'ನೀವ್ಯಾಕೆ ಪ್ರೆಸ್‌ ಮೀಟ್‌ ಮಾಡೋದಿಲ್ಲ?' ವಿಪಕ್ಷಗಳ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಮೋದಿ ಉತ್ತರ!

By Santosh Naik  |  First Published May 17, 2024, 10:47 AM IST

ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿ ಕುರಿತಾಗಿ ಮಾಧ್ಯಮಗಳು ಹಾಗೂ ವಿಪಕ್ಷಗಳು ಕೇಳಿದ್ದ ಒಂದೇ ಒಂದು ಪ್ರಶ್ನೆ ಏನೆಂದರೆ, ನೀವ್ಯಾಕೆ ಪ್ರೆಸ್‌ ಮೀಟ್‌ ಮಾಡೋದಿಲ್ಲ ಅನ್ನೋದು. ಅದಕ್ಕೆ ಪ್ರಧಾನಿ ಮೋದಿಯೇ ಸ್ವತಃ ಉತ್ತರ ನೀಡಿದ್ದಾರೆ.
 


ನವದೆಹಲಿ (ಮೇ.17): ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ವಿಪಕ್ಷಗಳು ಹಾಗೂ ಮಾಧ್ಯಮಗಳು ಸಾರಾಸಗಟಾಗಿ ಕೇಳೋ ಒಂದು ಪ್ರಶ್ನೆ ಏನೆಂದರೆ, ನರೇಂದ್ರ ಮೋದಿ ಈವರೆಗೂ ಒಂದೇ ಒಂದು ಪ್ರೆಸ್‌ ಮೀಟ್‌ನಲ್ಲಿ ಭಾಗಿಯಾಗಿಲ್ಲ ಅನ್ನೋದು. ಇಂಡಿಯಾ ಟುಡೆ ಗ್ರೂಪ್‌ಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿಗೆ ಇದೇ ಪ್ರಶ್ನೆಯನ್ನು ಪತ್ರಕರ್ತರು ಕೇಳಿದ್ದು, ಇದಕ್ಕೆ ಸ್ವತಃ ಮೋದಿಯೇ ಉತ್ತರ ನೀಡಿದ್ದಾರೆ. ನಾನೆಂದಿಗೂ ಸಂದರ್ಶನ ನೀಡೋದಕ್ಕೆ ಇಲ್ಲ ಎಂದು ಹೇಳಿಲ್ಲ ಆದರೆ, ಮಾಧ್ಯಮಗಳ ಪಾತ್ರದಲ್ಲಿ ಬಹಳ ದೊಡ್ಡ ಬದಲಾವಣೆ ಆಗಬೇಕಿದೆ ಎಂದೂ ಅವರು ಒತ್ತಿ ಹೇಳಿದರು. ದೇಶದ ಜನರನ್ನು ತಲುಪು ಇಂದು ಮಾಧ್ಯಮ ಒಂದೇ ಮಾರ್ಗವಲ್ಲ. ಇಂದು ಸಾರ್ವಜನಿಕರನ್ನು ತಲುಪಲು ಸಾಕಷ್ಟು ಸಂವಹನ ಮಾರ್ಗಗಳಿವೆ ಎಂದು ಹೇಳಿದ್ದಾರೆ. ಇಂದು ಇರುವ ಮಾಧ್ಯಮಗಳು ಈ ರೀತಿ ಇರಬೇಕಾದವುಗಳಲ್ಲ ಎಂದು ಮೋದಿ ಹೇಳಿದ್ದಾರೆ. ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಸಮಯಕ್ಕೆ ಹೋಲಿಸಿದರೆ, ಈಗ ಅಷ್ಟು ಪ್ರೆಸ್‌ಮೀಟ್‌ಗಳನ್ನು ನೀವು ನಡೆಸೋದಿಲ್ಲ. ತೀರಾ ಕಡಿಮೆ ಸಂದರ್ಶನಗಳನ್ನು ನೀಡುತ್ತೀರಿ ಎಂದು ಕೇಳಿದ ಪ್ರಶ್ನೆಗೆ, ಇಂದು ಮಾಧ್ಯಮಗಳನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ.  ಆ ಹಾದಿಯಲ್ಲಿ ಹೋಗಲು ನಾನು ಬಯಸುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. 

