ರಕ್ಷಾ ಬಂಧನ ಹಬ್ಬಕ್ಕೆ ದಿನಗಣನೆ| ಪ್ರಧಾನಿ ನರೇಂದ್ರ ಮೋದಿಗೆ ರಾಖಿ ಕಳುಹಿಸಿದ ಪಾಕಿಸ್ತಾನದ ಕಮರ್ ಮೊಹ್ಸಿನ್ ಶೇಖ್| ಭಾರತೀಯನನ್ನು ಮದುವೆಯಾಗಿರುವ ಪಾಕಿಸ್ತಾನ ಮೂಲದ ಶೇಖ್
ನವದೆಹಲಿ(ಆ.01): ಅಣ್ಣ-ತಂಗಿಯರ ಬಾಂಧವ್ಯದ ಪ್ರತೀಕವಾಗಿರುವ ರಕ್ಷಾ ಬಂಧನ ಹಬ್ಬಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನದ ಕಮರ್ ಮೊಹ್ಸಿನ್ ಶೇಖ್ ರಾಖಿ ಕೊಟ್ಟು ಕಳುಹಿಸಿದ್ದಾರೆ. ಕೊರೋನಾ ಹಿನ್ನೆಲೆ ಭಾರತಕ್ಕೆ ಬಂದು ತನ್ನ ಕೈಯಾರೆ ಮೋದಿಗೆ ರಾಖಿ ಕಟ್ಟಲು ಸಾಧ್ಯವಾಗದಕ್ಕೆ ಬೇಸರ ವ್ಯಕ್ತಪಡಿಸಿದ್ದು, ಅಂಚೆ ಮೂಲಕವೇ ಕಳುಹಿಸಿದ್ದಾರೆ.
ಪ್ರಧಾನಿ ಮೋದಿಗೆ 501 ರಾಖಿ ಮತ್ತು ಮಾಸ್ಕ್ ಕಳಿಸಿದ ವೃಂದಾವನದ ಸಹೋದರಿ..!
ಭಾರತೀಯನನ್ನು ಮದುವೆಯಾಗಿರುವ ಪಾಕಿಸ್ತಾನ ಮೂಲದ ಶೇಖ್ ಗುಜರಾತ್ನ ಅಹಮದಾಬಾದ್ನಲ್ಲಿ ನೆಲೆಸಿದ್ದಾರೆ. ಅಲ್ಲದೇ ಕಳೆದ 25 ವರ್ಷಗಳಿಂದಲೂ ಈ ಮಹಿಳೆ ಪ್ರಧಾನಿ ಮೋದಿ ಅವರಿಗೆ ರಾಖಿಯನ್ನು ರವಾನಿಸುತ್ತಿದ್ದಾರೆ. ಈ ಬಾರಿ ಮೋದಿ ಅವರು ಕರೆದರೆ, ಭಾರತಕ್ಕೆ ಬಂದು ಮೋದಿ ಅವರಿಗೆ ರಾಖಿ ಕಟ್ಟುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಕೊರೋನಾತಂಕದಿಂದ ಇದು ಸಾಧ್ಯವಾಗಿಲ್ಲ.
ರಕ್ಷಾ ಬಂಧನಕ್ಕೆ ತಯಾರಿ, ಚೀನಾ ರಾಖಿಗಿಲ್ಲ ಬೇಡಿಕೆ!
ಕಳೆದ ವರ್ಷ ದಿಲ್ಲಿಗೆ ಬಂದು ರಾಖಿ ಕಟ್ಟಿದ್ದ ಪಾಕಿಸ್ತಾನ ಮಹಿಳೆ ಖ್ವಾಮರ್ ಶೇಖ್, ‘ಪ್ರತೀ ವರ್ಷಕ್ಕೊಮ್ಮೆ ನನ್ನ ದೊಡ್ಡಣ್ಣನಿಗೆ ರಾಖಿ ಕಟ್ಟುವ ಅವಕಾಶ ಪಡೆದಿದ್ದೇನೆ. ಪ್ರಧಾನಿ ಮೋದಿ ಅವರು ಕೈಗೊಂಡ ಧನಾತ್ಮಕ ನಿರ್ಧಾರಗಳನ್ನು ಇಡೀ ವಿಶ್ವವೇ ಗುರುತಿಸಲಿದೆ’ ಎಂದು ಹೇಳಿದ್ದರು.