'ಮದ್ಯ ಖರೀದಿಗೆ ಬರುವವರನ್ನು ಕುರಿಗಳಂತೆ ಕಾಣಬೇಡಿ' ಬುದ್ಧಿ ಹೇಳಿದ ಹೈಕೋರ್ಟ್!

By Suvarna NewsFirst Published Sep 17, 2021, 7:14 PM IST
Highlights

* ಮದ್ಯ ಖರೀದಿಗೆ ಬರುವವರನ್ನು ಕೀಳಾಗಿ ಕಾಣಬೇಡಿ
* ಕೇರಳ ಹೈಕೋರ್ಟ್ ಮಹತ್ವದ ಅಭಿಪ್ರಾಯ
* ಮದ್ಯ ಖರೀದಿಗೆ ಬರುವವರಿಗೆ ಮೂಲ ಸೌಕರ್ಯ ಒದಗಿಸಿ ಕೊಡಿ

ಕೊಚ್ಚಿ (ಸೆ.17)  ಮದ್ಯ ಖರೀದಿಗೆ ಬರುವ ಮದ್ಯ ಪ್ರಿಯರನ್ನು ಗೌರವದಿಂದ ಕಾಣಬೇಕು. ಅವರಿಗೆ ಮುಜುಗರವಾಗುವ ಸನ್ನಿವೇಶ ನಿರ್ಮಾಣ ಮಾಡಬಾರದು ಎಂದು ಕೇರಳ ಹೈಕೋರ್ಟ್ ತಿಳಿಸಿದೆ.

ಮದ್ಯದಂಗಡಿಗಳ ಮುಂದೆ ಖರೀದಿಗಾಗಿ ಸಾಲು ನಿಂತವರನ್ನು ಕೀಳಾಗಿ ಕಾಣಬಾರದು. ಕೇರಳ ಪಾನೀಯ ನಿಗಮ ನಿಯಮಿತದ ವ್ಯಾಪ್ತಿಯಲ್ಲಿರುವ ಮದ್ಯದಂಗಡಿ ಮತ್ತು ಖಾಸಗಿ ವ್ಯಾಪ್ತಿಯಲ್ಲಿರುವ ಅಂಗಡಿಗಳಲ್ಲಿ ಅಬಕಾರಿ ಇಲಾಖೆ ಮದ್ಯ ಖರೀದಿಗೆ ಬರುವವರನ್ನು ಗೌರವವಾಗಿ ಕಾಣುವಂತೆ ಮಾಡಬೇಕು ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಪೀಠ ಹೇಳಿದೆ.

ಬ್ಯಾಂಕ್ ಶಾಖೆ ಸಮೀಪಕ್ಕೆ ಮದ್ಯದಂಗಡಿ ಸ್ಥಳಾಂತರ ಮಾಡಿದ್ದನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಹೈಕೋರ್ಟ್‍ಗೆ  ಪತ್ರ ಬರೆದಿದ್ದರು. ಈ ಪ್ರತ್ರ ವಿಚಾರಣೆ ಸಂದರ್ಭ ಹೈಕೋರ್ಟ್ ಇಂಥ ಅಭಿಪ್ರಾಯ ಪಟ್ಟಿದೆ.

ಮದ್ಯದ ಬಾಟಲಿ ಮುಂದೆ ..ನಟಿ ಹಿಂದೆ... ಇದೇನು ವಿಚಿತ್ರ

ಮದದ್ಯ ಖರೀದಿಗೆ ಬರುವವರನ್ನು ಕುರಿಗಳಂತೆ ಯಾವ ಕಾರಣಕ್ಕೂ ನೋಡಬೇಡಿ.  ಮದ್ಯ ಪ್ರಿಯರಿಗೆ ಸಕಲ ಮೂಲ ಸೌಕರ್ಯ ಒದಗಿಸಿಕೊಡಬೇಕು ಎಂದು ತಿಳಿಸಿದೆ.  ಮದ್ಯ ಖರೀದಿಗೆ ಬರುವವರು ಸರತಿ ಸಾಲಿನಲ್ಲಿ ಶಿಸ್ತಾಗಿ ನಿಂತಿದ್ದನ್ನು ಕಂಡಿದ್ದೇನೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

ಮದ್ಯದಂಗಡಿಗಳ ಮುಂದೆ ಖರೀದಿಗಾಗಿ ಜನರು ಶಿಸ್ತಿನಿಂದ ಸಾಲಿನಲ್ಲಿ ನಿಲ್ಲುವವರನ್ನು ನೋಡಿ ನಾನೇ ಮುಜುಗರಕ್ಕೆ ಒಳಗಾಗಿದ್ದೇನೆ ಎಂದು ಹೇಳಿರುವ ನ್ಯಾಯಮೂರ್ತಿಗಳು ಮದ್ಯದಂಗಡಿಗೆ ಬರುವವರನ್ನು ಗೌರವದಿಂದ ಕಾಣುವಂತೆ ಮಾಡಲಾಗುವ ಕ್ರಮಗಳ ಬಗ್ಗೆ ಒಂದು ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ಕೇರಳ ಅಬಕಾರಿ ಇಲಾಖೆಗೆ ಸೂಚನೆ ನೀಡಿದ್ದಾರೆ. ಈ ಆದೇಶ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

click me!