ನಾನು ಕಠಿಣ ಪರಿಶ್ರಮ ಪಡಬೇಕು. ಪ್ರತಿ ಬಡವನ ಮನೆಗೂ ನಾನು ಹೋಗಬೇಕು. ಅದರ ಬದಲು ನಾನು ವಿಜ್ಞಾನ ಭವನದಲ್ಲಿದದು, ರಿಬ್ಬನ್‌ಗಳನ್ನೂ ಕೂಡ ಕಟ್‌ ಮಾಡಬಹುದು. ಆದರೆ, ಇದನ್ನು ನಾನು ಮಾಡೋದಿಲ್ಲ. ನಾನು ಜಾರ್ಖಂಡ್‌ನ ಚಿಕ್ಕ ಜಿಲ್ಲೆಯೊಂದಕ್ಕೂ ಹೋಗುತ್ತೇನೆ ಹಾಗೂ ಸಣ್ಣ ಯೋಜನೆಯ ಕುರಿತಾಗಿ ಕೆಲಸ ಮಾಡುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ.

ಈ ಹಿಂದೆ ಜನರು ಮೀಡಿಯಾಗಳಿಗಾಗಿ ಹಾಗೂ ಫೋಟೋಗಾಗಿ ಸರ್ಕಾರದ ಏಕಪಕ್ಷೀಯ ದೃಷ್ಟಿಕೋನವನ್ನೂ ಹೇಳುತ್ತಿದ್ದರು. ನಾನು ಆ ಸಂಸ್ಕೃತಿ ಒಪ್ಪೋದಿಲ್ಲ. ನಾನು ಪ್ರತಿ ಬಡವನ ಮನೆ ಬಾಗಿಲಿಗೆ ಹೋಗಲು ಬಯಸುತ್ತೇನೆ. ಇಂದು ಜನರನ್ನು ರೀಚ್‌ ಆಗಲು ಸಾಕಷ್ಟು ಭಿನ್ನ ವೇದಿಕೆಗಳಿವೆ. ನಾನು ದೇಶದ ಸಂಸತ್‌ಗೆ ಉತ್ತರದಾಯಿಯಾಗಿದ್ದೇನೆ. ಎಲ್ಲಾ ಪ್ರಶ್ನೆಗಳಿಗೆ ಅಲ್ಲಿ ಉತ್ತರ ನೀಡಿದ್ದೇನೆ ಎಂದಿದ್ದಾರೆ.

ಇದೇ ವೇಳೆ ಗುಜರಾತ್‌ ಸಿಎಂ ಆಗಿದ್ದ ದಿನದ ಘಟನೆಯನ್ನು ಅವರು ನೆನಪಿಸಿಕೊಂಡರು. ನಾನು ಗುಜರಾತ್‌ ಸಿಎಂ ಆಗಿದ್ದಾಗ, ಕೆಲವು ಗ್ರಾಮಸ್ಥರು ನನ್ನ ಬಳಿ ಬಂದಿದ್ದರು. ಈಗ ನಾವು ದಿನದ 24 ಗಂಟೆ ಕೂಡ ವಿದ್ಯುತ್‌ ಪಡೆಯುತ್ತಿದ್ದೇವೆ ಎಂದು ಹೇಳಿದ್ದರು. ಆಗ ನಾನು, ಇದ್ಯಾವುದು ಮೀಡಿಯಾದಲ್ಲಿ ಬಂದಿಲ್ಲವಲ್ಲ ಎಂದು ಕೇಳಿದೆ. ಅದಕ್ಕೆ ಗ್ರಾಮಸ್ಥರು, ಮಾಧ್ಯಮಗಳು ಇದನ್ನು ಪ್ರಕಟ ಮಾಡೋದಿಲ್ಲ. ಆದರೆ, ನಾವು 24 ಗಂಟೆ ವಿದ್ಯುತ್‌ ಪಡೆಯುತ್ತಿದ್ದೇವೆ ಎಂದು ಹೇಳಿದ್ದರು.

