ಕುಸಿದ ಐತಿಹಾಸಿಕ ಬರ್ದಮಾನ್ ಜಂಕ್ಷನ್ ಕಟ್ಟಡ: ವಿಡಿಯೋ!

By Suvarna NewsFirst Published Jan 4, 2020, 9:41 PM IST
Highlights

ಪ.ಬಂಗಾಳದ ಬರ್ದಮಾನ್ ಜಂಕ್ಷನ್ ಕಟ್ಟಡದ ಗೋಡೆ ಕುಸಿತ| ನೋಡನೋಡುತ್ತಿದ್ದಂತೇ ಕುಸಿದ ಬರ್ದಮಾನ್ ಜಂಕ್ಷನ್ ಗೋಡೆ| ಗೋಡೆ ಕುಸಿತದ ಪರಿಣಾಮ ಹಲವು ಪ್ರಯಾಣಿಕರಿಗೆ ಗಂಭೀರ ಗಾಯ| ಇತ್ತೀಚಿಗಷ್ಟೇ ಕಟ್ಟಡದ ಮರುನಿರ್ಮಾಣ ಕಾರ್ಯ ಪೂರ್ಣ|  ಬರ್ದಮಾನ್ ಜಂಕ್ಷನ್ ಗೋಡೆ ಕುಸಿತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್|

ಬರ್ದಮಾನ್(ಜ.04): ದೇಶದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾದ ಪ.ಬಂಗಾಳದ ಬರ್ದಮಾನ್ ಜಂಕ್ಷನ್ ಕಟ್ಟಡದ ಗೋಡೆ ಕುಸಿದಿದೆ.

ನೋಡ ನೋಡುತ್ತಿದ್ದಂತೇ ನಿಲ್ದಾಣದ ಮುಂಭಾಗದ ಪ್ರಮುಖ ಗೋಡೆ ಕುಸಿದಿದ್ದು, ಈ ವೇಳೆ ರೈಲು ನಿಲ್ದಾಣದ ಒಳಗೆ ಹೋಗಲು ಸಜ್ಜಾಗಿದ್ದ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬರ್ದಮಾನ್ ಜಂಕ್ಷನ್‌ನ ಕಟ್ಟಡದ ಗೋಡೆ ಅತ್ಯಂತ ಹಳೆಯದು ಎನ್ನಲಾಗಿದ್ದು, ಇತ್ತೀಚಿಗಷ್ಟೇ ಕಟ್ಟಡದ ಮರುನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗಿತ್ತು.

"

ಆದರೆ ಇಂದು ಸಂಜೆ [ಶನಿವಾರ] ಏಕಾಏಕಿ ಬರ್ದಮಾನ್ ಜಂಕ್ಷನ್ ಕಟ್ಟಡದ ಗೋಡೆ ಕುಸಿದಿದ್ದು, ಈ ವೇಳೆ ನಿಲ್ದಾಣದ ಮುಂಭಾಗದಲ್ಲಿ ನಿಂತಿದ್ದ ಕೆಲವು ಪ್ರಯಾಣಿಕರು ಗೋಡೆ ಕುಸಿತದ ವಿಡಿಯೋ ಮಾಡಿದ್ದಾರೆ.

ಸದ್ಯ ಬರ್ದಮಾನ್ ಜಂಕ್ಷನ್ ಗೋಡೆ ಕುಸಿತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಕಳಪೆ ಕಾಮಗಾರಿಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಆಗಸ್ಟ್ 15, 1854ರಲ್ಲಿ ಬರ್ದಮಾನ್ ಜಂಕ್ಷನ್‌ನಿಂದ ಹೌರಾದಿಂದ ಹೂಗ್ಲಿಗೆ ಮೊದಲ ರೈಲು ಪ್ರಯಾಣ ಬೆಳೆಸಿತ್ತು. 1855ರಲ್ಲಿ ರಾಣಿಗಂಜ್‌ವರೆಗೆ ಹಳಿ ವಿಸ್ತರಣೆ ಕಾರ್ಯವನ್ನು ಪೂರ್ಣಗೊಳಿಸಲಾಗಿತ್ತು.

click me!