ಸಿಎಂ ಆಗಿ ಸ್ಟಾಲಿನ್.. ಸಂಪುಟದಲ್ಲಿ ಗಾಂಧಿ..ನೆಹರು ಸಹ ಇದ್ದಾರೆ!

Published : May 06, 2021, 08:28 PM ISTUpdated : May 07, 2021, 05:27 PM IST
ಸಿಎಂ ಆಗಿ ಸ್ಟಾಲಿನ್.. ಸಂಪುಟದಲ್ಲಿ ಗಾಂಧಿ..ನೆಹರು ಸಹ ಇದ್ದಾರೆ!

ಸಾರಾಂಶ

ತಮಿಳುನಾಡಿನಲ್ಲಿ ಹೊಸ ಆಡಳಿತ/ ಸ್ಟಾಲಿನ್ ಆಡಳಿತ ಆರಂಭ/ ಸಿಎಂ ಆಗಿ ಶುಕ್ರವಾರ ಸ್ಟಾಲಿನ್ ಪ್ರಮಾಣ/  ಹಿರಿಯರಿಗೂ ಸಂಪುಟದಲ್ಲಿ ಸ್ಥಾನ/ ದಶಕದ ನಂತರ ಅಧಿಕಾರ ಹಿಡಿದ ಡಿಎಂಕೆ

ಚೆನ್ನೈ( ಮೇ 06) ತಮಿಳುನಾಡು ಸಿಎಂ ಆಗಿ ಎಂ.ಕೆ. ಸ್ಟಾಲಿನ್ ಶುಕ್ರವಾರ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ತಮಿಳುನಾಡು ಸಂಪುಟಕ್ಕೆ ಡಿಎಂಕೆ ಹಿರಿಯ ನಾಯಕರ ಪುನರಾಗಮನವಾಗುತ್ತಿದೆ. 

ಮೇ  2 ರಂದು  ಪ್ರಕಟವಾದ ಫಲಿತಾಂಶದಲ್ಲಿ ಡಿಎಂಕೆ ಅಧಿಕಾರ ಹಿಡಿದುಕೊಂಡಿತ್ತು ಡಿಎಂಕೆ 133 ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು ಕಾಂಗ್ರೆಸ್ ಸೇರಿದಂತೆ ಮಿತ್ರರಾಷ್ಟ್ರಗಳ ಜೊತೆಗೆ 234 ಸದಸ್ಯರ ವಿಧಾನಸಭೆಯಲ್ಲಿ ಒಟ್ಟು 159 ಕ್ಷೇತ್ರಗಳನ್ನು ಡಿಎಂಕೆ ಗಳಿಸಿಕೊಂಡಿದೆ.. ಎಐಎಡಿಎಂಕೆ ಕ್ರಮವಾಗಿ 66 ಕ್ಷೇತ್ರಗಳಲ್ಲಿ ಮತ್ತು ಅದರ ಪಾಲುದಾರರಾದ ಬಿಜೆಪಿ ಮತ್ತು ಪಿಎಂಕೆ ಕ್ರಮವಾಗಿ ನಾಲ್ಕು ಮತ್ತು ಐದು ಸ್ಥಾನಗಳನ್ನು  ಗೆದ್ದಿದ್ದು ಫಲಿತಾಂಶ.

ಶಿವರಾಜ್ ಕುಮಾರ್ ಮತ್ತು ಸ್ಟಾಲಿನ್ ಸ್ನೇಹದ ಕತೆ

33 ಮಂದಿಗೆ ಸಚಿವ ಸ್ಥಾನ ನೀಡಲಾಗುತ್ತಿದ್ದು  ಒಂದೇ ಬಾರಿ ಖಾತೆ ಹಂಚಿಕೆ ಮಾಡಲಾಗುತ್ತಿದೆ ಎಂದು  ರಾಜಭವನಕ್ಕೆ ಸ್ಟಾಲಿನ್ ಪಟ್ಟಿ ಕಳಿಸಿದ್ದಾರೆ.  ಸುಮಾರು ಒಂದು ದಶಕದ ನಂತರ ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರ ಹಿಡಿದಿದೆ.

ದೊರೈಮುರುಗನ್, ಕೆ.ಎನ್. ನೆಹರು, ಮತ್ತು ಎಂ.ಸುಬ್ರಮಣಿಯನ್ ಅವರಿಗೆ ಸಂಪುಟದಲ್ಲಿ ಪ್ರಮುಖ ಖಾತೆಗಳನ್ನು ನೀಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಸ್ಟಾಲಿನ್ ಅವರು ಗೃಹ ಇಲಾಖೆಯನ್ನು ಇಟ್ಟುಕೊಂಡಿದ್ದಾರೆ.  ನಿರ್ಣಾಯಕ ಆರೋಗ್ಯ ಖಾತೆಯನ್ನು ಚೆನ್ನೈನ ಮಾಜಿ ಮೇಯರ್ ಸುಬ್ರಮಣಿಯನ್ ಅವರಿಗೆ ನೀಡಲಾಗಿದೆ. 

ಕರುಣಾನಿಧಿ ಸಿಎಂ ಆಗಿದ್ದಾಗ ಉಪಮುಖ್ಯಮಂತ್ರಿಯಾಗಿ   ಕೆಲಸ ಮಾಡಿರುವ ಅನುಭವ ಹೊಂದಿರುವ ಸ್ಟಾಲಿನ್ ಈಗ ಸಿಎಂ ಆಗಿ ಆಡಳಿತ ನಡೆಸಲಿದ್ದಾರೆ. ಪಂಚ ರಾಜ್ಯಗಳ ಫಲಿತಾಂಶ ಹೊರಕ್ಕೆ ಬಂದಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!
ನಾವ್ಯಾರಿಗೂ ಕಮ್ಮಿ ಇಲ್ಲ ಬ್ರೋ... ಆಹಾ ಭಾರತೀಯ ನಾರಿ ಕುಡಿದು ರಾಪಿಡೋ ಏರಿ ಬಿದ್ದಳು ಕೆಳಗೆ ಜಾರಿ: ವೀಡಿಯೋ