ನಾನು ಹೊಸ ಕೆಲಸದ ಸಂಸ್ಕೃತಿಯನ್ನು ತಂದಿದ್ದೇನೆ. "ಆ ಸಂಸ್ಕೃತಿ ಸರಿ ಎಂದು ಭಾವಿಸಿದರೆ, ಮಾಧ್ಯಮಗಳು ಅದನ್ನು ಸರಿಯಾಗಿ ಪ್ರಸ್ತುತಪಡಿಸಬೇಕು, ಇಲ್ಲದಿದ್ದರೆ, ಅವರು ಮಾಡಬಾರದು" ಎಂದು ಹೇಳಿದರು. ಪ್ರಸ್ತುತ ದೇಶದಲ್ಲಿ ಮಾಧ್ಯಮಗಳು ಇಂದು ಪ್ರತ್ಯೇಕ ಘಟಕವಾಗಿಲ್ಲ ಎಂದು ಪ್ರಧಾನಿ ಮೋದಿ ಎತ್ತಿ ತೋರಿಸಿದರು.

Tap to resize

Latest Videos

ಲೋಕಸಮರದಲ್ಲಿ ಹುಟ್ಟಿಕೊಂಡಿದೆ ಹೊಸ ಲೆಕ್ಕಾಚಾರ! ಅಮಿತ್ ಶಾಗೆ ಪಟ್ಟಕಟ್ಟಲು ಮೋದಿ ಪ್ರಯತ್ನ?

ಮೊದಲು ನಾನು ಆಜ್‌ತಕ್‌ ಜೊತೆ ಮಾತನಾಡಿದ್ದೆ, ಆದರೆ, ಈಗಿನ ವೀಕ್ಷಕರು ಹೇಗೆಂದರೆ, ನಾನು ಯಾವ ನಿರೂಪಕನ ಜೊತೆ ಮಾತನಾಡುತ್ತಿದ್ದೇನೆ ಅನ್ನೋದನ್ನಗುರುತಿಸ್ತಾರೆ. ಇಂದು ಮಾಧ್ಯಮ ಪ್ರತ್ಯೇಕ ಘಟಕವಾಗಿ ಉಳಿದಿಲ್ಲ. ಎಲ್ಲರಂತೆ, ನಿಮ್ಮ ಯೋಚನೆಗಳ ಮೂಲಕ ನೀವೂ ಕೂಡ ಜನರಲ್ಲಿ ಗುರುತಿಸಿಕೊಂಡಿದ್ದೀರಿ ಎಂದು ಹೇಳಿದರು. “ಇಂದು, ನೀವು ಸಾರ್ವಜನಿಕರೊಂದಿಗೆ ಮಾತನಾಡಲು ಬಯಸಿದರೆ, ಸಂವಹನವು ದ್ವಿಮುಖವಾಗಿದೆ. ಇಂದು, ಸಾರ್ವಜನಿಕರು ಕೂಡ ತಮ್ಮ ಧ್ವನಿಯನ್ನು ಮಾಧ್ಯಮಗಳಿಲ್ಲದೆ ತಿಳಿಸಬಹುದು. ಉತ್ತರಿಸಬೇಕಾದ ವ್ಯಕ್ತಿ ಕೂಡ ಮಾಧ್ಯಮಗಳಿಲ್ಲದೆ ತನ್ನ ಅಭಿಪ್ರಾಯಗಳನ್ನು ಚೆನ್ನಾಗಿ ವ್ಯಕ್ತಪಡಿಸಬಹುದು ಎಂದು ಪ್ರಧಾನಿ ಮೋದಿ ಹೇಳಿದರು.

ರಾಹುಲ್‌ ಗಾಂಧಿ ಜೊತೆ ಚರ್ಚೆಗೆ BJYM ಉಪಾಧ್ಯಕ್ಷ ಅಭಿನಾ ಪ್ರಕಾಶ್‌ರನ್ನ ನೇಮಿಸಿದ ಬಿಜೆಪಿ!

MUST WATCH 🔥🔥 pic.twitter.com/1ytdsGB3fH

— Times Algebra (@TimesAlgebraIND)
click me!