ಜು.7ರಿಂದ ಪ್ರಧಾನಿ ಮೋದಿ 4 ರಾಜ್ಯ ಪ್ರವಾಸ, ಅಭಿವೃದ್ಧಿ ಯೋಜನೆಗೆ 50,000 ಕೋಟಿ ರೂ ಗಿಫ್ಟ್!

Published : Jul 04, 2023, 06:50 PM ISTUpdated : Jul 04, 2023, 06:53 PM IST
ಜು.7ರಿಂದ ಪ್ರಧಾನಿ ಮೋದಿ 4 ರಾಜ್ಯ ಪ್ರವಾಸ,  ಅಭಿವೃದ್ಧಿ ಯೋಜನೆಗೆ 50,000 ಕೋಟಿ ರೂ ಗಿಫ್ಟ್!

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಜುಲೈ 7 ಹಾಗು 8 ರಂದು ನಾಲ್ಕು ರಾಜ್ಯ ಪ್ರವಾಸ ಮಾಡಲಿದ್ದಾರೆ. ಈ ವೇಳೆ 50,000 ಕೋಟಿ ರೂಪಾಯಿ ವೆಚ್ಚದ 50 ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಮೋದಿ ಬಿಡುವಿಲ್ಲದ ರಾಜ್ಯ ಪ್ರವಾಸ ಹಾಗೂ ಯೋಜನೆಗಳ ಕುರಿತ ಮಾಹಿತಿ ಇಲ್ಲಿದೆ.

ನವದೆಹಲಿ(ಜು.04) ಅಮೆರಿಕ, ಈಜಿಪ್ಟ್ ಪ್ರವಾಸ ಮುಗಿಸಿದ ಬಂದ ಬೆನ್ನಲ್ಲೇ ತುರ್ತು ಸಭೆ, ಮಳೆ ಹಾಗೂ ಪ್ರವಾಹ ನಿರ್ವಹಣೆ, ಶಾಂಘೈಸಹಕಾರ ಸಭೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಇದೀಗ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ನಿಮಿತ್ತ ರಾಜ್ಯ ಪ್ರವಾಸ ಆರಂಭಿಸುತ್ತಿದ್ದಾರೆ. ಜುಲೈ 7 ಹಾಗೂ 8 ರಂದು ಪ್ರಧಾನಿ ಮೋದಿ ಬಿಡುವಿಲ್ಲದೆ 4 ರಾಜ್ಯ ಪ್ರವಾಸ ಮಾಡಲಿದ್ದಾರೆ. ನಾಲ್ಕು ರಾಜ್ಯದ 5 ಪ್ರಮುಖ ನಗರಗಳಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ. ನಾಲ್ಕು ರಾಜ್ಯಗಳಿಲ್ಲಿ ಮೋದಿ ಒಟ್ಟು 50,000 ಕೋಟಿ ರೂಪಾಯಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. 

ಜುಲೈ 7 ರಂದು ಪ್ರಧಾನಿ ಮೋದಿ ದೆಹಲಿಯಿಂದ ರಾಯ್‌ಪುರ್ ತೆರಳಲಿದ್ದಾರೆ. ಇಲ್ಲಿ ಮೋದಿ ರಾಯ್‌ಪುರ್ ವಿಶಾಖಪಟ್ಟಂ ಕಾರಿಡಾರ್, ಆರ್ ಲೇನ್ ರಸ್ತೆ ಯೋಜನೆ ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.  ರಾಯ್‌ಪುರದಿಂದ ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ಆಗಮಿಸಲಿದ್ದಾರೆ. ಗೀತಾ ಪ್ರೆಸ್‌ನಲ್ಲಿನ ಕಾರ್ಯಕ್ರಮ, 3 ವಂದೇ ಭಾರತ್ ರೈಲು ಯೋಜನೆಗೆ ಚಾಲನೆ, ಗೋರಖ್‌ಪುರ ರೈಲು ನಿಲ್ದಾಣ ಪುನರಾಭಿವೃದ್ಧಿ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

ಕೆಲ ರಾಷ್ಟ್ರ ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯ ನೀಡುತ್ತಿದೆ, ಪಾಕ್ ಪ್ರಧಾನಿ ಸಮ್ಮುಖದಲ್ಲಿಯೇ ಗುಡುಗಿದ ಮೋದಿ!

