PM Modi US visit: ನೀವೇನೇ ಹೇಳಿ..ಭಾರತದಂಥ ಸ್ನೇಹಪರ ದೇಶ ಅಮೆರಿಕಕ್ಕೆ ಅಗತ್ಯವಿದೆ: Rich McCormick

By Santosh NaikFirst Published Jun 15, 2023, 2:28 PM IST
Highlights

ಪ್ರಧಾನಿ ನರೇಂದ್ರ ಮೋದಿ ಜೂನ್‌ 21 ರಿಂದ 24ರವರೆಗೆ ಅಮೆರಿಕ ಭೇಟಿಗೆ ತೆರಳಲಿದ್ದಾರೆ. ಈ ನಡುವೆ ಅಮೆರಿಕದ ರಾಜಕಾರಣಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಉತ್ಸಾಹದಿಂದ ಇದ್ದಾರೆ.

ನವದೆಹಲಿ (ಜೂ.15): ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 21-24ರವರೆಗೆ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಯುದ್ಧವಿಮಾನಗಳಿಗೆ ಜಂಟಿಯಾಗಿ ಜೆಟ್‌ ಇಂಜಿನ್‌ಗಳನ್ನು ತಯಾರಿಸುವುದರಿಂದ ಹಿಡಿದು ಡ್ರೋನ್‌ಗಳ ಖರೀದಿ ಮಾಡುವವರೆಗೆ ಭಾರತ ಹಾಗೂ ಅಮೆರಿಕ ನಡುವೆ ಹಲವು ಪ್ರಮುಖ ಒಪ್ಪಂದಗಳಿಗೆ ಈ ಭೇಟಿಯ ವೇಳೆ ಸಹಿ ಹಾಕಲಾಗುತ್ತದೆ. ಪ್ರಧಾನಿ ಮೋದಿಯವರ ಅಮೆರಿಕ ಭೇಟಿಯಿಂದ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ. ಇದೇ ಕಾರಣಕ್ಕೆ ಅಮೆರಿಕದ ರಾಜಕಾರಣಿಗಳೂ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಉತ್ಸುಕರಾಗಿದ್ದಾರೆ. ಜಾರ್ಜಿಯಾದಿಂದ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸದಸ್ಯ ರಿಚರ್ಡ್ ಮೆಕ್ ಕಾರ್ಮಿಕ್ ಅವರು ನರೇಂದ್ರ ಮೋದಿಯವರ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. 'ಅಮೆರಿಕದ ಪಾಲಿಗೆ ಭಾರತ ಎಷ್ಟು ಪ್ರಮುಖ ದೇಶ ಎಂದು ಇನ್ನೂ ಅನೇಕರಿಗೆ ಅರ್ಥವಾಗಿಲ್ಲ ಎಂದು ನಾನು ಭಾವಿಸುತ್ತೇನೆ ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಬಂದು ಮಾತನಾಡುವುದು ಬಹಳ ಮುಖ್ಯವಾಗಿದೆ. ಭಾರತದಲ್ಲಿ ಜನಸಂಖ್ಯೆ ಇದೆ. ಸರಕುಗಳನ್ನು ಉತ್ಪಾದಿಸಲು ಚೀನಾಕ್ಕಿಂತ ಭಾರತ ಹೆಚ್ಚು ಅನುಕೂಲಕರ ಸ್ಥಳವಾಗಿದೆ. ಭಾರತವು ಡಬ್ಲ್ಯಟಿಒ (ವರ್ಲ್ಡ್‌ ಟ್ರೇಡ್‌ ಆರ್ಗನೈಜೇಷನ್‌) ನಿಯಮಗಳನ್ನು ಮುರಿಯುವ ಬದಲು ಅನುಸರಿಸುತ್ತದೆ. ನಮಗೆ ಇಂತಹ ಪಾಲುದಾರರು ಬೇಕು' ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರ ಭೇಟಿಯ ಬಗ್ಗೆ ಕೇಳಲಾದ ಪ್ರಶ್ನೆಗೆ, ಅವರ ಭೇಟಿಯ ವೇಳೆ ಕೆಲವೊಂದು ಚರ್ಚೆಗಳು ಖಂಡಿತಾ ಸರ್ಕಾರದ ಮಟ್ಟದಲ್ಲಿ ಖಾಸಗಿಯಾಗಿರುತ್ತದೆ. ಆದರೆ, ಭಾರತದೊಂದಿಗಿನ ಅಮೆರಿಕದ ಸಂಬಂಧ ಎಷ್ಟು ಪ್ರಮುಖ ಎನ್ನುವುದು ಈಗ ಎಲ್ಲರಿಗೂ ಅರ್ಥವಾಗಿದೆ' ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಮುಂಬರುವ ಭೇಟಿಯ ಸಮಯದಲ್ಲಿ ಯುಎಸ್ ದೊಡ್ಡ ಶಸ್ತ್ರಾಸ್ತ್ರ ಡ್ರೋನ್ ಒಪ್ಪಂದಕ್ಕೆ ಸಹಿ ಹಾಕುವ ವರದಿಗಳ ಕುರಿತು, "ನಮ್ಮ ದೇಶಗಳನ್ನು ನಾವು ಆರ್ಥಿಕವಾಗಿ, ಮಿಲಿಟರಿಯಾಗಿ ಎಷ್ಟು ಒಟ್ಟಿಗೆ ಜೋಡಿಸುತ್ತೇವೆಯೋ ಅಷ್ಟು ಉತ್ತಮ ಎಂದು ನಾನು ಭಾವಿಸುತ್ತೇನೆ. ಈ ಪ್ರದೇಶದಲ್ಲಿನ ಬೆದರಿಕೆಗಳನ್ನು ನೋಡಿ, ನೀವು ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಪಕ್ಕದಲ್ಲಿ ಭಾರತದ ಆಯಕಟ್ಟಿನ ಸ್ಥಳವನ್ನು ನೋಡಿದರೆ, ಪ್ರಪಂಚದ ಆ ಭಾಗದಲ್ಲಿ ನಾವು ಹೊಂದಿರುವ ಎಲ್ಲಾ ಸಮಸ್ಯೆಗಳೊಂದಿಗೆ, ನಮಗೆ ಬಲವಾದ ಪಾಲುದಾರರ ಅಗತ್ಯವಿದೆ, ನಮಗೆ ಸಾಧ್ಯವಿರುವ ಯಾರಾದರೂ ನಮ್ಮನ್ನು ನಾವು ಸಂಪರ್ಕಿಸುತ್ತೇವೆ' ಎಂದು ಹೇಳಿದ್ದಾರೆ.

