ರಾಮೇಶ್ವರದಲ್ಲಿ ಪವಿತ್ರ ಸಮುದ್ರ ಸ್ನಾನ ಮಾಡಿ ರಾಮನಾಥನ ದರ್ಶನ ಪಡೆದ ಮೋದಿ!

Published : Jan 20, 2024, 05:50 PM IST
ರಾಮೇಶ್ವರದಲ್ಲಿ ಪವಿತ್ರ ಸಮುದ್ರ ಸ್ನಾನ ಮಾಡಿ ರಾಮನಾಥನ ದರ್ಶನ ಪಡೆದ ಮೋದಿ!

ಸಾರಾಂಶ

ರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಪ್ರಧಾನಿ ಮೋದಿ 11 ದಿನಗಳ ಕಠಿಣ ವೃತ ಕೈಗೊಂಡಿದ್ದಾರೆ. ಈ ಪ್ರಯುಕ್ತ, ರಾಮಾಯಣದ ಜೊತೆ ಸಂಬಂಧ ಹೊಂದಿರುವ ಮಂದಿರಗಳಿಗೆ ಪ್ರಧಾನಿ ಮೋದಿ ಬೇಟಿ ನೀಡುತ್ತಿದ್ದಾರೆ. ಇಂದು ತಮಿಳುನಾಡಿನ ರಾಮೇಶ್ವರಕ್ಕೆ ತೆರಳಿದ ಮೋದಿ, ಪವಿತ್ರ ಸಮುದ್ರ ಸ್ನಾನ ಮಾಡಿ ರಾಮನಾಥ ಸ್ವಾಮಿ ದರ್ಶನ ಪಡೆದಿದ್ದಾರೆ.

ರಾಮೇಶ್ವರಂ(ಜ.20) ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಕಠಿಣ ವೃತ ಕೈಗೊಂಡಿರುವ ಪ್ರಧಾನಿ ಮೋದಿ, ಶ್ರೀರಾಮನಿಗೆ ಸಂಬಂಧಿಸಿದ ಹಲವು ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಇಂದು ತಮಿಳುನಾಡಿನ ರಾಮೇಶ್ವರಂಗೆ ತೆರಳಿದ ಪ್ರಧಾನಿ ಮೋದಿ ಪವಿತ್ರ ಸಮುದ್ರ ಸ್ನಾನ ಮಾಡಿದ್ದಾರೆ. ಬಳಿಕ 22 ಬಾವಿಗಳ ಪವಿತ್ರ ನೀರಿನಿಂದ ಸ್ನಾನ ಮಾಡಿದ ಪ್ರಧಾನಿ ಮೋದಿ ರಂಗನಾಥ ಸ್ವಾಮಿ ದರ್ಶನ ಪಡೆದಿದ್ದಾರೆ. 

ರಾಮೇಶ್ವರಂದ ಅಗ್ನಿತೀರ್ಥ ಸಮುದ್ರದಲ್ಲಿ ಮೋದಿ ಪವಿತ್ರ ಸ್ನಾನ ಮಾಡಿದ್ದಾರೆ. ರುದ್ರಾಕ್ಷಿ ಮಾಲೆ ಹಿಡಿದು ಜಪಿಸುತ್ತಾ ಮೋದಿ ಪವಿತ್ರ ಸ್ನಾನ ಮಾಡಿದ್ದಾರೆ. ಸಮುದ್ರ ಸ್ನಾನ ಮಾಡಿ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ ಮೋದಿ, ಮಂದಿರದ ಆವರಣದಲ್ಲಿರುವ 22 ಬಾವಿಗಳ ಪವಿತ್ರ ನೀರಿನಿಂದ ಸ್ನಾನ ಮಾಡಿದ್ದಾರೆ. ಬಳಿಕ ರಂಗನಾಥ ಸ್ವಾಮಿ ಮಂದಿರ ಪ್ರವೇಶಿಸಿದ್ದಾರೆ.

ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಅಮೆರಿಕ, ಬ್ರಿಟನ್ ಸೇರಿ 56 ದೇಶದ 100 ಗಣ್ಯರು!

