ನವದೆಹಲಿ(ಸೆ.17): ಕೊರೋನಾ ವೈರಸ್ ವಿರುದ್ಧ ಭಾರತದ ಹೋರಾಟಕ್ಕೆ ಮಿಂಚಿನ ವೇಗ ಸಿಕ್ಕಿದೆ. ಇಂದು(ಸೆ.17) ಪ್ರಧಾನಿ ನರೇಂದ್ರ ಮೋದಿ 71ನೇ ಹುಟ್ಟು ಹಬ್ಬದ ಪ್ರಯುಕ್ತ ಕೇಂದ್ರ ಆರೋಗ್ಯ ಇಲಾಖೆ ಮೆಘಾ ವ್ಯಾಕ್ಸಿನೇಶನ್ ಡ್ರೈವ್‌ಗೆ ಚಾಲನೆ ನೀಡಿತ್ತು. ಪರಿಣಾಣ ಇಂದು ಒಂದೇ ದಿನ 2 ಕೋಟಿ ಡೋಸ್ ನೀಡುವ ಮೂಲಕ ಇತಿಹಾಸ ರಚಿಸಿದೆ.
ಕೋವಿನ್ ಮಾಹಿತಿ ಪ್ರಕಾರ ಇಂದು ಭಾರತ 2,02,83,355 ಡೋಸ್ ಹಾಕಲಾಗಿದೆ. ಇದು ಇದುವರೆಗೆ ಅತ್ಯಂತ ಗರಿಷ್ಠ ಡೋಸ್ ಆಗಿದೆ. ಇಷ್ಟೇ ಅಲ್ಲ ಇತರ ದೇಶಗಳಿಗೆ ಹೋಲಿಸಿದರೂ ಗರಿಷ್ಠ ಲಸಿಕೆ ಡೋಸ್ ಹಾಕಿದೆ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಈ ಸಾಧನೆಯೊಂದಿಗೆ ಭಾರತ, ಯುರೋಪ್ ಹಿಂದಿಕ್ಕಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
undefined
ಲಸಿಕಾ ಅಭಿಯಾನ ಅಮೆರಿಕ, ಜಪಾನ್ ಸೇರಿ 18 ದೇಶಗಳನ್ನು ಹಿಂದಿಕ್ಕಿದ ಭಾರತ!
ಭಾರತ ಇದುವರೆಗೆ 784 ಮಿಲಿಯನ್ ಡೋಸ್ ಹಾಕಿದೆ. ಈ ಮೂಲಕ 777 ಡೋಸ್ ಹಾಕಿ ಮೊದಲ ಸ್ಥಾನದಲ್ಲಿದ್ದ ಯುರೋಪ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ. ಭಾರತದ ಈ ಸಾಧನೆಗೆ ಹಲವು ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸಿದೆ.
ಮೋದಿ ಹುಟ್ಟು ಹಬ್ಬ ಕಾರಣ ಮೆಘಾ ವ್ಯಾಕ್ಸಿನೇಶನ್ ಡ್ರೈವ್ ಮೂಲಕ ಕೇಂದ್ರ ಸರ್ಕಾರದ ನಿರೀಕ್ಷೆಗೂ ಮೀರಿ ಡೋಸ್ ಹಾಕಲಾಗಿದೆ. ಇದಕ್ಕೆ ಕಾರಣರಾದ ಆರೋಗ್ಯ ಕಾರ್ಯಕರ್ತರು, ನಾಗರೀಕರನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಅಭಿನಂದಿಸಿದ್ದಾರೆ.
Thank you all Health Workers.
Well Done India! 😊 pic.twitter.com/l7K7R9ZEtm
ಆರೋಗ್ಯ ಕಾರ್ಯಕರ್ತರಿಗೆ ಸಿಹಿ ಹಂಚಿದ ಮಾಂಡವಿಯಾ ಎಲ್ಲರನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಮುಂದಿನ ದಿನಗಳಲ್ಲಿ ಲಸಿಕಾ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲಾಗುವುದು. ನಿಗದಿತ ಸಮಯಕ್ಕೂ ಮೊದಲೇ ಭಾರತ ಎಲ್ಲರಿಗೂ ಲಸಿಕೆ ನೀಡಲಿದೆ.