ಪ್ರಧಾನಿ ಮೋದಿ ಅವರೇ 970 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಭವನವನ್ನು ಉದ್ಘಾಟಿಸಲಿದ್ದಾರೆ. ಜಿ-20 ದೇಶಗಳ ಸ್ಪೀಕರ್‌ಗಳ ಸಮ್ಮೇಳನವು ಈ ವರ್ಷದ ಉತ್ತರಾರ್ಧದಲ್ಲಿ ಇದೇ ಭವನದಲ್ಲಿ ನಡೆಯುವ ನಿರೀಕ್ಷೆಯಿದೆ.
ನವದೆಹಲಿ (ಮೇ 17, 2023): ಸಂಸತ್ತಿನ ನೂತನ ಕಟ್ಟಡ ಮೇ 28ರಂದು ಉದ್ಘಾಟನೆ ಆಗುವ ಸಾಧ್ಯತೆ ಇದೆ. ಮೇ 26ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದು 9 ವರ್ಷ ಸಂದಲಿದ್ದು, ಇದೇ ದಿನಾಂಕದ ಆಸುಪಾಸಿಗೆ ಸರ್ಕಾರದ 9ನೇ ವಾರ್ಷಿಕೋತ್ಸವವನ್ನು ಆಚರಿಸಲಿದೆ. ಇದೇ ಸಂದರ್ಭದಲ್ಲೇ ಹೊಸ ಸಂಸತ್ ಕಟ್ಟಡ ಉದ್ಘಾಟಿಸುವ ಉದ್ದೇಶ ಸರ್ಕಾರಕ್ಕಿದೆ ಎಂದು ಮೂಲಗಳು ಹೇಳಿವೆ.
ಪ್ರಧಾನಿ ಮೋದಿ ಅವರೇ 970 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಭವನವನ್ನು ಉದ್ಘಾಟಿಸಲಿದ್ದಾರೆ. ಜಿ-20 ದೇಶಗಳ ಸ್ಪೀಕರ್‌ಗಳ ಸಮ್ಮೇಳನವು ಈ ವರ್ಷದ ಉತ್ತರಾರ್ಧದಲ್ಲಿ ಇದೇ ಭವನದಲ್ಲಿ ನಡೆಯುವ ನಿರೀಕ್ಷೆಯಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಇದನ್ನು ಓದಿ: ಬಜೆಟ್ ಅಧಿವೇಶನ: ನೂತನ ಸಂಸತ್ತಲ್ಲಿ ರಾಷ್ಟ್ರಪತಿ ಭಾಷಣ..?
ಸಂಸತ್ ಭವನದ ಹಲವು ವೈಶಿಷ್ಟ್ಯ:
ತ್ರಿಕೋನಾಕಾರದ ಈ ಸಂಸತ್ ಕಟ್ಟಡದ ನಿರ್ಮಾಣ 2021ರ ಜನವರಿ 15ರಂದು ಆರಂಭವಾಗಿತ್ತು. 1224 ಸಂಸದರು ಕೂಡಬಲ್ಲ ಸಂಸತ್ತು ಇದಾಗಿದ್ದು, 64,500 ಚದರ ಮೀಟರ್ ವ್ಯಾಪ್ತಿಯಲ್ಲಿ ತಲೆಯೆತ್ತಿದೆ. ಜ್ಞಾನ ದ್ವಾರ, ಶಕ್ತಿ ದ್ವಾರ ಹಾಗೂ ಕರ್ಮ ದ್ವಾರ ಎಂಬ 3 ಪ್ರವೇಶ ದ್ವಾರಗಳನ್ನು ಇದು ಹೊಂದಿದೆ. ಸಂಸದರು, ಗಣ್ಯರು ಹಾಗೂ ಸಂದರ್ಶಕರಿಗೆ 3 ಪ್ರತ್ಯೇಕ ದ್ವಾರಗಳಿವೆ.
ಸಾಂವಿಧಾನಿಕ ಹಾಲ್ ಎಂಬ ವಿಶಿಷ್ಟವಿಭಾಗವು ಇದರಲ್ಲಿದ್ದು, ದೇಶದ ಶ್ರೀಮಂತ ಪ್ರಜಾಸತ್ತಾತ್ಮಕ ಪರಂಪರೆಯನ್ನು ಇದರಲ್ಲಿ ಪ್ರದರ್ಶಿದಲಾಗಿದೆ. ಸಂವಿಧಾನದ ಮೂಲ ದಾಖಲೆಯ ಪ್ರತಿಯನ್ನೂ ಇಲ್ಲಿ ಇರಿಸಲಾಗಿದೆ. ಗ್ರಂಥಾಲಯ, ಸಮಿತಿಗಳ ಕೋಣೆಗಳು ಹಾಗೂ ಭೋಜನಾಲಯವು ಇದರಲ್ಲಿದೆ. ಮಹಾತ್ಮಾ ಗಾಂಧೀಜಿ, ನೆಹರೂ, ಸುಭಾಷ್ ಚಂದ್ರ ಬೋಸ್ ಹಾಗೂ ದೇಶದ ಈವರೆಗಿನ ಪ್ರಧಾನಿಗಳ ಚಿತ್ರಗಳು ನೂತನ ಸಂಸತ್ ಭವನದಲ್ಲಿವೆ.
ಭವನದಲ್ಲಿ ಕೆಲಸ ಮಾಡುವ ಸಿಬ್ಬಂದಿಯು ರಾಷ್ಟ್ರೀಯ ಫ್ಯಾಷನ್ ಟೆಕ್ನಾಲಜಿ ಸಂಸ್ಥೆ ವಿನ್ಯಾಸ ಮಾಡಿರುವ ನೂತನ ಸಮವಸ್ತ್ರ ಧರಿಸಲಿದ್ದಾರೆ.
ಇದನ್ನೂ ಓದಿ; ಮಾರ್ಚ್‌ನಲ್ಲಿ ಹೊಸ ಸಂಸತ್ ಭವನ ಉದ್ಘಾಟನೆ: ಹಳೆಯ ಸಂಸತ್ ಭವನದಲ್ಲೇ ಬಜೆಟ್ ಮಂಡನೆ..!