
ಛಪ್ರಾ: ಬಿಹಾರದ ಛಪ್ರಾ ಜಿಲ್ಲೆಯಲ್ಲಿ ಅಪರೂಪದ ಮಗುವೊಂದು ಜನಿಸಿದೆ. ಆದರೆ ದುರಾದೃಷ್ಟವಶಾತ್ ಜನಿಸಿದ 20 ನಿಮಿಷದಲ್ಲೇ ಮಗು ಪ್ರಾಣ ಬಿಟ್ಟಿದೆ. ನಾಲ್ಕು ಕೈಗಳು ನಾಲ್ಕು ಕಾಲುಗಳು ಎರಡು ಹೃದಯದೊಂದಿಗೆ ಹೆಣ್ಣು ಮಗುವೊಂದು ಜನಿಸಿದ್ದು, ಸ್ವಲ್ಪ ಹೊತ್ತಿನಲ್ಲೇ ಪ್ರಾಣ ಬಿಟ್ಟಿದೆ. ಸಿಸೇರಿಯನ್ ಮೂಲಕ ಮಗುವನ್ನು ಹೊರತೆಗೆಯಲಾಗಿದ್ದು, ಆ ಸಂದರ್ಭದಲ್ಲಿ ಮಗು ಜೀವಂತವಾಗಿತ್ತು. ಆದರೆ ಇದಾಗಿ 20 ನಿಮಿಷದಲ್ಲಿ ಮಗು ಪ್ರಾಣ ಬಿಟ್ಟಿದೆ.
ಪ್ರಸುತಾ ಪ್ರಿಯಾ ದೇವಿ ( Prasuta Priya Devi) ಎಂಬುವವರಿಗೆ ತಮ್ಮ ಚೊಚ್ಚಲ ಹೆರಿಗೆಯಲ್ಲಿ ಈ ಅಪರೂಪದ ಮಗು ಜನಿಸಿದೆ. ಛಪ್ರಾದ ಶ್ಯಾಮಚಕ್ ಎಂಬಲ್ಲಿರುವ ಸಂಜೀವಿನಿ ನರ್ಸಿಂಗ್ ಹೋಮ್‌ನಲ್ಲಿ ಮಂಗಳವಾರ ಈ ಮಗು ಜನಿಸಿತ್ತು. ಇನ್ನು ಈ ವಿಚಿತ್ರ ಮಗು ಜನನದ ಸುದ್ದಿ ಸ್ಥಳೀಯರಲ್ಲಿ ಕುತೂಹಲವನ್ನು ಹುಟ್ಟಿಸಿದ್ದು, ಅನೇಕರು ಈ ವಿಭಿನ್ನ ಮಗುವನ್ನು ನೋಡಲು ಆಸ್ಪತ್ರೆಗೆ ಧಾವಿಸಿ ಬಂದಿದ್ದರು. ಇತ್ತ ಮಗುವಿನ ತಾಯಿ ಪ್ರಸುತಾ ಪ್ರಿಯಾ ದೇವಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ (Caesarean) ನಡೆಸಿ ಈ ಮಗುವನ್ನು ಹೊರತೆಗೆಯಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂಜೀವಿನಿ ನರ್ಸಿಂಗ್ ಹೋಮ್ ವೈದ್ಯ ಡಾ, ಅನಿಲ್ ಕುಮಾರ್ (Anil kumar) ಮಾತನಾಡಿದ್ದು, ಇಂತಹ ಮಕ್ಕಳು ಜನಿಸುವುದೇ ಇಲ್ಲ ಎಂದಲ್ಲ, ಆದರೆ ಇಂತಹ ಮಗುವಿನ ಜನನ ಬಲು ಅಪರೂಪ.
ವೈದ್ಯಲೋಕಕ್ಕೆ ಸವಾಲು; ಅಪರೂಪದ ಮಗು ಜನನ
ಅಂಡಾಣುವು ಗರ್ಭಾಶಯದೊಳಗೆ ಎರಡು ಭ್ರೂಣಗಳಾಗಿ ವಿಭಜಿಸಿದಾಗ ಇದು ಸಂಭವಿಸುತ್ತದೆ. ಈ ಪ್ರಕ್ರಿಯೆಯು ಸಮಯಕ್ಕೆ ಸಂಭವಿಸಿದಲ್ಲಿ ಅವಳಿಗಳು ಜನಿಸುತ್ತವೆ ಅಥವಾ ಅಂಟಿಕೊಂಡೇ ಇದ್ದಲ್ಲಿ ಸಯಾಮಿಗಳ ಜನನಕ್ಕೆ ಕಾರಣವಾಗಬಹುದು. ಈ ಮಗುವಿನ ವಿಚಾರದಲ್ಲಿ ಪ್ರತ್ಯೇಕತೆ ಆಗಲಿಲ್ಲ, ಹೀಗಾಗಿ ಮಗು ನಾಲ್ಕು ಕೈಗಳು ಮತ್ತು ನಾಲ್ಕು ಕಾಲುಗಳು ಮತ್ತು ಎರಡು ಹೃದಯಗಳನ್ನು ಹೊಂದಿರುವ ಒಂದು ಮಗುವಾಗಿ ಜನಿಸಿದೆ ಎಂದು ವೈದ್ಯರು ಹೇಳಿದ್ದಾರೆ. ಇಂತಹ ಮಗುವನ್ನು ಗರ್ಭದಲ್ಲಿ ಹೊತ್ತಿರುವ ಗರ್ಭಾವಸ್ಥೆಯಿಂದ ಹೆರಿಗೆ ಆಗುವವರೆಗೂ ಹಲವಾರು ತೊಂದರೆಗೆ ಒಳಗಾಗುತ್ತಾಳೆ. ಇದು ಹೆರಿಗೆಯನ್ನು ಕಷ್ಟವಾಗುವಂತೆ ಮಾಡುತ್ತದೆ. ಪ್ರಸ್ತುತ ನಮಗೆ ಮಗುವನ್ನು ಉಳಿಸಲು ಸಾಧ್ಯವಾಗದಿದ್ದರೂ, ಮಹಿಳೆ ಆರೋಗ್ಯವಾಗಿದ್ದಾಳೆ ಮತ್ತು ನಮ್ಮ ವೈದ್ಯರು ಅವರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಸಂಜೀವಿನಿ ಆಸ್ಪತ್ರೆ ವೈದ್ಯ ಡಾಕ್ಟರ್ ಅನಿಲ್ ಕುಮಾರ್ ಹೇಳಿದ್ದಾರೆ.
ಗಂಗಾವತಿ: ಒಂದೇ ಕಾಲಿರುವ ಅಪರೂಪದ ಮಗು ಜನನ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