
ನವದೆಹಲಿ(ಅ.18) ಹಮಾಸ್ ಉಗ್ರರ ವಿರುದ್ಧ ದಾಳಿ ಮುಂದುವರಿಸಿರುವ ಇಸ್ರೇಲ್ ಸತತ ದಾಳಿ ನಡೆಸುತ್ತಿದೆ. ಆದರೆ ಇಂದು ಗಾಜಾದ ಆಸ್ಪತ್ರೆ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಸುಮಾರು 500ಕ್ಕೂ ಹೆಚ್ಚು ಅಮಾಯಕರು ಬಲಿಯಾಗಿದ್ದಾರೆ ಎಂದು ವರದಿಗಳು ಬಹಿರಂಗಪಡಿಸಿದೆ. ಇದು ಇಸ್ರೇಲ್ ನಡೆಸಿದ ಕ್ರೂರ ದಾಳಿ ಎಂದುು ಹಮಾಸ್ ಉಗ್ರರು ಹೇಳಿದ್ದಾರೆ. ಆದರೆ ಹಮಾಸ್ ಉಗ್ರರು ಇಸ್ರೇಲ್ ಮೇಲೆ ನೆಡಸಿದ ಕ್ಷಿಪಣಿ ದಾಳಿ ವಿಫಲಗೊಂಡು ಆಸ್ಪತ್ರೆ ಮೇಲೆ ಬಿದ್ದ ದಾಖಲೆಯನ್ನು ಇಸ್ರೇಲ್ ಸೇನೆ ಬಹಿರಂಗ ಮಾಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಆಸ್ಪತ್ರೆ ದಾಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾಗರೀಕರ ಸಾವು ನೋವು ಗಂಬೀರ ವಿಚಾರ. ದಾಳಿಯಲ್ಲಿಮೃತಪಟ್ಟವರಿಗೆ ಸಂತಾಪ ಸೂಚಿಸಿದ ಮೋದಿ, ದಾಳಿಯನ್ನು ಖಂಡಿಸಿದ್ದಾರೆ.
ಗಾಜಾದಲ್ಲಿನ ಅಲ್ ಅಹ್ಲಿ ಆಸ್ಪತ್ರೆ ಮೇಲೆ ನಡೆದ ದಾಳಿಯಿಂದ ಆಘಾತಗೊಂಡಿದ್ದೇನೆ. ಆಸ್ಪತ್ರೆಯಲ್ಲಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಅಗಲಿದ ಕುಟುಂಬಕ್ಕೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಗಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಸದ್ಯ ನಡೆಯುತ್ತಿರುವ ಯುದ್ಧದಲ್ಲಿ ನಾಗರೀಕರ ಸಾವು ನೋವು ಗಂಭೀರ ವಿಚಾರ. ಇದು ಆತಂಕ ಹೆಚ್ಚಿಸಿದೆ. ದಾಳಿ ಮಾಡಿದವರನ್ನು ಹೊಣೆಗಾರರನ್ನಾಗಿಸಬೇಕು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಇಸ್ರೇಲ್ ಮೇಲೆ ಉಗ್ರ ದಾಳಿಯಿಂದ ಭಾರತ ಅಲರ್ಟ್, ಗ್ಲೈಡರ್ಸ್ ಹಾರಾಟಕ್ಕೆ ಕಠಿಣ ನಿಯಮ ಜಾರಿ!
ಪ್ರಧಾನಿ ನರೇಂದ್ರ ಮೋದಿ ಈ ದಾಳಿಯ ಯಾರು ಮಾಡಿದ್ದಾರೋ ಅವರನ್ನೇ ಶಿಕ್ಷಿಸಬೇಕು ಎಂದು ಒತ್ತಿ ಹೇಳಿದ್ದಾರೆ. ಆಸ್ಪತ್ರೆ ಮೇಲೆ ನಡೆದ ದಾಳಿ ಹಿಂದೆ ಹಮಾಸ್ ಉಗ್ರರ ವಿಫಲ ಯತ್ನ ಕಾರಣಗಳನ್ನು ಇಸ್ರೇಲ್ ದಾಖಲೆ ಸಮೇತ ಬಹಿರಂಗಪಡಿಸಿದೆ. ಹಮಾಸ್ ಉಗ್ರರು ಇಸ್ರೇಲ್ ಗುರಿ ಇಟ್ಟು ನಡೆಸಿದ ಕ್ಷಿಪಣಿ ದಾಳಿ ವಿಫಲಗೊಂಡು ಆಸ್ಪತ್ರೆ ಮೇಲೆ ಬಿದ್ದಿದೆ. ದಾಳಿಯ ಮೊದಲು ಹಾಗೂ ನಂತರ ಹಮಾಸ್ ಉಗ್ರರ ರಾಕೆಟ್ ಲಾಂಚ್ ಹಾಗೂ ಆಸ್ಪತ್ರೆಯ ವಿಡಿಯೋಗಳನ್ನು ಇಸ್ರೇಲ್ ಸೇನೆ ಬಹಿರಂಗಪಡಿಸಿದೆ.
ಇನ್ನು ಹಮಾಸ್ ಉಗ್ರರು ರಾಕೆಟ್ ತಪ್ಪಿ ಆಸ್ಪತ್ರೆ ಮೇಲೆ ಬಿದ್ದ ಬೆನ್ನಲ್ಲೇ ಉಗ್ರರು ನಡೆಸಿದ ಸಂಭಾಷಣೆ ಆಡಿಯೋವನ್ನು ಇಸ್ರೇಲ್ ಸೇನೆ ಬಿಡುಗಡೆ ಮಾಡಿದೆ. ಅತ್ತ ಹಮಾಸ್ ಉಗ್ರರು ಇದು ಇಸ್ರೇಲ್ ನಡೆಸಿದ ದಾಳಿ ಎಂದು ಹೇಳುತ್ತಿದ್ದರೂ ಯಾವುದೇ ದಾಖಲೆ ನೀಡಿಲ್ಲ. ಇದೇ ವೇಳೆ ಇಸ್ರೇಲ್ ಸೇನೆ ನಾಗರೀಕರ ಮೇಲೆ ಇಸ್ರೇಲ್ ದಾಳಿ ಮಾಡಲ್ಲ ಎಂದು ಪುನರುಚ್ಚರಿಸಿದೆ. ನಾಗರೀಕರ ಬಕ್ಕೆ ಕಳಕಳಿ ಇರುವ ಕಾರಣದಿಂದಲೇ ಗಾಜಾ ಮೇಲಿನ ದಾಳಿಗೂ ಮೊದಲು ಎಚ್ಚರಿಕೆ ನೀಡಲಾಗಿತ್ತು. ನಾಗರೀಕರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ ಹಮಾಸ್ ಉಗ್ರರು ಇಸ್ರೇಲ್ ನಾಗರೀಕರನ್ನೇ ಗುರಿಯಾಸಿ ದಾಳಿ ನಡೆಸಿದ್ದಾರೆ. ಒತ್ತೆಯಾಳಾಗಿಟ್ಟುಕೊಂಡಿದ್ದಾರೆ ಎಂದು ಇಸ್ರೇಲ್ ಸೇನೆ ದಾಖಲೆ ಸಮೇತ ಹೇಳಿದೆ.
ಇನ್ನೂ ಹೆಣ ಬೀಳೋದಿದೆ, ಎಲ್ಲ ಒಟ್ಟಿಗೆ ಹೂಳ್ತೀವಿ.. ಇಸ್ರೇಲ್ ಮಹಿಳಾ ಯೋಧೆಯ ಕಿಡಿನುಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