ಮುಂದಿನ ವಾರ ನಮ್ಮ ರಾಷ್ಟ್ರ ರಾಜಧಾನಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಅಮೆರಿಕದ ರಾಜಕಾರಣಿ ಬಡ್ಡಿ ಕಾರ್ಟರ್ ಹೇಳಿದ್ದಾರೆ. ಭಾರತ-ಅಮೆರಿಕ ಬಾಂಧವ್ಯ ವಿಶ್ವದಲ್ಲೇ ಅತ್ಯಂತ ಮಹತ್ವದ್ದು. ಇದು ಎರಡೂ ದೇಶಗಳಿಗೆ ಬಹಳ ಮುಖ್ಯವಾಗಿದೆ. ನರೇಂದ್ರ ಮೋದಿ ಅವರು ಕಾಂಗ್ರೆಸ್ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ನರೇಂದ್ರ ಮೋದಿ ಅವರು ದೇಶದ ಜನರ ಸೇವೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

| US: I think a lot of people don't realize how important India is. I think that's why it's important for PM Modi to be here & have these consequential conversations. Anybody who's not thinking about the importance of India doesn't realize the strength of numbers, the… pic.twitter.com/7iAyM19Yi8

— ANI (@ANI)

 

ಕೇಜ್ರಿವಾಲ್ ಭಾಷಣ ವೇಳೆ ಮೋದಿ ಮೋದಿ ಘೋಷಣೆ, ವೇದಿಕೆಯಲ್ಲಿ ಆಪ್‌ಗೆ ಗವರ್ನರ್ ಕಪಾಳಮೋಕ್ಷ!

ಇದೇ ವೇಳೆ ಅಮೆರಿಕ ಕಾಂಗ್ರೆಸ್‌ನ ಸದಸ್ಯೆ ಶೀಲಾ ಜಾಕ್ಸನ್ ಲೀ, ನರೇಂದ್ರ ಮೋದಿ ಅವರು ಅಮೆರಿಕ ಕಾಂಗ್ರೆಸ್‌ನಲ್ಲಿ ಭಾಷಣ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ನಾವೆಲ್ಲರೂ ಅವರ ಭಾಷಣಕ್ಕಾಗಿ ಕಾಯುತ್ತಿದ್ದೇವೆ. ಕಾಂಗ್ರೆಸ್‌ನ ಉಭಯ ಸದನಗಳನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಅದರ ಭಾಗವಾಗುವುದು ಮುಖ್ಯ ಎಂದಿದ್ದಾರೆ.

ಮನ್ ಕೀ ಬಾತ್‌ ಮಾಡಲು ಬಂದಿಲ್ಲ, ನಿಮ್ಮೊಂದಿಗೆ ಸಂಬಂಧ ಬೆಳೆಸಲು ಬಂದಿದ್ದೇನೆ: ಮೋದಿ ವಿರುದ್ಧ ರಾಹುಲ್‌ ವ್ಯಂಗ್ಯ

click me!