ಹೊಸ ಸಂಸತ್ ಭವನ 140 ಕೋಟಿ ಭಾರತೀಯರ ಕನಸಿನ ಪ್ರತಿಬಿಂಬ, ಬಸವಣ್ಣ ಉಲ್ಲೇಖಿಸಿ ಮೋದಿ ಭಾಷಣ!

By Suvarna NewsFirst Published May 28, 2023, 1:29 PM IST
Highlights

ಹೊಸ ಸಂಸತ್ ಭವನ ಉದ್ಘಾಟನೆ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಹೊಸ ಸಂಸತ್ ಭವನ ವಿಶೇಷತೆ, ಆಧುನಿಕ ಭಾರತದಲ್ಲಿ ಹೊಸ ಭವನ ಕೊಡುಗೆ ಹಾಗೂ ಆತ್ಮನಿರ್ಭರ ಭಾರತದ ಪ್ರತೀಕದ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ಮಹತ್ವದ ಸಂದೇಶ ಸಾರಿದ್ದಾರೆ. ಪ್ರಧಾನಿ ಮೋದಿ ಭಾಷಣದ ವಿವರ ಇಲ್ಲಿದೆ.

ನವದೆಹಲಿ(ಮೇ.28):  ಹೊಸ ಸಂಸತ್ ಭವನದಿಂದ ಪ್ರತಿಯೊಬ್ಬ ಭಾರತೀಯನ್ನು ಹೆಮ್ಮೆ ಪಡುತ್ತಿದ್ದಾನೆ. ನಮ್ಮ ವೈವಿಧ್ಯತೆಯ ಏಕತೆ ಪ್ರತಿಬಿಂಬ ಈ ಸಂಸತ್ ಭವನವಾಗಿದೆ. ರಾಜಸ್ಥಾನದ ಗ್ರಾನೈಟ್ ಸೇರಿದಂತೆ ಒಂದೊಂದು ರಾಜ್ಯದ ವಿಶೇಷೆಗಳಿಂದ ಈ ಭವನ ನಿರ್ಮಾಣ ಮಾಡಲಾಗಿದೆ ಎಂದು ಮೋದಿ ಹೇಳಿದ್ದಾರೆ. ನೂತನ ಸಂಸತ್ ಭವನ ಉದ್ಘಾಟನೆ ಬಳಿಕ ಸದನದಲ್ಲಿ ಮಾತನಾಡಿದ  ಪ್ರಧಾನಿ ಮೋದಿ, ದೇಶದ 75ನೇ ಸ್ವಾತಂತ್ರ್ಯ ಕಾಲಕಟ್ಟವನ್ನು ಭಾರತ ಅಮೃತ ಮಹೋತ್ಸವವಾಗಿ ಆಚರಿಸುತ್ತಿದೆ. ಈ ಅವಧಿಯಲ್ಲಿ ಸಂಸತ್ ಭವನ ಉದ್ಘಾಟನೆಯಾಗಿದೆ. ಇಂದು ಸಂಸತ್‌ನಲ್ಲಿ ಸರ್ವಧರ್ಮ ಪ್ರಾರ್ಥನೆ ಮಾಡಲಾಗಿದೆ. ಈ ಶುಭ ಸಂದರ್ಭದಲ್ಲಿ ಇಡೀ ಭಾರತೀಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದು ಕೇವಲ ಭವನವಲ್ಲ, ಇದು 140 ಕೋಟಿ ಭಾರತೀಯರ ಪ್ರತಿಬಿಂಬವಾಗಿದೆ. ಭಾರತದ ದೃಢಸಂಕಲ್ಪ ಸಂದೇಶ ಸಾರುವ ಮಂದಿರವಾಗಿದೆ ಎಂದು ಮೋದಿ ಹೇಳಿದ್ದಾರೆ.

