ಹೊಸ ಸಂಸತ್ ಭವನ ಉದ್ಘಾಟನೆ, 75 ರೂಪಾಯಿ ವಿಶೇಷ ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ಮೋದಿ!

By Suvarna News  |  First Published May 28, 2023, 1:48 PM IST

ಹೊಸ ಸಂಸತ್ ಭವನ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ ಇದೇ ವೇಳೆ ವಿಶೇಷ 75 ರೂಪಾಯಿ ನಾಣ್ಯ ಹಾಗೂ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದ್ದಾರೆ. 
 


ನವದೆಹಲಿ(ಮೇ.28): ನೂತನ ಸಂಸತ್‌ ಭವನ ಉದ್ಘಾಟನೆಯ ಸ್ಮರಣಾರ್ಥ ಭಾನುವಾರ 75 ರೂಪಾಯಿ ಮುಖಬೆಲೆಯ ಸ್ಮರಣಾರ್ಥ ನಾಣ್ಯ ಮತ್ತು ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಲಾಗಿದೆ. ಹೊಸ ಸಂಸತ್ ಭವನ ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ವಿಶೇಷ ನಾಣ್ಯ ಹಾಗೂ ಅಂಚೆ ಚೀಟಿ ಬಿಡುಗಡೆ ಮಾಡಿದ್ದಾರೆ. ಮೊದಲು ಅಂಚೆ ಚೀಟಿ ಬಿಡುಗಡೆ ಮಾಡಿದ ಮೋದಿ, ಬಳಿಕ 75 ರೂಪಾಯಿ ವಿಶೇಷ ನಾಣ್ಯ ಬಿಡುಗಡೆ ಮಾಡಿದರು.

ಈ ನಾಣ್ಯದಲ್ಲಿ ಶೇ.50ರಷ್ಟುಬೆಳ್ಳಿ, ಶೇ.40ರಷ್ಟುತಾಮ್ರ ಶೇ.5ರಷ್ಟುನಿಕ್ಕಲ್‌ ಹಾಗೂ ಶೇ.5ರಷ್ಟುಝಿಂಕ್‌ ಮಿಶ್ರಣದಿಂದ ತಯಾರಿಸಲಾಗಿದೆ. ಇದರ ತೂಕ 34.65ರಿಂದ 35.35 ಗ್ರಾಂ ಇದ್ದು, ಭಾರತದ ಲಾಂಛನ ಅಶೋಕ ಚಕ್ರದ ಮುದ್ರೆ ಇರಲಿದೆ. ಇದರ ಕೆಳಗೆ ದೇವನಾಗರಿಯಲ್ಲಿ ಭಾರತ ಹಾಗೂ ಇಂಗ್ಲಿಷ್‌ನಲ್ಲಿ ಇಂಡಿಯಾ ಎಂದು ಮುದ್ರಣವಾಗಲಿದೆ. ಇದರ ಕೆಳಗೆ ರುಪಾಯಿ ಚಿಹ್ನೆ ಅದರ ಪಕ್ಕದಲ್ಲಿ 75 ಎಂದು ಬರೆಯಲಾಗಿದೆ.

Tap to resize

Latest Videos

ಹೊಸ ಸಂಸತ್ ಭವನ 140 ಕೋಟಿ ಭಾರತೀಯರ ಕನಸಿನ ಪ್ರತಿಬಿಂಬ, ಬಸವಣ್ಣ ಉಲ್ಲೇಖಿಸಿ ಮೋದಿ ಭಾಷಣ!

ನಾಣ್ಯ ಹಾಗೂ ಅಂಚೆ ಚೀಟಿ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ನೂತನ ಸಂಸತ್ ಭವನ ಭಾರತದ ವೈವಿದ್ಯತೆಯ ಸಂಸ್ಕೃತಿ, ಭಾರತದ ಪ್ರಜಾಪ್ರಭುತ್ವದ ಪ್ರತಿಬಿಂಬವಾಗಿದೆ ಎಂದರು. ಭವ್ಯ ಭಾರತ ಆಧುನಿಕ ಮೂಲಸೌಕರ್ಯದ ಭಾರತವಾಗಿದೆ. ಹೊಸ ಸಂಸತ್ ಭವನದಲ್ಲಿ ಸೂರ್ಯನ ಕಿರಣ ನೇರವಾಗಿ ಒಳ ಪ್ರವೇಶಿಸುತ್ತದೆ. ಇದರಿಂದ ವಿದ್ಯುತ್ ಉಪಯೋಗ ಕಡಿಮೆ. ಅತ್ಯಾಧುನಿಕ ಗೆಜೆಟ್ ಸೇರಿದಂತೆ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

 

ನೂತನ ಸಂಸತ್‌ ಭವನ ಉದ್ಘಾಟನೆಯ ಸ್ಮರಣಾರ್ಥ ₹75 ಮುಖಬೆಲೆಯ ನಾಣ್ಯ ಬಿಡುಗಡೆ pic.twitter.com/iKnHtSX3Eq

