ಥಾಯ್ಲೆಂಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಚೀನಾ ಹೆಸರು ಹೇಳದೆಯೇ ಚಾಟಿ!

Published : Apr 04, 2025, 04:33 AM ISTUpdated : Apr 04, 2025, 05:07 AM IST
ಥಾಯ್ಲೆಂಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಚೀನಾ ಹೆಸರು ಹೇಳದೆಯೇ ಚಾಟಿ!

ಸಾರಾಂಶ

ಭಾರತ ಮತ್ತು ಥಾಯ್ಲೆಂಡ್‌ ದೇಶಗಳು ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಮುಕ್ತ, ಎಲ್ಲರನ್ನೂ ಒಳಗೊಂಡ ಮತ್ತು ನಿಯಮಾಧಾರಿತ ಕ್ರಮವನ್ನು ಬೆಂಬಲಿಸುತ್ತವೆಯೇ ಹೊರತು ವಿಸ್ತರಣಾವಾದವನ್ನಲ್ಲ’ ಎಂದು ಚೀನಾ ಹೆಸರು ಹೇಳದೆಯೇ ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಚಾಟಿ ಬೀಸಿದ್ದಾರೆ.

ಬ್ಯಾಂಕಾಕ್‌: ‘ಭಾರತ ಮತ್ತು ಥಾಯ್ಲೆಂಡ್‌ ದೇಶಗಳು ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಮುಕ್ತ, ಎಲ್ಲರನ್ನೂ ಒಳಗೊಂಡ ಮತ್ತು ನಿಯಮಾಧಾರಿತ ಕ್ರಮವನ್ನು ಬೆಂಬಲಿಸುತ್ತವೆಯೇ ಹೊರತು ವಿಸ್ತರಣಾವಾದವನ್ನಲ್ಲ’ ಎಂದು ಚೀನಾ ಹೆಸರು ಹೇಳದೆಯೇ ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಚಾಟಿ ಬೀಸಿದ್ದಾರೆ.

ಗುರುವಾರ ಇಲ್ಲಿ ಥಾಯ್ಲೆಂಡ್‌ ಪ್ರಧಾನಿ ಪೆಟೋಂಗ್ಟರ್ನ್‌ ಶಿನಾವಾತ್ರಾ ಅವರೊಂದಿಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ, ‘ಭಾರತದ ಈಶಾನ್ಯ ರಾಜ್ಯಗಳು ಮತ್ತು ಥಾಯ್ಲೆಂಡ್‌ ನಡುವಿನ ಪ್ರವಾಸೋದ್ಯಮ, ಸಂಸ್ಕೃತಿ, ಶಿಕ್ಷಣ, ಎಂಎಸ್‌ಎಂಇ, ಕೈಮಗ್ಗ ಮತ್ತು ಕರಕುಶಲ ಕ್ಷೇತ್ರಗಳಲ್ಲಿನ ಸಹಕಾರಕ್ಕೆ ನಾವು ಒತ್ತು ನೀಡುತ್ತೇವೆ. ಪರಸ್ಪರ ವ್ಯಾಪಾರ, ಹೂಡಿಕೆ ಮತ್ತು ವಿನಿಮಯವನ್ನು ಹೆಚ್ಚಿಸುವ ಬಗ್ಗೆಯೂ ಚರ್ಚಿಸಿದೆವು’ ಎಂದರು.

 ಇದನ್ನೂ ಓದಿ: ಚೀನಾದಲ್ಲಿ ಅಮೆರಿಕ ಸಿಬ್ಬಂದಿಗೆ ಪ್ರಣಯ ನಿಷೇಧ: ಕಾರಣವೇನು ಗೊತ್ತೆ?

ಇದೇ ವೇಳೆ ಎರಡೂ ದೇಶಗಳು ಡಿಜಿಟಲ್ ತಂತ್ರಜ್ಞಾನದಿಂದ ಹಿಡಿದು ಸಂಸ್ಕೃತಿಯ ವರೆಗಿನ ಸಹಕಾರಕ್ಕೆ ಸಂಬಂಧಿಸಿದಂತೆ ಜಂಟಿ ಘೋಷಣೆ ಮತ್ತು ಒಪ್ಪಂದಗಳಿಗೆ ಸಹಿ ಮಾಡಿದರು.ಬಳಿಕ ಪ್ರಧಾನಿ ಮೋದಿ ಬಿಮ್‌ಸ್ಟೆಕ್‌ ಶೃಂಗಸಭೆಯಲ್ಲಿ ಭಾಗಿಯಾದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!