ನೀತಿಯನ್ನು ನಿರ್ಮಾಣ, ಸಂಕಲ್ಪವನ್ನು ಇಚ್ಚಾಶಕ್ತಿಯನ್ನಾಗಿ ಮಾಡುವ ಭವನವಾಗಿದೆ. ಹೊಸ ಭವನ ನಮ್ಮ ಸ್ವಾತಂತ್ರ್ಯ ಸೇನಾನಿಗಳ ಕನಸನ್ನು ಸಾಕಾರಗೊಳಿಸಿದ ಭವನವಾಗಿದೆ. ಇದು ಆತ್ಮನಿರ್ಭರ ಭಾರತದ ಸಾಕ್ಷಿಯಾಗಿದೆ. ಹೊಸ ಭವನ ಅಭಿವೃದ್ಧಿ ಭಾರತದ ರೂಪವಾಗಿದೆ. ಹೊಸ ಭವನ ಹೊಸ ಹಾಗೂ ಪುರಾತನ ಅಸ್ತಿತ್ವದ ಆದರ್ಶವಾಗಿದೆ. ಹೊಸ ರಸ್ತೆಯಲ್ಲಿ ಚಲಿಸುವಾಗ ಹಲವು ಸವಾಲುಗಳು ಎದುರಾಗುತ್ತದೆ. ಇಂದು ನವ ಭಾರತ ಹೊಸ ಲಕ್ಷ್ಯವನ್ನಿಟ್ಟು ಮುನ್ನಡೆಯುತ್ತಿದೆ. ಭಾರತದಲ್ಲಿ ಹೊಸ ಜೋಶ್, ಹೊಸ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಇಂದು ಇಡೀ ವಿಶ್ವವೇ ಭಾರತವನ್ನು, ಭಾರತದ ಸಂಕಲ್ಪವನ್ನು, ಭಾರತದ ಜನಶಕ್ತಿಯನ್ನು ಅತ್ಯಂತ ವಿಶ್ವಾಸದಿಂದ ಎದುರು ನೋಡುತ್ತಿದೆ. ಭಾರತದ ಮುಂದುವರಿಯುತ್ತದೆ ಎಂದರೆ ವಿಶ್ವ ಮುನ್ನಡೆಯುತ್ತದೆ. ಹೊಸ ಸಂಸತ್ ಭವನ ಭಾರತದ ಅಭಿವೃದ್ಧಿ ಮೂಲಕ ವಿಶ್ವದ ಅಭಿವೃದ್ಧಿಗೆ ಮುನ್ನುಡಿ ಬರೆಯಲಿದೆ. ಇಂದಿನ ಐತಿಹಾಸಿಕ ಸಂದರ್ಭದಲ್ಲಿ ಹೊಸ ಸಂಸತ್ ಭವನದಲ್ಲಿ ಪವಿತ್ರ ಸೆಂಗೋಲ್ ಪ್ರತಿಷ್ಛಾಪನೆ ಮಾಡಲಾಗಿದೆ. ಚೋಳ ಸಾಮ್ರಾಜ್ಯದಲ್ಲಿ ಸೆಂಗೋಲನ್ನು ಕರ್ತವ್ಯಪಥ, ಸೇವಾಪಥ, ರಾಷ್ಟಪಥದ ಪ್ರತೀಕವಾಗಿ ಗುರುತಿಸಲಾಗಿತ್ತು. ಹಿರಿಯರು, ಸ್ವಾಮಿಜಿಗಳ ಆಶೀರ್ವಾದೊಂದಿಗೆ ಸೆಂಗೋಲ್ ಪ್ರತಿಷ್ಠಾಪಿಸಲಾಗಿದೆ. ತಮಿಳುನಾಡಿನಿಂದ ಬಂದಿರುವ ಅಧೀನಮ ಮಠದ ಸ್ವಾಮೀಜಿಗಳಿಗೆ ನಮನ ಸಲ್ಲಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ. 