— Asianet Suvarna News (@AsianetNewsSN)

 

ಇಂದು ಬೆಳಗ್ಗೆ ಈ ಸಂಸತ್ ನಿರ್ಮಾಣದಲ್ಲಿ ತೊಡಗಿದ ಕಾರ್ಮಿಕರನ್ನು ಭೇಟಿಯಾಗಿ ಮಾತನಾಡಿದೆ. ಸರಿಸುಮಾರು 8,000 ಕಾರ್ಮಿಕರಿಗೆ ಉದ್ಯೋಗ ಸಿಕ್ಕಿದೆ. ಇದೇ ಸಂಸತ್ತಿನಲ್ಲಿ ಅವರ ಫೋಟೋ ಗ್ಯಾಲರಿ ಮಾಡಿ ಇಢುತ್ತೇವೆ. ಭಾರತ ಅತೀ ದೊಡ್ಡ ದೇಶ, ಇಲ್ಲಿನ ವ್ಯವಸ್ಥೆ, ಚುನಾವಣೆ, ಸಂಸ್ಕೃತಿ ಎಲ್ಲವೂ ಇತರ ದೇಶಗಳಿಗೆ ಮಾದರಿಯಾಗಿದೆ ಎಂದು ಮೋದಿ ಹೇಳಿದ್ದಾರೆ.

ನಮ್ಮ ಅಭಿವೃದ್ಧಿ ನಡೆ ಇತರ ದೇಶಗಳಿಗೆ ಪ್ರೇರಣೆಯಾಗಲಿದೆ. ಯಶಸ್ಸಿನ ಮೊದಲ ಮೆಟ್ಟಿನ ವಿಶ್ವಾಸ. ಹೊಸ ಸಂಸತ್ ಭವನ ಹೊಸ ಭಾರತ ನಿರ್ಮಾಣದಲ್ಲಿ ಪ್ರೇರಣೆ ನೀಡಲಿದೆ. ಪ್ರತಿಯೊಬ್ಬರ ಭಾರತೀಯ ಕರ್ತವ್ಯವನ್ನು ಜಾಗೃತಿಗೊಳಿಸಲಿದೆ. ಹೊಸ ಪ್ರೇರಣೆಯೊಂದಿಗೆ ಪ್ರಜಾಪ್ರಭುತ್ವಕ್ಕೆ ಹೊಸ ದಿಕ್ಕು ನೀಡುವ ಪ್ರಯತ್ನಕ್ಕೆ ಪ್ರೇರಣೆಯಾಗಲಿದೆ. 

ನೂತನ ಸಂಸತ್ ಭವನ ಹೊಗಳಿದ ಶಾರುಖ್ ವಿರುದ್ಧ ಕಾಂಗ್ರೆಸ್ ಗರಂ, ಖಾನ್ ಕಿಂಗ್ ಅಲ್ಲ ಎಂದ ನಾಯಕ!

20,000 ಕೋಟಿ ರು. ವೆಚ್ಚದ ಸೆಂಟ್ರಲ್‌ ವಿಸ್ತಾ ಯೋಜನೆಯ ಭಾಗವಾಗಿ ಹೊಸ ಸಂಸತ್‌ ಭವನ ನಿರ್ಮಾಣಗೊಂಡಿದೆ. ಕಳೆದ ಮೂರು ವರ್ಷಗಳ ಹಿಂದೆ ಆರಂಭವಾಗಿದ್ದ ನಿರ್ಮಾಣದ ಕಾಮಗಾರಿಗಳು ನಿಗದಿತ ಸಮಯಕ್ಕೆ ಪೂರ್ಣಗೊಂಡಿವೆ. ಹಳೆಯ ಸಂಸತ್‌ ಭವನದ ಪಕ್ಕದಲ್ಲೇ ಅತ್ಯಾಧುನಿಕ ಸೌಕರ್ಯಗಳೊಂದಿಗೆ ಆಕರ್ಷಕ ವಾಸ್ತುವಿನ್ಯಾಸದ ಹೊಸ ಭವನ ನಿರ್ಮಾಣಗೊಂಡಿದೆ. ಇದರಲ್ಲಿ 888 ಸಂಸದರು ಆಸೀನರಾಗಬಹುದಾದ ಲೋಕಸಭೆ ಹಾಗೂ 300 ಆಸನಗಳ ರಾಜ್ಯಸಭೆ ಸಭಾಂಗಣಗಳಿವೆ. ಈಗಿನ ಸಂಸತ್‌ ಭವನದಲ್ಲಿ 543 ಆಸನಗಳ ಲೋಕಸಭೆ ಹಾಗೂ 250 ಆಸನಗಳ ರಾಜ್ಯಸಭೆಯಿದೆ. 2020ರ ಡಿ.10ರಂದು ಪ್ರಧಾನಿ ಮೋದಿ ನೂತನ ಸಂಸತ್‌ ಭವನಕ್ಕೆ ಶಂಕುಸ್ಥಾಪನೆ ಮಾಡಿದ್ದರು.

click me!