ರಾಮೇಶ್ವರಂದಲ್ಲಿರುವ ರಂಗನಾಥ ಸ್ವಾಮಿ ದರ್ಶನದ ಬಲಿಕ ಮೋದಿ, ಭಜನೆ ಪಾಲ್ಗೊಂಡು ಭಕ್ತಿಯಿಂದ ಜಪ ಮಾಡಿದರು. ತಮಿಳುನಾಡಿನ ಅತ್ಯಂತ ಪುರಾತನ ಶಿವ ದೇವಾಲಯ ಇದಾಗಿದೆ. ರಂಗನಾಥ ಸ್ವಾಮಿ ದೇವಸ್ಥಾನಕ್ಕೂ ರಾಮಾಯಣಕ್ಕೂ ನೇರ ಸಂಬಂಧವಿದೆ. ರಂಗನಾಥ ಸ್ವಾಮಿ ದೇವಸ್ಥಾನದಲ್ಲಿರುವ ಶಿವಲಿಂಗವನ್ನು ಭಗವಾನ್ ಶ್ರೀರಾಮ ಹಾಗೂ ಸೀತಾದೇವಿ ಪ್ರತಿಷ್ಠಾಪಿಸಿರುವ ಐತಿಹ್ಯವಿದೆ. ಶ್ರೀರಾಮ ಹಾಗ ಸೀತಾದೇವಿ ಇದೇ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿರುವ ಕುರಿತು ವಾಲ್ಮೀಕಿ ರಾಮಾಯಣ ಮಾತ್ರವಲ್ಲ, ಹಲವು ಪುರಾಣದಲ್ಲಿ ಉಲ್ಲೇಖವಿದೆ.

 

 

ಕೆಲ ಕಾರ್ಯಕ್ರಮ ನಿಮಿತ್ತ ನಿನ್ನೆ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿ, ಇಂದು ತಮಿಳುನಾಡಿನಲ್ಲಿ ಕಾರ್ಯಕ್ರಮದ ಜೊತೆಗೆ ದೇವರ ದರ್ಶನ ಪಡೆದಿದ್ದಾರೆ. ದೇವಸ್ಥಾನದ ಅರ್ಚಕರು ಪ್ರಧಾನಿ ಮೋದಿಯನ್ನು ಗೌರವಿಸಿದ್ದಾರೆ.  ಇದಕ್ಕೂ ಮುನ್ನ ಚೆನ್ನೈನಲ್ಲಿ ಪ್ರಧಾನಿ ಮೋದಿ 6ನೇ ಆವೃತ್ತಿ ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ಗೆ ಅಧಿಕೃತ ಚಾಲನೆ ನೀಡಿದ್ದರು. 2024ನ್ನು ಯುವ ಅಥ್ಲೀಟ್‌ಗಳ ಕ್ರೀಡಾಕೂಟದೊಂದಿಗೆ ಆರಂಭಿಸುತ್ತಿರುವುದು ಖುಷಿಯ ಸಂಗತಿ. ಇದು ಯುವ ಜನತೆಗೆ ಕೌಶಲ್ಯ, ಸಾಮರ್ಥ್ಯ ಸಾಬೀತುಪಡಿಸಲು ವೇದಿಕೆ ಒದಗಿಸಲಿದೆ. ಮುಂಬರುವ ದಿನಗಳಲ್ಲಿ ಕ್ರೀಡಾ ಕ್ಷೇತ್ರವು ₹1 ಲಕ್ಷ ಕೋಟಿಯಷ್ಟು ಬೃಹತ್ತಾಗಿ ಬೆಳಯಲಿದೆ ಎಂದು ಹೇಳಿದರು.

ನಡೆಯುವಾಗ ಮುಗ್ಗರಿಸಿದ ಸಿಎಂ ಸ್ಟಾಲಿನ್‌ಗೆ ಪ್ರಧಾನಿ ಮೋದಿಯ ನೆರವು, ವಿಡಿಯೋ ವೈರಲ್!

ಕ್ರೀಡಾಕೂಟದಲ್ಲಿ ದೇಶದೆಲ್ಲೆಡೆಯ 5500+ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದು, ಜ.31ರ ವರೆಗೆ ಕೂಟ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್‌ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆ ಶಿವಕುಮಾರ್‌ಗೆ ಕೇಂದ್ರ ನಾಯಕತ್ವ ಸ್ಥಾನ : ಕಾಂಗ್ರೆಸ್‌ನಲ್ಲಿ ಕೂಗು
ನ್ಯಾ। ಸ್ವಾಮಿನಾಥನ್‌ ವಾಗ್ದಂಡನೆಗೆ 56 ನಿವೃತ್ತ ಜಡ್ಜ್‌ಗಳ ಕಿಡಿ