ಕೊರೋನಾ ಸಾವಿನ ಲೆಕ್ಕಪರಿಶೋಧನೆ ಅಗತ್ಯ; ಏಮ್ಸ್ ನಿರ್ದೇಶಕ!

By Suvarna NewsFirst Published Jun 12, 2021, 11:02 PM IST
Highlights
  • ಕೊರೋನಾ ಸಾವಿನ ನಿಜವಾದ ಲೆಕ್ಕ ಕುರಿತು ವಿವಾದ
  • ಸದ್ಯದ ವರದಿಯಲ್ಲಿರುವ ಲೆಕ್ಕಕ್ಕಿಂತ ಹೆಚ್ಚಿದೆ ಸಾವಿನ ಸಂಖ್ಯೆ ಆರೋಪ
  • ಆರೋಪಗಳ ಬೆನ್ನಲ್ಲೇ ಏಮ್ಸ್ ನಿರ್ದೇಶಕರಿಂದ ಮಹತ್ದ ಸಲಹೆ
     

ನವದೆಹಲಿ(ಜೂ.12): ಕೊರೋನಾ ವೈರಸ್ ಸಾವಿನ ಕುರಿತು ಹಲವು ಅನುಮಾನಗಳಿವೆ. ಭಾರತದಲ್ಲಿ ಕೊರೋನಾಗೆ ಬಲಿಯಾದವರ ನಿಜವಾದ ಸಂಖ್ಯೆ ಇನ್ನೂ ಬಹಿರಂಗವಾಗಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಲೇ ಇದೆ. ಸಾವಿನ ಸಂಖ್ಯೆ ಕುರಿತ ಆರೋಪ-ಪ್ರತ್ಯಾರೋಪಗಳ ನಡುವೆ ಏಮ್ಸ್ ನಿರ್ದೇಶಕ ರಂದೀಪ್ ಗುಲೆರಿಯಾ ಮಹತ್ವದ ಸಲಹೆ ನೀಡಿದ್ದಾರೆ. 

ಕೊರೋನಾ ಸಾವಿನ ಸಂಕೋಲೆ: ರಾಜ್ಯವೇ ಬೆಚ್ಚಿ ಬೀಳಿಸುವಂತ ಸುದ್ದಿ..!...

ಭಾರತದಲ್ಲಿ ಕೊರೋನಾದಿಂದ ಸಾವನ್ನಪ್ಪುತ್ತಿರುವ ಸಂಖ್ಯೆ ಕುರಿತು ಆಸ್ಪತ್ರೆ ಹಾಗೂ ಎಲ್ಲಾ ರಾಜ್ಯಗಳು ಲೆಕ್ಕ ಪರಿಶೋಧನೆ ನಡೆಸುವ ಅಗತ್ಯವಿದೆ ಎಂದು ಗುಲೇರಿಯಾ ಸಲಹೆ ನೀಡಿದ್ದಾರೆ.  ಹಲವು ರಾಜ್ಯಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಿ ವರದಿ ನೀಡುತ್ತಿದೆ. ಮಧ್ಯಪ್ರದೇಶದಲ್ಲಿ ಆಸ್ಪತ್ರೆ, ಹಾಗೂ ಇತರ ಅಂಕಿ ಅಂಶಗಳಲ್ಲಿರುವ ಕೊರೋನಾದಿಂದ ಬಲಿಯಾದವರ ಸಂಖ್ಯೆ ಹೊಂದಾಣಿಕೆಯಾಗುತ್ತಿಲ್ಲ.

ಕೊರೋನಾ ಸಾವಿನ ಸಂಖ್ಯೆ ವರ್ಗೀಕರಣದಲ್ಲಿನ ಕೆಲ ಗೊಂದಲಗಳಿಗೂ ತೆರೆ ಎಳೆಯಲು ಗುಲೇರಿಯಾ ಸೂಚಿಸಿದ್ದಾರೆ. ಒರ್ವ ವ್ಯಕ್ತಿ ಹೃದಾಯಘಾತದಿಂದ ಸಾವನ್ನಪ್ಪಿರುತ್ತಾನೆ. ಆತನಿಗೆ ಕೋವಿಡ್ ಇದ್ದರೆ, ಕೊರೋನಾ ಹೃದಾಯಾಘಾತಕ್ಕೆ ಕಾರಣವಾಗಬಹುದು. ಹೀಗಾಗಿ ಈ ಸಾವನ್ನು ಇದು ಕೋವಿಡ್ ಸಾವಿನ ಲೆಕ್ಕದಲ್ಲಿ ಸೇರಿಸದೆ ಹೃದಯಾಘಾತ ಸಾವಿನ ಸಂಖ್ಯೆಯಲ್ಲಿ ಸೇರಿಸುತ್ತಿದ್ದಾರೆ ಎಂದು ಗುಲೇರಿಯಾ ಹೇಳಿದ್ದಾರೆ.

ರಾಜ್ಯದಲ್ಲಿ 30 ಸಾವಿರ ದಾಟಿದ ಕೊರೋನಾ ಸಾವು...

ಪ್ರತಿ ಆಸ್ಪತ್ರೆಗಳು ಸಾವಿನ ಸಂಖ್ಯೆ ಲೆಕ್ಕಪರಿಶೋಧನೆ ಮಾಡಬೇಕು. ಇತ್ತ ರಾಜ್ಯ ಸರ್ಕಾರಗಳು ಲೆಕ್ಕಪರಿಶೋಧನೆ ಮಾಡಬೇಕು. ಎಲ್ಲಾ ಲೆಕ್ಕಗಳು ಹೊಂದಾಣಿಕೆ ಆಗಬೇಕು. ಪ್ರತಿ ಜೀವಗಳು ಅತೀ ಮುಖ್ಯ. ಜೊತೆಗೆ ಸಾವಿನ ಕಾರಣಗಳು ಅಷ್ಟೇ ಮುಖ್ಯ. ಸಾವಿನ ಲೆಕ್ಕ ದೇಶದ ಕೋವಿಡ್ ಪರಿಸ್ಥಿತಿ, ಮುಂದೆ ಕೈಗೊಳ್ಳಬೇಕಾದ ನಿರ್ಣಯ ಸೇರಿದಂತೆ ಹಲವು ನಿರ್ಧಾರಕ್ಕೆ ದಿಕ್ಸೂಚಿಯಾಗಿದೆ ಎಂದು ಗುಲೇರಿಯಾ ಸೂಚಿಸಿದ್ದಾರೆ.

click me!