ನೀಮೋ ಪತ್ನಿ ಬಂಧನಕ್ಕೆ ಇಂಟರ್‌ಪೋಲ್‌ನಿಂದ ಜಾಗತಿಕ ವಾರೆಂಟ್‌!

By Suvarna NewsFirst Published Aug 26, 2020, 1:49 PM IST
Highlights

ನೀಮೋ ಪತ್ನಿ ಬಂಧನಕ್ಕೆ ಇಂಟರ್‌ಪೋಲ್‌ನಿಂದ ಜಾಗತಿಕ ವಾರೆಂಟ್‌| ಪಂಗನಾಮ ಹಾಕಿ ಭಾರತದಿಂದ ಪರಾರಿಯಾಗಿ, ಸದ್ಯ ಲಂಡನ್‌ ಜೈಲಿನಲ್ಲಿರುವ ವಜ್ರೋದ್ಯಮಿ ನೀರವ್‌ ಮೋದಿ

ನವದೆಹಲಿ(ಆ.26): ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ .13 ಸಾವಿರ ಕೋಟಿ ಪಂಗನಾಮ ಹಾಕಿ ಭಾರತದಿಂದ ಪರಾರಿಯಾಗಿ, ಸದ್ಯ ಲಂಡನ್‌ ಜೈಲಿನಲ್ಲಿರುವ ವಜ್ರೋದ್ಯಮಿ ನೀರವ್‌ ಮೋದಿಯ ಪತ್ನಿ ಅಮಿ ಮೋದಿ ಬಂಧನಕ್ಕೆ ಇಂಟರ್‌ ಪೋಲ್‌ ಜಾಗತಿಕ ವಾರೆಂಟ್‌ ಹೊರಡಿಸಿದೆ.

ನೀರವ್ ಮೋದಿಗೆ ಇಡಿ ಮತ್ತೊಂದು ಶಾಕ್, ಫ್ಲಾಟ್, ಫಾರ್ಮ್ ಹೌಸ್ ಜಪ್ತಿ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅಮಿ ಕೂಡಾ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಕೋರಿಕೆ ಮೇರೆಗೆ ಈ ನೋಟಿಸ್‌ ಜಾರಿ ಮಾಡಿದೆ. ಅಮಿ ಎಲ್ಲಿಯಾದರೂ ಈಕೆ ಪತ್ತೆಯಾದರೆ ಬಂಧಿಸಿ ಗಡಿಪಾರು ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಇಂಟರ್‌ಪೋಲ್‌ ತನ್ನ 192 ಸದಸ್ಯ ರಾಷ್ಟ್ರಗಳಿಗೆ ಸೂಚಿಸಿದೆ.

ನೀರವ್‌ 1350 ಕೋಟಿ ರೂ. ವಜ್ರಾಭರಣ ಭಾರತ ವಶಕ್ಕೆ!.

2018ರಲ್ಲಿ ಪಿಎನ್‌ಬಿ ವಂಚನೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಅಮಿ ಭಾರತದಿಂದ ಕಾಲ್ಕಿತ್ತಿದ್ದಳು. ಮೋದಿ ತಮ್ಮ ನೇಹಲ್‌ ಮೋದಿ ಹಾಗೂ ಸಹೋದರಿ ಪೂರ್ವಿ ಮೋದಿ ವಿರುದ್ಧವೂ ಇಂಥಹದ್ದೇ ವಾರೆಂಟ್‌ ಜಾರಿ ಮಾಡಲಾಗಿದೆ.

click me!