ಪವಿತ್ರ ಸೆಂಗೋಲನ್ನು, ಅದರ ಮಹತ್ವ ಹಾಗೂ ಹಿರಿಮೆಗೆ ನೈಜ ಗೌರವ ನೀಡಲಾಗಿದೆ. ಈ ಸೆಂಗೋಲ್ ನಮಗೆ ಪ್ರೇರಣೆ ನೀಡಲಿದೆ. ಭಾರತ ಲೋಕತಂತ್ರದ ರಾಷ್ಟ್ರಮಾತ್ರವಲ್ಲ, ಭಾರತ ಪ್ರಜಾಪ್ರಭುತ್ವದ ತಾಯಿ. ಲೋಕತಂತ್ರ ನಮಗೆ ಕೇವಲ ಒಂದು ವ್ಯವಸ್ಥೆ ಮಾತ್ರವಲ್ಲ, ಸಂಸ್ಕಾರ, ವಿಚಾರ ಹಾಗೂ ಪರಂಪರೆಯಾಗಿದೆ. ನಮ್ಮ ವೇದದಲ್ಲಿ ಲೋಕತಾಂತ್ರಿಕ ಆದರ್ಶವಾಗಿದೆ. ಮಹಾಭಾರತದಲ್ಲಿ ಗಣ ಹಾಗೂ ಗಣತಂತ್ರದ ಉಲ್ಲೇಖವಿದೆ. ಭಗವಾನ್ ಬಸವೇಶ್ವರ ಅನುಭವ ಮಂಟಪಕ್ಕೆ ಒತ್ತು ನೀಡಿದ್ದರು. ನಮ್ಮ ಸಂವಿಧಾನ ನಮ್ಮ ಸಂಕಲ್ಪವಾಗಿದೆ. ಈ ಸಂಸತ್ ಭವನ ದೇಶದ ಸಮೃದ್ಧ ಸಂಸ್ಕತಿಯನ್ನು ಪ್ರತಿನಿಧಿಸುತ್ತದೆ ಎಂದರು.

ಗುಲಾಮಿ ಸಂಸ್ಕತಿ ಬಳಿಕ ನಮ್ಮ ಭಾರತದಲ್ಲಿ ಹೊಸ ಯಾತ್ರೆಗಳು ಆರಂಭಗೊಂಡಿದೆ. ಈ ಯಾತ್ರೆ ಅಜಾದಿಕಾ ಅಮೃತಕಾಲ ಪ್ರವೇಶಿಸಿದೆ. ಇದು ದೇಶದಕ್ಕೆ ಹೊಸ ದಿಕ್ಕು ನೀಡಿದ ಅಮೃತಕಾಲವಾಗಿದೆ. ಭಾರತದ ವಿಶ್ವದ ಅತ್ಯಂತ ಶ್ರೀಮಂತ ದೇಶವಾಗಿದ್ದ ಕಾಲವಾಗಿತ್ತು.ಸಿಂದೂ ನಗರದಿಂದ, ಚೋಳ ಸಾಮ್ರಾಜ್ಯ, ಶತ ಶತಮಾನಗಳಿಂದ ಭಾರತ ವಿಶ್ವದಲ್ಲೇ ಪ್ರಕಾಶಮಾನವಾಗಿ ಬೆಳಗಿತ್ತು. ಆದರೆ ಗುಲಾಮಿ ಪದ್ಧತಿಯಿಂದ ನಮ್ಮ ವೈಭವ ಕಳಚಿ ಬಿತ್ತು. ಇನ್ನೊಂದು ದೇಶವನ್ನು ನೋಡುವ ಕಾಲವಿತ್ತು. ಆದರೆ ಇದೀಗ ಗುಲಾಮಿ ಸಂಸ್ಕೃತಿಯನ್ನು ಬಿಟ್ಟು ಭಾರತ ಗತವೈಭವವನ್ನು ಪ್ರತಿಷ್ಠಾಪಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಸಂಸತ್ ನಿರ್ಮಾಣ ಹಲವರಿಗೆ ಉದ್ಯೋಗ ನೀಡಿದೆ. ಕಳದೆ 9 ವರ್ಷದಲ್ಲಿ ಭಾರತದಲ್ಲಿ ನವ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಸಂಸತ್ ಹೊಸ ನಿರ್ಮಾಣ ಮಾಡಿದ ಹೆಮ್ಮೆ ನಮಗಿದೆ. ಇದೇ ರೀತಿ ಕಳೆದ 9 ವರ್ಷದಲ್ಲಿ 4 ಕೋಟಿ ಬಡವರಿಗೆ ಮನೆ ನಿರ್ಮಿಸಿದ ಹೆಮ್ಮೆ ಇದೆ. 11 ಕೋಟಿ ಶೌಚಾಲಯ ನಿರ್ಮಿಸಿದೆ ಹೆಮ್ಮೆ ನನಗಿದೆ. ಕಳೆದ 9 ವರ್ಷದಲ್ಲಿ ಗ್ರಾಮಕಕ್ಕೆ ಸಂಪರ್ಕ ಕಲ್ಪಿಸುವಲ್ಲಿ 4 ಲಕ್ಷ ಕಿಲೋಮೀಟರ್ ರಸ್ತೆ ನಿರ್ಮಾಣ ಮಾಡಲಾಗಿದೆ. 50,000ಕ್ಕೂ ಅಮೃತ ಸರೋವರ ಪುನರುಜ್ಜೀವನಗೊಳಿಸಿದ್ದೇವೆ. ನಾವು ದೇಶದಲ್ಲಿ 30,000ಕ್ಕೂ ಹೆಚ್ಚು ಪಂಚಾಯತ್ ಭವನ ನಿರ್ಮಾಣಮಾಡದ್ದೇವೆ. ಪಂಚಾಯತ್ ಭವನದಿಂದ ಸಂಸತ್ ಭವನದವರೆಗೆ ನಮ್ಮ ನಿಷ್ಠೆ, ನಮ್ಮ ಪ್ರೇರಣೆ ಒಂದೇ ಅದು ದೇಶದ ಅಭಿವೃದ್ಧಿ ಹಾಗೂ ದೇಶದ ಜನರ ಅಭಿವೃದ್ಧಿ ಎಂದು ಮೋದಿ ಹೇಳಿದ್ದಾರೆ.

