ದೆಹಲಿ ಸಿಎಂ ಅರವಿಂದ್ ಕೇಜ್ರೀವಾಲ್‌ಗೆ ಹೊಸ ಟೆನ್ಶನ್| ಸೋಂಕು ಇಳಿಕೆಯಾಗುತ್ತಿದ್ದರೂ ಸಾವಿನ ಪ್ರಮಾಣ ಏರಿಕೆ| ಮಿಲಿಯನ್ ಡಾಲರ್ ಪ್ರಶ್ನೆಗೆ ತಜ್ಞರ ಬಳಿಯೂ ಉತ್ತರವಿಲ್ಲ.
ಡೆಲ್ಲಿ ಮಂಜು
ನವದೆಹಲಿ(ಆ.01): ನಿಲ್ಲುತ್ತಿಲ್ಲ ಸಾವು..! ಕೇಜ್ರಿವಾಲ್ ಸಾಹೇಬರಿಗೆ ಸವಾಲಾಗುತ್ತಿರುವ ಬಹು ದೊಡ್ಡ ಸಮಸ್ಯೆ ಇದಾಗಿದೆ. ನಿಲ್ಲುವುದು ಇರಲಿ, ಸಾವು ಕಡಿಮೆಯಾದರೆ ಸಾಕು ಅನ್ನೋದು ಈಗ ದೆಹಲಿ ಸರ್ಕಾರದ ಮನಸ್ಥಿತಿ. ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಆದ್ರೆ ಸಾವಿನ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿಲ್ಲ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಡೆಲ್ಲಿ ತಜ್ಞ ರಿಂದ ಇನ್ನೂ ಉತ್ತರ ಸಿಗುತ್ತಿಲ್ಲ. ಜೊತೆ ಕಾರಣಗಳು ಕೂಡ ಸದ್ಯ ತಿಳಿಯುತ್ತಿಲ್ಲ.
undefined
ಸಾವಿನ ಪ್ರಮಾಣ ಜಾಸ್ತಿ : ಇಡೀ ಭಾರತದ ಸಾವಿನ ಪ್ರಮಾಣ ಶೇ. 2.18 ಇದ್ರೆ ರಾಷ್ಟ್ರ ರಾಜಧಾನಿಯಲ್ಲಿ ಶೇ.2.93 ಇದೆ. ಹೊಸ ಕೇಸುಗಳು ದಾಖಲಾಗುತ್ತಿರುವ ಕಡೆಯಿಂದ ದೆಹಲಿಯನ್ನು ನೋಡಿದ್ರೆ ಭಾರತದಲ್ಲಿ 16 ನೇ ಸ್ಥಾನದಲ್ಲಿದೆ. ಸಾವಿನ ಪ್ರಕರಣಗಳ ಸಾಲಿನಲ್ಲಿ ಏಳನೇ ಸ್ಥಾನ ಪಡೆದುಕೊಂಡಿದೆ.
ಒಂದು ಪತ್ರ ಬರೆದರೆ ಸಾಕು 5 ಸಾವಿರ ಬೆಡ್ ಸಿಗ್ತಾವೆ: ರಾಜ್ಯ ಸರ್ಕಾರ ಈ ಕಡೆ ಒಮ್ಮೆ ನೋಡಲೇಬೇಕು!
ಜೂನ್ ಮತ್ತು ಜುಲೈ ಆರಂಭದಲ್ಲಿ ನಿತ್ಯ ನಾಲ್ಕ ರಿಂದ ಐದು ಸಾವಿರ ತನಕ ವರದಿಯಾಗುತ್ತಿದ್ದ ಪ್ರಕರಣಗಳು ಈಗ ಒಂದು ಸಾವಿರಕ್ಕೆ ಬಂದು ನಿಂತಿದೆ. ಜುಲೈ ಅಂತ್ಯದ ವಾರದಲ್ಲಿ ಎರಡು ಬಾರಿ ಸೋಂಕಿತರ ಸಂಖ್ಯೆ ಸಾವಿರದ ಒಳಗಡೆ ಕೂಡ ಬಂದಿತ್ತು. ಇದಕ್ಕೆ ಆರೋಗ್ಯ ಸೌಕರ್ಯಗಳು ಒದಗಿಸಿದ್ದು ಕಾರಣ ಎಂದರೂ, ನಿತ್ಯ 20 ಸಾವಿರ ಮಂದಿಗೆ ಟೆಸ್ಟ್ ಮಾಡುತ್ತಿರುವುದು ಎಂದರೂ, ವೈರಸ್ ಹರಡುವ ಸಾಮರ್ಥ್ಯ ಕಳೆದುಕೊಂಡಿದೆ ಎಂದರೂ ಅಥವಾ ಕೊರೊನಾ ಪೀಕ್ ವೇವ್ ಡೆಲ್ಲಿ ಕ್ರಾಸ್ ಆಗಿದೆ ಎಂದು ಹೇಳಿ. ಹೀಗೆ ನಾನಾ ಕಾರಣಗಳ ಅಡಿ ಸೋಂಕಿತರ ಪ್ರಕರಣಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆ. ಆದ್ರೆ ಸಾವು ಮಾತ್ರ ನಿಲ್ಲುತ್ತಿಲ್ಲ.
ದಿಲ್ಲಿ: ಅಮಿತ್ ಶಾ ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು, ದಿಲ್ಲೀಲಿ ಕುಸಿದ ಕೊರೋನಾ ಸೋಂಕು
ನಾಲ್ಕು ಸಾವಿರ ಸಮೀಪ : ಇವತ್ತಿನ ಹೆಲ್ತ್ ಬುಲೆಟಿನ್ ಬಂದ್ರೆ ಬಲಿ ಕಾಲಂ ನಲ್ಲಿ ಹೆಚ್ಚು ಕಡಿಮೆ ನಾಲ್ಕು ಸಾವಿರದ ಸಂಖ್ಯೆ ಇವತ್ತು ನಮೂದಾಗಿರುತ್ತದೆ. ನಿತ್ಯ ಸರಾಸರಿ 25 ರಿಂದ 30 ಮಂದಿ ಬಲಿಯಾಗುತ್ತಲೇ ಇದ್ದಾರೆ. ಇದು ದೆಹಲಿಯ ಸರ್ಕಾರಕ್ಕೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. 11 ಸಾವಿರ ಬೆಡ್ ಖಾಲಿ ಇದೆ. ಸೋಂಕಿತ ಕರೆ ಮಾಡಿದ ಒಂದೆರಡು ಗಂಟೆಯಲ್ಲೇ ಆಂಬ್ಯೂಲೆನ್ಸ್ ಬರುತ್ತೆ. ಆದ್ರೆ ಸೋಂಕಿತರ ಪ್ರಾಣ ಮಾತ್ರ ಯಮಲೋಕದ ದಾರಿಯಲ್ಲಿ ಇರುತ್ತೆ ಎನ್ನುವುದೇ ಅಚ್ಚರಿ ಮತ್ತು ಆತಂಕದ ಪ್ರಶ್ನೆಯಾಗಿದೆ.