
ನವದೆಹಲಿ(ಫೆ.27): ದೇಶದ ಜನತನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ನಾಳೆ(ಫೆ.28) ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ಮಾತನಾಡಲಿದ್ದಾರೆ. ಫೆ.28ರ ಬೆಳಗ್ಗೆ 11 ಗಂಟೆಗೆ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ಮೋದಿ ಮಾತನಾಡಲಿದ್ದಾರೆ. ಈ ಬಾರಿ ಹಲವು ವಿಚಾರಗಳ ಕುರಿತು ಮೋದಿ ಬೆಳಕು ಚೆಲ್ಲಲಿದ್ದಾರೆ.
ಮನ್ ಕಿ ಬಾತ್ ಸುದ್ದಿ : ಕರ್ನಾಟಕದ ವೀರಭದ್ರ ಸ್ವಾಮಿ ದೇವಸ್ಥಾನ, ಯುವಬ್ರಿಗೇಡ್ ಉಲ್ಲೇಖಿಸಿದ ಮೋದಿ!
ಈ ತಿಂಗಳ ಆರಂಭದಲ್ಲಿ ಮೋದಿ, ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಕಲೆ, ಸಂಸ್ಕೃತಿ , ಪ್ರವಾಸೋದ್ಯಮ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದೆ, ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಳ್ಳಲು ದೇಶದ ಜನರಲ್ಲಿ ಮನವಿ ಮಾಡಿದ್ದರು. ಸಂದೇಶಗಳನ್ನು ಕತೆಗಳನ್ನು ಹಂಚಿಕೊಳ್ಳಲು ಮೋದಿ, ಟೋಲ್ ಫ್ರೀ ಸಂಖ್ಯೆಯನ್ನು ಹಂಚಿಕೊಂಡಿದ್ರು. ಈ ನಂಬರ್ ಮೂಲಕ ಇಂಗ್ಲೀಷ್ ಅಥವಾ ಹಿಂದಿ ಮೂಲಕ ರೆಕಾರ್ಡ್ ಮಾಡಲು ಅವಕಾಶ ನೀಡಲಾಗಿದೆ.
ಇದು 74ನೇ ಮನ್ ಕಿ ಬಾತ್ ಕಾರ್ಯಕ್ರಮವಾಗಿದೆ. ಪ್ರತಿ ತಿಂಗಳ ಕೊನೆಯ ಭಾನುವಾರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಮೋದಿ ನಡೆಸಿಕೊಡುತ್ತಿದ್ದಾರೆ. ಈ ಬಾರಿ ಕೊನೆಯ ಭಾನುವಾರ, ತಿಂಗಳ ಕೊನೆಯ ದಿನವಾಗಿದೆ. ಇದೀಗ ಮೋದಿ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ದೇಶದ ಜನತೆ ಕಾತರದಿಂದ ಕಾಯುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