪಿ ಶಾಸಕ. ಈ ಘಟನೆ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದಿದ್ದು, ತಮ್ಮ ಮನೆಗೆ ವಿದ್ಯುತ್ ಸಂಪರ್ಕ ಅಳವಡಿಸುವಂತೆ ಕೋರಿ ಬಂದವನಿಗೆ ಈ ರೀತಿ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೊಂಡಿರುವ ವೀಡಿಯೊವೊಂದರಲ್ಲಿ, ಶಹಜಹಾನ್ಪುರದ ಕತ್ರ ಅಸೆಂಬ್ಲಿ ಕ್ಷೇತ್ರವನ್ನು ಪ್ರತಿನಿಧಿಸುವ ವೀರ್ ವಿಕ್ರಮ್ ಸಿಂಗ್ (ಪ್ರಿನ್ಸ್) ಅವರು ಬಿಜೆಪಿಗೆ ಮತ ಚಲಾಯಿಸಿದ್ದಿ ಎಂದು ಪ್ರತಿಜ್ಞೆ ಮಾಡಿದರೆ ಗ್ರಾಮಸ್ಥರ ಮನೆಯಲ್ಲಿ ದೀಪಗಳನ್ನು ಅಳವಡಿಸಲಾಗುವುದು ಎಂದು ಹೇಳುವುದನ್ನು ಕೇಳಬಹುದಾಗಿದೆ.

ಬಿಜೆಪಿಗೆ ಬಿಗ್‌ ಶಾಕ್‌: ಕಮಲ ಪಾಳಯಕ್ಕೆ ಪಂಕಜಾ ಮುಂಡೆ ಗುಡ್‌ಬೈ?

ಶಾಸಕರು ಇತ್ತೀಚೆಗೆ ನಡೆದ ಮರ ನೆಡುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ತಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಎತ್ತಿ ತೋರಿಸಿದರು.

ನೀವು ಗಂಗಾ ನದಿ ಅಥವಾ ನಿಮ್ಮ ಮಗನ ಮೇಲೆ ಆಣೆ ಹಾಕಿ ನಮಗೆ (ಬಿಜೆಪಿ) ಮತ ಹಾಕಿದ್ದೀರಿ ಎಂದು ಹೇಳಿ. ಹಾಗಾದರೆ ನಾನು ನಿಮ್ಮ ಮನೆಯಲ್ಲಿ ದೀಪಗಳನ್ನು ಅಳವಡಿಸುತ್ತೇನೆ. ಒಬ್ಬ ವ್ಯಕ್ತಿಯಿಂದ ನೀವು ಏನನ್ನಾದರೂ ನಿರೀಕ್ಷಿಸುತ್ತೀರಿ ಎಂದರೆ ನೀವು ಏನನ್ನಾದರೂ ಕೊಟ್ಟಿದ್ದೀರಾ ಎಂದು ಶಾಸಕ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?
India Latest News Live: ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!