Hyderabad: ಟರ್ನಿಂಗ್‌ನಲ್ಲಿ ಹೈಸ್ಪೀಡ್‌, ವಾಕಿಂಗ್‌ ಮಾಡುತ್ತಿದ್ದವರಿಗೆ ಅಪ್ಪಳಿಸಿದ ಕಾರು, ಮೂವರ ಸಾವು!

Published : Jul 04, 2023, 04:52 PM IST
Hyderabad: ಟರ್ನಿಂಗ್‌ನಲ್ಲಿ ಹೈಸ್ಪೀಡ್‌, ವಾಕಿಂಗ್‌ ಮಾಡುತ್ತಿದ್ದವರಿಗೆ ಅಪ್ಪಳಿಸಿದ ಕಾರು, ಮೂವರ ಸಾವು!

ಸಾರಾಂಶ

High Speed Car Crash: ಬೆಳಗ್ಗೆ ರಸ್ತೆಯ ಪಕ್ಕದಲ್ಲಿ ವಾಕಿಂಗ್‌ ಮಾಡೋ ಅಭ್ಯಾಸ ಇದ್ಯಾ? ಹಾಗಿದ್ದಲ್ಲಿ ನೀವು ಈ ವಿಡಿಯೋ ನೋಡಲೇಬೇಕು. ಟರ್ನಿಂಗ್‌ನಲ್ಲಿ ಹೈಸ್ಪೀಡ್‌ನಲ್ಲಿದ್ದ ಕಾರು ರಸ್ತೆಯ ಪಕ್ಕದಲ್ಲಿ ವಾಕಿಂಗ್‌ ಮಾಡುತ್ತಿದ್ದ ಮೂವರಿಗೆ ಅಪ್ಪಳಿಸಿದ್ದು, ಎಲ್ಲರೂ ಸ್ಥಳದಲ್ಲೇ ಸಾವು ಕಂಡಿದ್ದಾರೆ.  

ಹೈದರಾಬಾದ್‌ (ಜು.4): ಇತ್ತೀಚಿನ ದಿನಗಳಲ್ಲಿ ಹೈದರಾಬಾದ್‌ನಲ್ಲಿ ಹೈಸ್ಪೀಡ್‌ ಅಪಘಾತಗಳು ಹೆಚ್ಚಾಗುತ್ತಿದೆ. ರಸ್ತೆಯಲ್ಲಿ ಪಾದಾಚಾರಿಗಳು ನೆಮ್ಮದಿಯಿಂದ ವಾಕಿಂಗ್‌ ಮಾಡೋದು ಕೂಡ ಕಷ್ಟವಾಗುತ್ತಿದೆ. ಹೈದರಾಬಾದ್‌ನಲ್ಲಿ ಮಂಗಳವಾರ ಆಗಿರುವ ಘಟನೆಯ ವಿಡಿಯೋವನ್ನು ನೋಡಿದರೆ, ರಸ್ತೆಯಲ್ಲಿ ವಾಕಿಂಗ್‌ ಮಾಡೋದಕ್ಕೆ ಹೆದರಿಕೆಯಾಗುವುದು ಖಂಡಿತ. ಮಂಗಳವಾರ ಬೆಳಗ್ಗೆ ಹೈದರಾಬಾದ್‌ ಗ್ರಾಮೀಣದ ಹೈದರ್‌ ಶಾ ಕೋಟೆಯ ಮುಖ್ಯ ರಸ್ತೆಯ ಪಕ್ಕದಲ್ಲಿ ವಾಕಿಂಗ್‌ ಮಾಡುತ್ತಿದ್ದ ಮೂವರ ಮೇಲೆ ಕಾರು ಅಪ್ಪಳಿಸಿದೆ. ಹೈಸ್ಪೀಡ್‌ನಲ್ಲಿದ್ದ ಕೆಂಪು ಬಣ್ಣದ ಹೋಂಡಾ ಕಾರು, ಟರ್ನಿಂಗ್‌ನಲ್ಲಿ ಲಯ ಕಳೆದುಕೊಂಡಿದ್ದು, ನೇರವಾಗಿ ರಸ್ತೆಯಲ್ಲಿ ವಾಕಿಂಗ್‌ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಹಾಗೂ ಬಾಲಕಿಗೆ ಡಿಕ್ಕಿ ಹೊಡೆದಿದೆ. ಇಬ್ಬರು ಸ್ಥಳದಲ್ಲಿಯೇ ಸಾವು ಕಂಡಿದ್ದರೆ, ಇನ್ನೊಬ್ಬರು ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯದಲ್ಲಿ ಸಾವು ಕಂಡಿದ್ದಾರೆ. ಪೊಲೀಸರು ಈ ಘಟನೆಯ ಸಿಸಿಟಿವಿ ದೃಶ್ಯವನ್ನು ಬಿಡುಗಡೆ ಮಾಡಿದ್ದು, ಘಟನೆಯ ದುರಂತದ ಕ್ಷಣಕ್ಕೆ ಸಾಕ್ಷಿಯಾಗಿದೆ. 

