2 ವಾರದಲ್ಲಿ 3ನೇ ಬಾರಿ ಸಚಿವರ ಮೌಲ್ಯಮಾಪನ ಮಾಡಿದ ಮೋದಿ!

By Suvarna News  |  First Published Jan 5, 2020, 8:40 AM IST

2 ವಾರದಲ್ಲಿ 3ನೇ ಬಾರಿ ಸಚಿವರ ಮೌಲ್ಯಮಾಪನ ಮಾಡಿದ ಮೋದಿ| 5 ವರ್ಷದ ಕಾರ್ಯಯೋಜನೆ ಅರಿಯಲು ಕಸರತ್ತು


ನವದೆಹಲಿ[ಜ.05]: ಕೇಂದ್ರ ಸಚಿವಾಲಯಗಳ ಕಾರ್ಯದಕ್ಷತೆಯನ್ನು ಮೇಲ್ದರ್ಜೆಗೇರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳ ಕಾರ್ಯವೈಖರಿಯನ್ನು ಪರಾಮರ್ಶೆಗೆ ಒಳಪಡಿಸಿದರು. ಈ ಮೂಲಕ ಮುಂದಿನ 5 ವರ್ಷಗಳ ಅಧಿಕಾರಾವಧಿಯಲ್ಲಿ ಏನೆಲ್ಲಾ ಕಾರ್ಯ ಯೋಜನೆ ಕೈಗೊಳ್ಳಬೇಕೆಂಬ ಕುರಿತಾಗಿ ಅರಿಯುವ ಸಲುವಾಗಿ ಡಿಸೆಂಬರ್‌ 21ರಿಂದ ಇದುವರೆಗೂ ಪ್ರಧಾನಿ ನರೇಂದ್ರ ಮೋದಿ ಅವರು 3 ಬಾರಿ ಸಚಿವರ ಕಾರ್ಯವೈಖರಿ ಸಭೆ ನಡೆಸಿದಂತಾಗಿದೆ.

ಶನಿವಾರ ನಡೆದ ಸಚಿವಾಲಯಗಳ ಕಾರ್ಯವೈಖರಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತ, ತಂತ್ರಜ್ಞಾನ ಹಾಗೂ ಸಂಪನ್ಮೂಲಗಳ ವಲಯಗಳ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದುವರೆಗೂ ನಡೆದ ಸಭೆಗಳಲ್ಲಿ ಸಚಿವಾಲಯಗಳ ಹಲವು ಸಮಿತಿಗಳು ನೀಡಿದ ಸಲಹೆ-ಸೂಚನೆಗಳನ್ನು ಪರಿಗಣಿಸಿ, ವಿವಿಧ ಇಲಾಖೆಗಳ ಮುಂದಿನ 5 ವರ್ಷಗಳ ಕಾರ್ಯಯೋಜನೆಯನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Latest Videos

ಸರ್ಕಾರದ ಯೋಜನೆಗಳ ಉತ್ತಮ ಅನುಷ್ಠಾನಕ್ಕಾಗಿ ಈಗಾಗಲೇ ಸಚಿವಾಲಯಗಳನ್ನು ಕೃಷಿ, ಆರೋಗ್ಯ, ಆಡಳಿತ ಮತ್ತು ತಂತ್ರಜ್ಞಾನ ಎಂಬ ವಿಭಾಗಗಳನ್ನಾಗಿ ವಿಭಜಿಸಲಾಗಿದ್ದು, ಸರ್ಕಾರದ ಯೋಜನೆಗಳ ವ್ಯವಸ್ಥಿತ ಅನುಷ್ಠಾನ ಹಾಗೂ ಅಭಿವೃದ್ಧಿಗೆ ಕಾರ್ಯಯೋಜನೆ ಸಹಾಯಕವಾಗಲಿದೆ ಎನ್ನಲಾಗಿದೆ.

click me!