ಅಪ್ರಾಪ್ತರ ಮದುವೆ, ದೈಹಿಕ ಸಂಪರ್ಕ: ಸಾಕ್ಷಿ ಇದ್ದರೂ ಆರೋಪಿ ಖುಲಾಸೆ!

Published : Feb 27, 2021, 05:32 PM IST
ಅಪ್ರಾಪ್ತರ ಮದುವೆ, ದೈಹಿಕ ಸಂಪರ್ಕ: ಸಾಕ್ಷಿ ಇದ್ದರೂ ಆರೋಪಿ ಖುಲಾಸೆ!

ಸಾರಾಂಶ

ಓಡಿ ಹೋಗಿ ಮದುವೆಯಾದ ಅಪ್ರಾಪ್ತ ಜೋಡಿ| ಸಾಕ್ಷಿ ಇದ್ದರೂ ಆರೋಪಿ ಖುಲಾಸೆ| ಅಪ್ರಾಪ್ತೆ ಜೊತೆ ದೈಹಿಕ ಸಂಪರ್ಕ, ಮಗುವಿನ ತಾಯಿಯಾದ ಬಾಲಕಿ

ಪಾಟ್ನಾ(ಫೆ.27): ಪರಸ್ಪರ ಪ್ರೀತಿಸುತ್ತಿದ್ದ ಅಪ್ರಾಪ್ತ ಬಾಲಕ ಹಾಗೂ ಬಾಲಕಿ ಪರಾರಿಯಾಗಿ ಮದುವೆಯಾಗಿದ್ದಾರೆ. ಆದರೆ ಯುವತಿ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇಬ್ಬರನ್ನೂ ದೂರ ಮಾಡಲು ಯತ್ನಿಸಿದ್ದಾರೆ. ಹೀಗಿರುವಾಗ ಬಾಲಾಪರಾಧ ನ್ಯಾಯ ಮಂಡಳಿಯ ಪ್ರಧಾನ ಮ್ಯಾಜಿಸ್ಟ್ರೇಟ್ ಮನ್ವೇಂದ್ರ ಮಿಶ್ರಾ ಈ ಪ್ರಕರಣ ಸಂಬಂಧ ಶುಕ್ರವಾರ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.

ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ವಯ ಆರೋಪಿ ಅಪ್ರಾಪ್ತೆಯನ್ನು ಮದುವೆಯಾಗಿ, ದೈಹಿಕ ಸಂಬಂಧ ಬೆಳೆಸಿದ್ದಾನೆ. ಇದಕ್ಕೆ ಸೂಕ್ತ ಸಾಕ್ಷಿ ಇದ್ದರೂ ನ್ಯಾಯಾಲಯ ಅಪ್ರಾಪ್ತ ಆರೋಪಿಯನ್ನು ಖುಲಾಸೆಗೊಳಿಸಿದೆ. ಅಲ್ಲದೇ ಈ ಅಪ್ರಾಪ್ತ ದಂಪತಿಯನ್ನು ಒಟ್ಟಿಗೆ ಇರಲು ಅದೇಶಿದೆ.

ಏನಿದು ಪ್ರಕರಣ?

ಪರಸ್ಪರ ಪ್ರೀತಿಸುತ್ತಿದ್ದ ಈ ಅಪ್ರಾಪ್ತ ಜೋಡಿ 2019ರಲ್ಲಿ ಓಡಿ ಹೋಗಿ ಮದುವೆಯಾಗಿದ್ದರು. ಅಂದು ಬಾಲಕನ ವಯಸ್ಸು 17 ಆಗಿದ್ದರೆ, ಬಾಲಕಿಯ ವಯಸ್ಸು 16 ಆಗಿತ್ತು.

ನನ್ನ ಸ್ವಂತ ಇಚ್ಛೆಯಿಂದ ಓಡಿ ಹೋಗಿದ್ದೆ ಎಂದ ಬಾಲಕಿ

2019 ಆಗಸ್ಟ್‌ನಲ್ಲಿ ಬಾಲಕಿಯ ಹೇಳಿಕೆ ದಾಖಲಿಸಲಾಗಿತ್ತು. ಹೀಗಿರುವಾಗ ಆಕೆ ತನ್ನ ಸ್ವಂತ ಇಚ್ಛೆ ಮೇರೆಗೆ ತಾನು ಓಡಿ ಹೋಗಿ ಮದುವೆಯಾಗಿದ್ದೇನೆ ಎಂದುಉ ಹೇಳಿದ್ದಳು.

