ಗುಜರಾತ್‌ನ ಹಲವೆಡೆ ಭಾರೀ ಪ್ರಮಾಣದ ಮಳೆ| ಸೂರ್ಯ ಮಂದಿರದ ಅದ್ಭುತ ವಿಡಿಯೋ ಶೇರ್ ಮಾಡಿದ ಪಿಎಂ| ಮೊಡೇರಾದ ಪ್ರತಿಷ್ಠಿತ ಸೂರ್ಯ ಮಂದಿರ ಮಳೆಗಾಲದಲ್ಲಿ ಅದ್ಭುತವಾಗಿ ಕಾಣಿಸುತ್ತಿದೆ
ಅಹಮದಾಬಾದ್(ಆ.26): ಗುಜರಾತ್‌ನ ಹಲವೆಡೆ ಭಾರೀ ಪ್ರಮಾಣದ ಮಳೆಯಾಗುತ್ತಿದೆ. ವರುಣನ ಅಬ್ಬರದಿಂದ ನದಿಗಳು ತುಂಬಿ ಹರಿಯುತ್ತಿದ್ದು, ನೂರಕ್ಕೂ ಅಧಿಕ ಕಡೆ ಹೈಅಲರ್ಟ್ ಘೋಷಿಸಲಾಗಿದೆ. ಇವೆಲ್ಲದರ ನಡುವೆ ಪಿಎಂ ಮೋದಿ ಟ್ವಿಟರ್‌ನಲ್ಲಿ ಅದ್ಭುತವಾದ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಮೊಡೇರಾದ ಸೂರ್ಯ ಮಂದಿಇರದ ಅದ್ಭುತ ದೃಶ್ಯವೊಂದಿದದೆ. ಈ ಮನಮೋಹಕ ವಿಡಿಯೋ ಸದ್ಯ ಭಾರೀ ವೈರಲ್ ಆಗಿದೆ.
undefined
ಕಾಂಟ್ರವರ್ಸಿಗೆ ಕಾರಣವಾದ ನವಿಲು; 'ಅಂದು ಹಾಗೆ, ಇಂದು ಹೀಗೆ' !
ವಿಡಿಯೋದಲ್ಲಿ ಭಾರೀ ಮಳೆಯ ಪರಿಣಾಮ ಸೂರ್ಯ ಮಂದಿರದ ಮೆಟ್ಟಿಲುಗಳಿಂದ ನೀರು ಹರಿಯುತ್ತಿರುವುದನ್ನು ನೋಡಬಹುದಾಗಿದೆ. ವಿಡಿಯೋ ಶೇರ್ ಮಾಡಿಕೊಂಡಿರುವ ಮೋದಿ 'ಮೊಡೇರಾದ ಪ್ರತಿಷ್ಠಿತ ಸೂರ್ಯ ಮಂದಿರ ಮಳೆಗಾಲದಲ್ಲಿ ಅದ್ಭುತವಾಗಿ ಕಾಣಿಸುತ್ತಿದೆ' ಎಂದು ಬರೆದಿದ್ದಾರೆ.
Modhera’s iconic Sun Temple looks splendid on a rainy day 🌧!
Have a look. pic.twitter.com/yYWKRIwlIe
ಗುಜರಾತ್‌ನಲ್ಲಿ ಈವರೆಗೂ ವಾರ್ಷಿಕ ಸರಾಸರಿಯ ಶೇ. 106.78ರಷ್ಟು ಮಳೆಯಾಗಿದೆ. ಇಲ್ಲಿನ ಒಟ್ಟು 205 ಜಲಾಶಯಗಳಲ್ಲಿ 90 ಸಂಪೂರ್ಣವಾಗಿ ಭರ್ತಿಯಾಗಿವೆ. ಸರ್ದಾರ್ ಸರೋವರ ಜಲಾಶಯದಲ್ಲಿ ನೀರಿನ ಮಟ್ಟ 128.93 ಅಡಿಯಾಗಿದ್ದು, ಹತ್ತು ಮೀಟರ್‌ನಷ್ಟೇ ಬಾಕಿ ಇದೆ.
ಸೂರ್ಯ ಮಂದಿರದ ವಿಶೇಷತೆ ಏನು?
ಗುಜರಾತ್‌ನ ಈ ಸೂರ್ಯ ಮಂದಿರ ಕಮಲ ಆಕಾರದಲ್ಲಿದೆ. ಅಲ್ಲದೇ ಈ ದೇಗುಲದ ಇಂಚಿಂಚೂ ಸುಂದರವಾದ ಕೆತ್ತನೆಯಿಂದ ಕೂಡಿದೆ.ಈ ಎಲ್ಲಾ ಕೆತ್ತನೆಗಳು ರಾಮಾಯಣದಿಂದ ಮಹಾಭಾರತದವರೆಗಿನ ಎಲ್ಲಾ ಸಂಪ್ರದಾಯ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಈ ಮಂದಿರವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಮೊದಲನೆಯದ್ದು ಮಂದಿರದ ಮುಂಬದಿಯಲ್ಲಿರುವ ಸೂರ್ಯ ಕುಂಡ. ಸುತ್ತಲೂ ಮೆಟ್ಟಿಲುಗಳಿದ್ದು, ಮಧ್ಯದಲ್ಲಿ ನೀರಿನ ಕುಂಡವಿದೆ. ಹಹಿಂದೆ ಇದನ್ನು ಶುದ್ಧ ನೀರು ಸಂಗ್ರಹಿಸಲು ಉಪಯೋಗಿಸಲಾಗುತ್ತಿತ್ತು. ಆದರೀಗ ಇಲ್ಲಿ ಮಳೆ ನೀರು ಬಿಟ್ಟರೆ ಬೇರೇನೂ ಕಾಣ ಸಿಗುವುದಿಲ್ಲ.
ಇಲ್ಲಿನ ಸಭಾ ಮಂಟಪ ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ. ಪ್ರಯಾಣಿಕರು ಇಲ್ಲಿ ಕುಳಿತು ವಿಶ್ರಾಂತಿಯನ್ನೂ ಪಡೆಯಬಹುದು.
ಕೊನೆಯದಾಗಿ ಇರುವ ಭಾಗವೇ ಗುಡ ಮಂಟಪ. ಮೊಹಮ್ಮದ್ ಘಾಜಿ ಇಲ್ಲಿ ಆಕ್ರಮಣ ನಡೆಸುವುದಕ್ಕೂ ಮುನ್ನ ಇಲ್ಲಿ ಸೂರ್ಯ ದೇವನ ಪ್ರತಿಮೆಗಳಿದ್ದವೆನ್ನಲಾಗಿದೆ.