ಕಾರು ಅಪ್ಪಳಿಸಿದ ವೇಗಕ್ಕೆ, ಮೂವರೂ ಕೂಡ ಪಕ್ಕದಲ್ಲಿಯೇ ಇದ್ದ ಪೊದೆಗೆ ಹೋಗಿ ಬಿದ್ದಿದ್ದರು. ತಾಯಿ ಹಾಗೂ ಆಕೆಯ ಮಗ ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಸಾವು ಕಂಡ ವ್ಯಕ್ತಿಗಳನ್ನು ಅನುರಾಧಾ ಹಾಗೂ ಮಮತಾ ಎಂದು ಗುರುತಿಸಲಾಗಿದೆ. ಇಬ್ಬರೂ ಕೂಡ ಸ್ಥಳೀಯ ಶಾಂತಿನಗರ ಕಾಲೋನಿಯ ನಿವಾಸಿಗಳು ಎನ್ನಲಾಗಿದೆ. ನರಸಿಂಗಿ ಪೊಲೀಸ್‌ ಸ್ಥಳಕ್ಕೆ ಆಗಮಿಸಿದ್ದು, ಘಟನೆಯ ಬಗ್ಗೆ ತನಿಖೆ ಆರಂಭ ಮಾಡಿದ್ದಾರೆ.

ಬಸ್ಟ್ಯಾಂಡ್‌ನಲ್ಲಿ ನಿಂತಿದ್ದ ಬಸ್‌ ಚಲಾಯಿಸಿಕೊಂಡು ಹೋದ ಕುಡುಕ: ಆಕ್ಸಿಡೆಂಟ್‌ ಮಾಡಿ ನಿಲ್ಲಿಸಿದ

ಈ ನಡುವೆ ಕಾರ್‌ನಲ್ಲಿ ಕೆಲವು ಶಸ್ತ್ರಗಳಿದ್ದವು ಎನ್ನಲಾಗಿದೆ. ಈ ಘಟನೆಯ ಪೂರ್ಣ ವಿವರಗಳು ಇನ್ನಷ್ಟೇ ಬರಬೇಕಿದೆ. ಮಂಗಳವಾರ ಬೆಳಗ್ಗೆ 6.11ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಸಿಸಿಟಿವಿ ಆಧಾರದಲ್ಲಿ ಹೇಳಬಹುದಾಗಿದೆ.

ರಾಯಚೂರಿನಲ್ಲಿ ಭೀಕರ ಅಪಘಾತ: ಕಾರ್-ಬೈಕ್‌ ಮಧ್ಯೆ ಡಿಕ್ಕಿ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬ್ಯಾಗಲ್ಲಿ ಹೃದಯ ಇಟ್ಕೊಂಡು ಓಡಾಟ: ನೈಸರ್ಗಿಕ ಹೃದಯ ಇಲ್ಲದೇ ಬದುಕುಳಿದಿರುವ ಜಗತ್ತಿನ ಏಕೈಕ ಮಹಿಳೆ ಈಕೆ
ಕೇವಲ 2 ನಿಮಿಷ ಮಗಳ ನೋಡಲು 11ಗಂಟೆಗೆ ಸ್ಟೇಶನ್‌ಗೆ ಬಂದ ತಂದೆ, ಭಾವುಕ ಕ್ಷಣದ ವಿಡಿಯೋ