10 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇತ್ತು

ಬಾಲಕನ ವಿರುದ್ಧ ಸೆಕ್ಷನ್ 366ಎ ಅಡಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಮದುವೆಯಾದ ಹಾಗೂ ದೈಹಿಕ ಸಂಪರ್ಕ ಬೆಳೆಸಿದ ಗಂಭೀರ ಆರೋಪವಿತ್ತು. ಹೀಗಿರುವಾಗ ಆತನಿಗೆ 3 ರಿಂದ 10 ವರ್ಷ ಜೈಲು ಶಿಕ್ಷೆಯಾಗುತ್ತಿತ್ತು. ಆದರೆ ಇದು ಬಾಲಕಿ ಮೇಲೆ ಪರಿಣಾಮ ಬೀರುತ್ತಿತ್ತು. ಆಕೆಯನ್ನು ಸ್ತ್ರೀನಿಕೇತನಕ್ಕೆ ಕಳುಹಿಸಬೇಕಾಗಿತ್ತು. ಇದು ಮಗುವಿನ ಆರೈಕೆ ಮೇಲೂ ಪರಿಣಾಮ ಬೀರುತ್ತಿತ್ತು.

ಈ ಕಾರಣದಿಂದ ಆರೋಪಿಗೆ ರಿಲೀಫ್

ಅಪ್ರಾಪ್ತ ದಂಪತಿಗೆ ಶಿಕ್ಷೆ ಕೊಟ್ಟಿದ್ದರೆ, ಮಗುವಿನ ಆರೈಕೆ, ಸಂರಕ್ಷಣೆ ಹೀಗೆ ಎಲ್ಲದರ ಮೇಲೆ ಪ್ರಭಾವ ಬೀರುತ್ತಿತ್ತು. ಇದು ಮೂರು ಜೀವಗಳ ಮೇಲೆ ಪ್ರಭಾವ ಬೀರುತ್ತಿತ್ತು. ಅಲ್ಲದೇ ಮರ್ಯಾದಾ ಹತ್ಯೆ ನಡೆಯುವ ಶಂಕೆಯೂ ಎದುರಾಗಿದ್ದು, ಪುಟ್ಟ ಕಂದನ ಜೀವಕ್ಕೆ ಅಪಾಯವಿತ್ತು. ಬಾಲಕನಿಗೆ ಶಿಕ್ಷೆ ಕೊಟ್ಟರೆ ಆತನ ತಂದೆ ತಾಯಿ ಬಾಲಕಿ ಹಾಗೂ ಮಗುವನ್ನು ಒಪ್ಪಿಕೊಳ್ಳದಿರುವ ಸಾಧ್ಯತೆ ಇತ್ತು. ಅಲ್ಲದೇ ಆಕೆಯನ್ನು ಬೇರಾರೂ ಮದುವೆಯಾಗಲು ಮುಂದೆ ಬರುತ್ತಿರಲಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ. ಹೀಗಿದ್ದರೂ ಈ ಅಪ್ರಾಪ್ತ ಜೋಡಿಯ ಮದುವೆ ಕಾನೂನಿನ ಅನ್ವಯ ಮಾನ್ಯವಲ್ಲ ಎಂದೂ ಉಲ್ಲೇಖಿಸಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮುಸ್ಲಿಂ ಲೀಗ್‌, ಜಿನ್ನಾಗೆ ಮಣಿದ ನೆಹರು, ವಂದೇ ಮಾತರಂ ಅನ್ನು ಹರಿದು ಹಾಕಿದ್ದು ಕಾಂಗ್ರೆಸ್‌: ಮೋದಿ ವಾಗ್ದಾಳಿ
ಮದುವೆಯಾದ್ರೆ ಸಿಗುತ್ತೆ 2.5 ಲಕ್ಷ ರೂಪಾಯಿ; ಶೇ.99 ಜನರಿಗೆ ಈ ವಿಷಯವೇ ಗೊತ್ತಿಲ್ಲ