ಕೆಲವರ ನಾಲಿಗೆ ಮೇಲೆ ಪಾಕ್ ಕುಣಿದಾಡುತ್ತಿದೆ: ಪ್ರಧಾನಿ ಮೋದಿ!

By Suvarna NewsFirst Published Dec 11, 2019, 12:13 PM IST
Highlights

CAB ವಿರೋಧಿಸುತ್ತಿರುವ ವಿಪಕ್ಷಗಳಿಗೆ ಚಾಟಿ ಬೀಸಿದ ಪ್ರಧಾನಿ ಮೋದಿ| 'CAB ವಿರೋಧಿಸುತ್ತಿರುವವರ ನಾಲಿಗೆ ಮೇಲೆ ಪಾಕಿಸ್ತಾನ ಕುಣಿದಾಡುತ್ತಿದೆ'|  ಪೌರತ್ವ ತಿದ್ದುಪಡಿ ಮಸೂದೆಯನ್ನು ಐತಿಹಾಸಿಕ ಎಂದು ಬಣ್ಣಿಸಿದ ಪ್ರಧಾನಿ ಮೋದಿ| 'ಮಸೂದೆಯನ್ನು ವಿರೋಧಿಸುವವರು ಪಾಕಿಸ್ತಾನ ಭಾಷೆಯನ್ನೇ ಮಾತನಾಡುತ್ತಿದ್ದಾರೆ'| ಬಿಜೆಪಿ ಸಂಸದೀಯ ಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ| CAB ಮಸೂದೆಗೆ ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿಪಕ್ಷಗಳ ವಿರೋಧ! ಇಂದು 12 ಗಂಟೆಗೆ ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಲಿರುವ ಅಮಿತ್ ಶಾ|
 

ನವೆಹಲಿ(ಡಿ.11): ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸುತ್ತಿರುವ ವಿಪಕ್ಷಗಳಿಗೆ ಪ್ರಧಾನಿ ಮೋದಿ ಚಾಟಿ ಬೀಸಿದ್ದಾರೆ. CAB ವಿರೋಧಿಸುತ್ತಿರುವವರ ನಾಲಿಗೆ ಮೇಲೆ ಪಾಕಿಸ್ತಾನ 
ಕುಣಿದಾಡುತ್ತಿದೆ ಎಂದು ಪ್ರಧಾನಿ ಹರಿಹಾಯ್ದಿದ್ದಾರೆ.

ಪೌರತ್ವ ತಿದ್ದುಪಡಿ ಮಸೂದೆಯನ್ನು ಐತಿಹಾಸಿಕ ಎಂದು ಬಣ್ಣಿಸಿರುವ ಪ್ರಧಾನಿ ಮೋದಿ, ಮಸೂದೆಯನ್ನು ವಿರೋಧಿಸುವವರು ಪಾಕಿಸ್ತಾನ ಭಾಷೆಯನ್ನೇ ಮಾತನಾಡುತ್ತಿದ್ದಾರೆ
ಎಂದು ಪ್ರಧಾನಿ ಮೋದಿ ಕಿಡಿಕಾರಿದ್ದಾರೆ.

ಅಮಿತ್ ಶಾ CAB: ವಾಷಿಂಗ್ಟನ್ ಟು ದಿಲ್ಲಿ, ಪಿಕ್ಚರ್ ಅಬಿ ಬಾಕಿ ಹೈ....!

ಬಿಜೆಪಿ ಸಂಸದೀಯ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪೌರತ್ವ ಮಸೂದೆ ಧಾರ್ಮಿಕ ಹಿಂಸಾಚಾರಗಳಳಿಗೆ ಬಲಿಯಾಗಿ ಬದುಕು ಕಳೆದುಕೊಂಡವರಿಗೆ ಮರಳಿ ಬದುಕು
ಕಟ್ಟಿಕೊಳ್ಳುವ ಸುವರ್ಣಾವಕಾಶ ನೀಡಲಿದೆ ಎಂದು ಹೇಳಿದರು.

Some Opposition parties speaking language of Pakistan on Citizenship (Amendment) Bill: PM Modi

Read Story | https://t.co/vbC4sLbHBp pic.twitter.com/Q0ofsfJWt6

— ANI Digital (@ani_digital)

ಕಾಂಗ್ರೆಸ್, ಎಡಪಕ್ಷಗಳು ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸುತ್ತಿವೆ. ಮಸೂದೆ ಧರ್ಮದ ಆಧಾರದ ಮೇಲೆ ದೇಶವನ್ನು ಒಡೆಯಲಿದೆ ಎಂಬುದು ವಿಪಕ್ಷಗಳ ಆರೋಪವಾಗಿದೆ.

ಶಾ ಎದುರಲ್ಲೇ CAB ಪ್ರತಿ ಹರಿದು ವಿವಾದ ಸೃಷ್ಟಿಸಿದ ಒವೈಸಿ!

ಈ ಮಧ್ಯೆ ಇಂದು 12 ಗಂಟೆಗೆ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಲಿದ್ದಾರೆ. ಮಸೂದೆ ಈಗಾಗಲೇ ಲೋಕಸಭೆಯಲ್ಲಿ ಪಾಸಾಗಿದ್ದು, ರಾಜ್ಯಸಭೆಯಲ್ಲೂ ಮಸೂದೆಗೆ ಬೆಂಬಲ ಸಿಗುವ ವಿಶ್ವಾಸದಲ್ಲಿ ಸರ್ಕಾರ ಇದೆ.

click me!