
ವಾಷಿಂಗ್ಟನ್ ಏ.4: ಅಮೆರಿಕ ಸರ್ಕಾರವು ಚೀನಾದಲ್ಲಿರುವ ಅಮೆರಿಕದ ಸರ್ಕಾರಿ ಸಿಬ್ಬಂದಿ, ಕುಟುಂಬ ಸದಸ್ಯರು, ಭದ್ರತಾ ಅನುಮತಿ ಹೊಂದಿರುವ ಗುತ್ತಿಗೆದಾರರು ಚೀನಾದ ನಾಗರಿಕರೊಂದಿಗೆ ಯಾವುದೇ ಪ್ರಣಯ ಅಥವಾ ಲೈಂಗಿಕ ಸಂಬಂಧ ಹೊಂದುವುದನ್ನು ನಿಷೇಧಿಸಿದೆ. ಭದ್ರತಾ ಕಾರಣಗಳಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಬೀಜಿಂಗ್‌ನಲ್ಲಿರುವ ರಾಯಭಾರ ಕಚೇರಿ ಮತ್ತು ಗುವಾಂಗ್‌ಝೌ, ಶಾಂಘೈ, ಶೆನ್ಯಾಂಗ್ ಮತ್ತು ವುಹಾನ್‌ನಲ್ಲಿರುವ ದೂತಾವಾಸಗಳು ಹಾಗೂ ಹಾಂಗ್ ಕಾಂಗ್‌ನ ಅರೆ ಸ್ವಾಯತ್ತ ಪ್ರದೇಶದಲ್ಲಿರುವ ದೂತಾವಾಸ ಸೇರಿದಂತೆ ಚೀನಾದ ಮುಖ್ಯ ಭೂಭಾಗದಲ್ಲಿರುವ ಅಮೆರಿಕದ ದೂತಾವಾಸಗಳಿಗೆ ಹೊಸ ನೀತಿ ಅನ್ವಯವಾಗಲಿದೆ. ಇದು ಚೀನಾದ ಹೊರಗೆ ನಿಯೋಜಿಸಲಾದ ಅಮೆರಿಕದ ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ
ಇದನ್ನೂ ಓದಿ:. 'ಭಾರತದ 7 ರಾಜ್ಯಗಳ ಕೀಲಿ ಕೈ ನಮ್ಮ ಬಳಿಯಿದೆ': ಮತ್ತೆ ಭಾರತ ವಿರೋಧಿ ಹೇಳಿಕೆ ನೀಡಿದ ಬಾಂಗ್ಲಾದ ಯೂನಸ್ ಸರ್ಕಾರ!
ಕಳೆದ ಬೇಸಿಗೆಯಲ್ಲಿಯೇ ಈ ನಿಯಮ ಜಾರಿಯಲ್ಲಿತ್ತು. ಆದರೆ ಚೀನಾದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮತ್ತು 5 ದೂತಾವಾಸಗಳಲ್ಲಿ ಗಾರ್ಡ್‌ಗಳು ಮತ್ತು ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಚೀನೀ ನಾಗರಿಕರೊಂದಿಗಿನ ಸಂಬಂಧವನ್ನು ಮಾತ್ರ ನಿಷೇಧಿಸಲಾಗಿತ್ತು. ಆದರೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಳ್ಳುವ ಕೆಲವೇ ದಿನಗಳ ಮೊದಲು ಚೀನಾದಿಂದ ನಿರ್ಗಮಿಸಿದ ಬರ್ನ್ಸ್ ಈ ನೀತಿಯನ್ನು ವಿಸ್ತರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