ಗೋರಖ್‌ಪುರದಿಂದ ಮೋದಿ ಲೋಕಸಭಾ ಕ್ಷೇತ್ರ ವಾರಣಾಸಿಗೆ ಪ್ರಯಾಣ ಬೆಳೆಸಲಿದ್ದಾರೆ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್‌ನಿಂದ ಸೋನ್ ನಗರಕ್ಕೆ ಸರಕು ಸಾಗಾಣೆ ಕಾರಿಡಾರ್ ಹೊಸ ಮಾರ್ಗ, ವಾರಣಾಸಿ ಜೌನ್‌ಪುರ್ 4 ಲೇನ್ ಅಗಲೀಕರಣ,ಮಣಿಕರ್ಣಿಕಾ ಘಾತ್ ಹಾಗೂ ಹರಿಶ್ಚಂದ್ರ ಘಾಟ್ ನವೀಕರಣಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ.

ಜುಲೈ 7 ರಂದು ರಾತ್ರಿ ವಾರಣಿಯಲ್ಲಿ ಮೋದಿ ತಂಗಲಿದ್ದಾರೆ. ಜುಲೈ 8 ರಂದು ಬೆಳಗ್ಗೆ ವಾರಣಿಸಿಯಿಂದ ವಾರಂಗಲ್‌ಗೆ ಮೋದಿ ಪ್ರಯಾಣ ಬೆಳೆಸಲಿದ್ದಾರೆ. ನಾಗ್ಪುರ ವಿಜಯವಾಡ ಕಾರಿಡಾರ್, ಕರಿಂನರಗ 4 ಲೇನ್ ರಸ್ತೆ ಶಂಕುಸ್ಥಾಪನೆ ಸೇರಿದಂತೆ ಹಲವು ಯೋಜನಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇನ್ನು ವಾರಂಗಲ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಪ್ರಧಾನಿಗೆ ‘ರಿಪೋರ್ಟ್‌ ಕಾರ್ಡ್‌’ ಸಲ್ಲಿಸಿದ ಸಚಿವರು: 9 ತಿಂಗಳಲ್ಲಿ 9 ವರ್ಷಗಳ ಸಾಧನೆ ವಿವರಿಸಿ ಎಂದು ಮೋದಿ ಕರೆ

ಪ್ರಧಾನಿ ಮೋದಿ ವಾರಂಗಲ್‌ನಿಂದ ರಾಜಸ್ಥಾನದ ಬಿಕಾನೆರ್‌ಗೆ ತೆರಳಿಲಿರುವ ನರೇಂದ್ರ ಮೋದಿ, ಕೆಲ ಯೋಜನೆಗಳ ಶಂಕುಸ್ಥಾಪನೆ ಹಾಗೂ ಹಲವು ಯೋಜನೆಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ.ಗ್ರೀನ್ ಎನರ್ಜಿ ಕಾರಿಡಾರ್, ಅಂತರ್ ರಾಜ್ಯ ಟ್ರಾನ್ಸ್‌ಮಿಷನ್ ಲೈನ್ ಯೋಜನೆ ಉದ್ಘಾಟಿಸಲಿದ್ದಾರೆ. ಬಿಕಾನೆರ್ ರೈಲ ನಿಲ್ದಾಣದ ಪುನರಾಭಿವೃದ್ದಿಗೆ ಅಡಿಪಾಯ ಹಾಕಲಿದ್ದಾರೆ. ಬಿಕಾನೆರ್‌ನಲ್ಲಿ ಮೋದಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.  ನಾಲ್ಕು ರಾಜ್ಯದ 5 ನಗರದಲ್ಲಿ ಮೋದಿ 50ಕ್ಕೂ ಹೆಚ್ಚು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಮಾಡಲಿದ್ದಾರೆ. ಬಿಕಾನೆರ್‌ನಿಂದ ಮರಳಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ
Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್