ಆಗಸ್ಟ್ 15 ರಂದು ಕೆಂಪು ಕೋಟೆ ಮೇಲೆ ನಿಂತು ನಾನು ಹೇಳಿದ್ದೆ. ಇದು ಸಮಯ, ಇದೇ ಸರಿಯಾದ ಸಮಯ. ಭಾರತದ ಸ್ವಾತಂತ್ರ್ಯಕ್ಕಿಂತ ಮೊದಲು ಇದೇ ರೀತಿಯ ಸಮಯ ಬಂದಿತ್ತು. ಗಾಂಧೀಜಿ ಇಡೀ ದೇಶದಲ್ಲಿ ಆಂದೋಲನ ಮೂಲಕ ಇಡೀ ದೇಶದ ವಿಶ್ವಾಸಗಳಿಸಿದ್ದರು. ಇಡೀ ಭಾರತವನ್ನು ಒಗ್ಗೂಡಿಸಿದ್ದರು. ಇದರಿಂದ 1947ರಲ್ಲಿ ನಮಗೆ ಸ್ವಾತಂತ್ರ್ಯ ಬಂದಿತು. ಇದೀಗ ಆಜಾದಿಕಾ ಅಮೃತಕಾಲ ಕೂಡ ಇದೇ ರೀತಿಯ ಕಾಲಘಟ್ಟವಾಗಿದೆ. ಮುಂದಿನ 25 ವರ್ಷದ ಬಳಿಕ ಭಾರತ ಸ್ವಾತಂತ್ರ್ಯದ 100ನೇ ಸಂಭ್ರಮಾಚರಣೆ ಮಾಡುತ್ತೇವೆ. ಮುಂದಿನ 25 ವರ್ಷದಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದೆ ರಾಷ್ಟ್ರಮಾಡಬೇಕು. ಗುರಿ ದೊಡ್ಡದಾಗಿದೆ. ಜೊತೆಗೆ ಕಠಿಣವಾಗಿದೆ. ಆದರೆ ದೇಶದ ಜನರ ಸಂಕಲ್ಪ ತೊಟ್ಟಿದ್ದಾರೆ. ಹೀಗಾಗಿ ಇದು ಸಾಧ್ಯ ಎಂದು ಮೋದಿ ಹೇಳಿದ್ದಾರೆ. 

 

ಪ್ರಧಾನಿ ಮೋದಿಯಿಂದ ಹೊಸ ಸಂಸತ್‌ ಭವನ ಲೋಕಾರ್ಪಣೆ, ನೂತನ ಸಂಸತ್‌ ಭವನದಲ್ಲಿ ರಾಜದಂಡ ಪ್ರತಿಷ್ಠಾಪನೆ pic.twitter.com/WAyg2o0Q0c

— Asianet Suvarna News (@AsianetNewsSN)

 

click me!